Homeಮುಖಪುಟಗಾಜಾದಲ್ಲಿ ವೈದ್ಯಕೀಯ ನೆರವು ಅಗತ್ಯವಿದೆ: ಅಲ್-ಅಹ್ಲಿ ಅರಬ್ ಆಸ್ಪತ್ರೆ

ಗಾಜಾದಲ್ಲಿ ವೈದ್ಯಕೀಯ ನೆರವು ಅಗತ್ಯವಿದೆ: ಅಲ್-ಅಹ್ಲಿ ಅರಬ್ ಆಸ್ಪತ್ರೆ

- Advertisement -
- Advertisement -

ಹೆಚ್ಚುತ್ತಿರುವ ರೋಗಿಗಳ ಹೊರೆಯನ್ನು ನಿಭಾಯಿಸಲು ವೈದ್ಯಕೀಯ ನೆರವು, ಶಸ್ತ್ರಚಿಕಿತ್ಸಕರು, ದಾದಿಯರು, ಎಕ್ಸ್-ರೇ ತಂತ್ರಜ್ಞರು ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞರನ್ನು ತಕ್ಷಣದ ಪೂರೈಕೆ ಮಾಡಬೇಕು ಎಂದು ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ವೈದ್ಯರು ಭಾನುವಾರ ಮನವಿ ಮಾಡಿದ್ದಾರೆ.

ಕಳೆದ ವಾರ ಇಸ್ರೇಲಿ ದಾಳಿಯಿಂದಾಗಿ ಎರಡು ದೊಡ್ಡ ಆಸ್ಪತ್ರೆಗಳಾದ ಅಲ್-ಶಿಫಾ ಮತ್ತು ಅಲ್-ಕುದ್ಸ್ – ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಅಲ್-ಅಹ್ಲಿಯಲ್ಲಿ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ.

ಅಕ್ಟೋಬರ್ 17 ರಂದು, ಅಲ್-ಅಹ್ಲಿ ಆಸ್ಪತ್ರೆಯು ಸಹ ಬಾಂಬ್ ದಾಳಿಗೆ ತುತ್ತಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಸಂಭವಿಸಿದ್ದವು. ಆದರೆ ಅದು ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಆರಂಭಿಸಿತು.

ಆಸ್ಪತ್ರೆಯ ಮೂಳೆಚಿಕಿತ್ಸಕ ವಿಭಾಗದ ಮುಖ್ಯಸ್ಥ ಡಾ.ಫಾಡೆಲ್ ನೈಮ್ ಅವರು, ಮಾಧ್ಯಮಗಳಿಗೆ ವಾಟ್ಸಾಪ್ ಮೂಲಕ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ. ”ಇದೀಗ, ಕಾರ್ಯನಿರ್ವಹಿಸುತ್ತಿರುವ ಏಕೈಕ ಆಸ್ಪತ್ರೆ ಅಲ್-ಅಹ್ಲಿ ಆಸ್ಪತ್ರೆ, ಹಾಗಾಗಿ ನಾವು ಹೆಚ್ಚಿನ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಬೇಕಾಗಿದೆ” ಎಂದು ಹೇಳಿದ್ದಾರೆ. ಈ ಧ್ವನಿ ಸಂದೇಶದಲ್ಲೂ ಬಾಂಬ್ ಸ್ಫೋಟದ ಸದ್ದು ಕೇಳಿಸಿದೆ.

”ನಮ್ಮದು ಒಂದು ಸಣ್ಣ ಆಸ್ಪತ್ರೆಯಾಗಿದ್ದು ಹೆಚ್ಚಿನ ಸೌಲಭ್ಯಗಳು ಬೇಕಿದೆ. ನಾವು ಈಗ ಅಗತ್ಯಕ್ಕೆ ಸರಿಹೊಂದುವಂತೆ ನಮ್ಮನ್ನು ಮಾರ್ಪಡಿಸಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಅಲ್ ಅಹ್ಲಿ ಆಸ್ಪತ್ರೆಯನ್ನು ಸರ್ಕಾರೇತರ ಸಂಸ್ಥೆಯು ನಿರ್ವಹಿಸುತ್ತದೆ. ಮಕ್ಕಳ, ಮೂಳೆಚಿಕಿತ್ಸೆ, ಇಎನ್‌ಟಿ, ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಸ್ತ್ರೀರೋಗ ಶಾಸ್ತ್ರದಂತಹ ಸೀಮಿತ ವಿಶೇಷತೆಗಳನ್ನು ಹೊಂದಿದೆ. ಆಸ್ಪತ್ರೆಯು ವಿಶೇಷ ಶಸ್ತ್ರಚಿಕಿತ್ಸಕರನ್ನು ಹೊಂದಿಲ್ಲ.

”ಅನೇಕ ಗಾಯಾಳುಗಳು ಬರುತ್ತಿದ್ದಾರೆ. ಆಸ್ಪತ್ರೆಗೆ ರಕ್ತದ ಪೂರೈಕೆಯ ಅವಶ್ಯಕತೆಯಿದೆ. ಸೆಂಟ್ರಲ್ ಬ್ಲಡ್ ಬ್ಯಾಂಕ್ ಅಲ್-ಶಿಫಾ ಆಸ್ಪತ್ರೆಯ ಗಾಜಾದ ಪಶ್ಚಿಮ ಭಾಗದಲ್ಲಿದೆ. ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ನಾವು ಅಲ್ಲಿಗೆ ಹೋಗಲು ಹಲವು ಬಾರಿ ಪ್ರಯತ್ನಿಸಿದೆವು, ಆದರೆ ಇಸ್ರೇಲಿಗಳು ಗುಂಡು ಹಾರಿಸಿದರು” ಎಂದು ಹೇಳಿದರು.

”ಆಸ್ಪತ್ರೆಯಲ್ಲಿ ರೋಗಿಗಳು ರಕ್ತಸ್ರಾವದ ಪರಿಸ್ಥಿತಿಯಲ್ಲಿದ್ದಾರೆ. ರಕ್ತ ವರ್ಗಾವಣೆಯ ಅಗತ್ಯವಿದೆ. ರಕ್ತದ ಕೊರತೆಯಿಂದ ಕೆಲವು ರೋಗಿಗಳು ಈಗಾಗಲೇ ಸಾವನ್ನಪ್ಪಿದ್ದಾರೆ” ಎಂದು ಅವರು ಹೇಳಿದರು.

”ಜೀವ ಉಳಿಸದ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯು ಮುಂದೂಡುತ್ತಿದೆ. ಹೆಚ್ಚಿನ ಗಾಯಾಳುಗಳಿಗೆ ಮೂಳೆಚಿಕಿತ್ಸೆಯ ಕಾರ್ಯವಿಧಾನಗಳ ಅಗತ್ಯವಿರುತ್ತದೆ ಮತ್ತು ಜೀವ ಉಳಿಸುವ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲ” ಎಂದು ನೈಮ್ ಹೇಳಿದರು.

”ಹೆಚ್ಚಿನ ಆರೋಗ್ಯ ಸಿಬ್ಬಂದಿ ವಾರಗಟ್ಟಲೆ ತಮ್ಮ ಕುಟುಂಬವನ್ನು ಭೇಟಿ ಮಾಡಿಲ್ಲ. ನನ್ನ ಕುಟುಂಬವನ್ನು ನಾನು ಕೊನೆಯದಾಗಿ ಮೂರು ವಾರಗಳ ಹಿಂದೆ ನೋಡಿದೆ. ಅವರ ಕುಟುಂಬವು ಗಾಜಾದ ದಕ್ಷಿಣ ಭಾಗದಲ್ಲಿ ನಿರಾಶ್ರಿತರ ಶಿಬಿರದಲ್ಲಿದೆ” ಎಂದರು.

”ನಾವು ದಕ್ಷಿಣ ಭಾಗಕ್ಕೆ ಹೋದರೆ, ಉತ್ತರಕ್ಕೆ ಹಿಂತಿರುಗುವುದು ಅಪಾಯಕಾರಿ. ಆದ್ದರಿಂದ ನಮ್ಮಲ್ಲಿ ಹೆಚ್ಚಿನವರು ಹೋಗದಿರಲು ನಿರ್ಧರಿಸಿದ್ದೇವೆ ಮತ್ತು ನಾವು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿರುತ್ತೇವೆ” ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ 500 ಕ್ಕೂ ಹೆಚ್ಚು ಗಾಯಗೊಂಡಿರುವವರಿದ್ದಾರೆ. ಕೇವಲ ಮೂರು ಶಸ್ತ್ರಚಿಕಿತ್ಸಕರು ಮತ್ತು ಇಬ್ಬರು ಅರಿವಳಿಕೆ ತಜ್ಞರಿದ್ದಾರೆ ಎಂದು ಅಲ್ ಅಹ್ಲಿಯ ಪ್ಲಾಸ್ಟಿಕ್ ಸರ್ಜನ್ ಡಾ ಘಸನ್ ಅಬು ಸಿಟ್ಟಾ ಅಲ್ ಜಜೀರಾಗೆ ತಿಳಿಸಿದರು.

ಇದನ್ನೂ ಓದಿ: ಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು: ಜೋ ಬೈಡನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...