HomeUncategorizedಗಾಝಾ: ಅಲ್ ಶಿಫಾ ಆಸ್ಪತ್ರೆಯ ಆವರಣದಲ್ಲಿ 179 ಜನರ ಸಾಮೂಹಿಕ ಸಮಾಧಿ

ಗಾಝಾ: ಅಲ್ ಶಿಫಾ ಆಸ್ಪತ್ರೆಯ ಆವರಣದಲ್ಲಿ 179 ಜನರ ಸಾಮೂಹಿಕ ಸಮಾಧಿ

- Advertisement -
- Advertisement -

ಗಾಝಾದ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯಲ್ಲಿ ಶಿಶುಗಳು ಸೇರಿದಂತೆ 179 ಜನರನ್ನು ಆಸ್ಪತ್ರೆಯ ಆವರಣದೊಳಗೆ ಸಾಮೂಹಿಕ ಸಮಾಧಿ ಮಾಡಲಾಗಿದೆ ಎಂದು ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯಲ್ಲಿನ ಮಾನವೀಯ ಬಿಕ್ಕಟ್ಟನ್ನು ಅಬು ಸಲ್ಮಿಯಾ ಒತ್ತಿಹೇಳಿದ್ದು, ನಾವು ಅವರನ್ನು ಸಾಮೂಹಿಕವಾಗಿ ಸಮಾಧಿ ಮಾಡಿದ್ದೇವೆಂದು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಇಂಧನ ಕೊರತೆ ನಂತರ ತೀವ್ರ ನಿಗಾ ಘಟಕದಲ್ಲಿ 7 ಶಿಶುಗಳು ಮತ್ತು 29 ಇತರರು ಮೃತಪಟ್ಟಿದ್ದು ಅವರನ್ನು ಕೂಡ ಆಸ್ಪತ್ರೆ ಕಾಂಪ್ಲೆಕ್ಸ್‌ನಲ್ಲಿ ಸಮಾಧಿ ಮಾಡಲಾಗಿದೆ.

ಪತ್ರಕರ್ತರೊಬ್ಬರು, ಕೊಳೆತ ದೇಹಗಳ ದುರ್ನಾತ ಎಲ್ಲೆಡೆ ಹರಡಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ವೈದ್ಯರೋರ್ವರು ಅಪರಿಸ್ಥಿತಿಯನ್ನು ಅಮಾನವೀಯ ಎಂದು ಕರೆದಿದ್ದು, ವಿದ್ಯುತ್, ನೀರು, ಆಹಾರ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ ಶಿಫಾ ಆಸ್ಪತ್ರೆಯು ಗಾಝಾ ನಗರದ ಅತಿದೊಡ್ಡ ಆಸ್ಪತ್ರೆಯಾಗಿದೆ. ಇಸ್ರೇಲ್‌ ಪಡೆ ಇದೀಗ ಆಸ್ಪತ್ರೆಯ ಗೇಟ್‌ನ್ನು ಸುತ್ತುವರಿದಿದೆ. ಆಸ್ಪತ್ರೆಯ ಆವರಣದ ಬಳಿ ಇಸ್ರೇಲ್‌ ದಾಳಿ ಬಳಿಕ ಆಸ್ಪತ್ರೆಗೆ ವಿದ್ಯುತ್‌ ಕೊರತೆ  ಉಂಟಾಗಿದೆ. ಆಮ್ಲಜನಕದ ಕೊರತೆಯಿಂದ ನವಜಾತ ಶಿಶುಗಳ ಸಾವು ಸಂಭವಿಸಿದೆ. ಐಸಿಯು ಘಟಕಗಳ ಸ್ಥಗಿತದಿಂದ ಅಪಾರ ಸಾವುಗಳು ಸಂಭವಿಸಿದೆ.

ರೋಗಿಗಳು, ಸಿಬ್ಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರು ಸೇರಿದಂತೆ 10,000 ಕ್ಕೂ ಹೆಚ್ಚು ಜನರು ಅಲ್ ಶಿಫಾದೊಳಗೆ ಇರಬಹುದು ಎನ್ನಲಾಗಿದೆ. ಆದರೆ ಆಸ್ಪತ್ರೆ ಸುತ್ತ ಇಸ್ರೇಲ್‌ ಪಡೆಗಳು ಆವರಿಸಿದ ಕಾರಣ ತೆರವಿಗೆ ಸಮಸ್ಯೆಯಾಗಿದೆ.

ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಬೇಕಿದೆ ಮತ್ತು ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ರೋಗಿಗಳು, ಸಿಬ್ಬಂದಿ ಮತ್ತು ಇತರ ನಾಗರಿಕರನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿ ತಿಳಿಸಿದೆ.

ಈ ಮಧ್ಯೆ ಶಿಶುಗಳನ್ನು ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ಇಸ್ರೇಲ್ ವಾಗ್ದಾನ ಮಾಡಿತ್ತು. ಅದು ಇಲ್ಲಿಯವರೆಗೆ  ನಡೆದಿಲ್ಲ.

ಇಂದು ಮುಂಜಾನೆ ಅಲ್ ಶಿಫಾ ಆಸ್ಪತ್ರೆಯಿಂದ ಹೃದಯ ವಿದ್ರಾಹಕ ಚಿತ್ರಗಳು ವೈರಲ್‌ ಆಗಿದೆ. 7 ಶಿಶುಗಳನ್ನು ಒಟ್ಟಿಗೆ  ಹಸಿರು ಬಟ್ಟೆ ಹೊದಿಸಿ ಇರಿಸಲಾಗಿತ್ತು. ಶಿಶುಗಳನ್ನು ಐಸಿಯುನ ಬದಲು ವಿದ್ಯುತ್‌ ಇಲ್ಲದ ಕಾರಣ ಸಾಮಾನ್ಯ ಹಾಸಿಗೆಗಳಲ್ಲಿ ಇರಿಸಿದ ಕಾರಣ ಮೃತಪಟ್ಟಿತ್ತು.

ಗಾಝಾದಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಇಸ್ರೇಲ್‌ ಈವರೆಗೆ ನಡೆಸಿದ ದಾಳಿಯಲ್ಲಿ  ಈಗಾಗಲೇ 11,240 ಜನರ ಹತ್ಯೆ ನಡೆದಿದೆ. ಇದರಲ್ಲಿ 40%ದಷ್ಟು ಮಕ್ಕಳು ಇದ್ದಾರೆ. ಹಮಾಸ್‌ ಇಸ್ರೇಲ್‌ ಮೇಲೆ ಅ.7ರಂದು ನಡೆಸಿದ ರಾಕೆಟ್‌ ದಾಳಿಗೆ 1,200 ಮಂದಿ ಮೃತಪಟ್ಟಿದ್ದು, 200 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ.

ಇದನ್ನು ಓದಿ: ದಲಿತರಿಗೆ ಬಿಜೆಪಿಯಲ್ಲಿ ಅವಕಾಶ ಸಿಗುವುದಿಲ್ಲ: ಅಸಮಾಧಾನ ಹೊರಹಾಕಿದ ಬಿಜೆಪಿ ಸಂಸದ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...