Homeಮುಖಪುಟಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ವಂಚಕ ಮೆಹುಲ್ ಚೋಕ್ಸಿ ಹೆಸರು ಕೈ ಬಿಟ್ಟ ಇಂಟರ್‌ಪೋಲ್‌; ಮೌನವಹಿಸಿದ ಸಿಬಿಐ

ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ವಂಚಕ ಮೆಹುಲ್ ಚೋಕ್ಸಿ ಹೆಸರು ಕೈ ಬಿಟ್ಟ ಇಂಟರ್‌ಪೋಲ್‌; ಮೌನವಹಿಸಿದ ಸಿಬಿಐ

- Advertisement -
- Advertisement -

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,000 ಕೋಟಿ ರೂ. ವಂಚಿಸಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಹೆಸರನ್ನು ಇಂಟರ್‌ಪೋಲ್‌ ತನ್ನ ಮೋಸ್ಟ್‌ ವಾಂಟೆಡ್‌ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಾಯಿ ಮುಚ್ಚಿಕೊಂಡಿದೆ. ಈ ಬಗ್ಗೆ ಸಿಬಿಐ ಮತ್ತು ಅವರ ಕಾನೂನು ತಂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

ಏನಿದು ಇಂಟರ್‌ಪೋಲ್‌?

ವಿಶ್ವಾದ್ಯಂತ 195 ಸದಸ್ಯ ದೇಶಗಳನ್ನು ಇದು ಹೊಂದಿದ್ದು, ಆ ದೇಶದ ಕಾನೂನು ಜಾರಿ ಸಂಸ್ಥೆಗಳಿಗೆ ಸಹಾಯ ಮಾಡಲು ನಾಪತ್ತೆಯಾದ ವಂಚಕರನ್ನು ಹಸ್ತಾಂತರ, ಶರಣಾಗತಿ ಅಥವಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಮತ್ತು ತಾತ್ಕಾಲಿಕವಾಗಿ ಬಂಧಿಸುವ ಕೆಲಸವನ್ನು ಇಂಟರ್‌ಪೋಲ್ ಮಾಡುತ್ತದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಬೆಳಕಿಗೆ ಬರುವ ಮುನ್ನ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಕೋರಿಕೆ ಅನ್ವಯ 2018ರ ಡಿಸೆಂಬರ್‌ನಲ್ಲಿ ಅವರ ವಿರುದ್ಧ ಇಂಟರ್‌ಪೋಲ್‌ ಅರೆಸ್ಟ್‌ ವಾರಂಟ್‌ ಜಾರಿ ಮಾಡಿತ್ತು. ಭಾರತದಿಂದ ಓಡಿಹೋದ ಚೋಕ್ಸಿ, ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಆಶ್ರಯ ಪಡೆಯಲು ಸುಮಾರು 10 ತಿಂಗಳ ನಂತರ ಅವರು ಪೌರತ್ವವನ್ನು ಪಡೆದಿದ್ದರು.

ಚೋಕ್ಸಿ ವಿರುದ್ಧ ಮೋಸ್ಟ್ ವಾಂಟೆಡ್ ನೋಟಿಸ್ ಜಾರಿ ಮಾಡುವಂತೆ ಕೋರಿ ಸಿಬಿಐ ಅರ್ಜಿ ಸಲ್ಲಿಸಿತ್ತು. ಇದನ್ನು ಚೋಕ್ಸಿ ಪ್ರಶ್ನಿಸಿದ್ದು, ಈ ಪ್ರಕರಣವನ್ನು ರಾಜಕೀಯ ಪಿತೂರಿ ಎಂದು ಕರೆದಿದ್ದಾರೆ. ಭಾರತದಲ್ಲಿನ ಜೈಲು ಪರಿಸ್ಥಿತಿಗಳು, ಅವರ ವೈಯಕ್ತಿಕ ಸುರಕ್ಷತೆ ಮತ್ತು ಆರೋಗ್ಯದ ವಿಷಯಗಳಿಗೆ ಅನಾನುಕೂಲ ತರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದರು ಎಂದು ಮೂಲಗಳು ಹೇಳಿವೆ.

ಈ ವಿಷಯವು ಐದು ಸದಸ್ಯರ ಇಂಟರ್‌ಪೋಲ್ ಸಮಿತಿಯ ನ್ಯಾಯಾಲಯಕ್ಕೆ ಹೋಗಿದ್ದು, ಅವರ ವಾದಗಳನ್ನು ತಿರಸ್ಕರಿಸಿ ಮೋಸ್ಟ್ ವಾಂಟೆಡ್ ನೋಟಿಸ್‌ನ್ನು ತೆರವುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಹಗರಣದಲ್ಲಿ ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಇಬ್ಬರನ್ನೂ ಸಿಬಿಐ ಪ್ರತ್ಯೇಕವಾಗಿ ಚಾರ್ಜ್ ಶೀಟ್ ಮಾಡಿದೆ.

ಸಿಬಿಐ ತನ್ನ ಚಾರ್ಜ್ ಶೀಟ್‌ಗಳಲ್ಲಿ, ಚೋಕ್ಸಿ 7,080.86 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಿತ್ತು, ಇದು 13,000 ಕೋಟಿ ರೂ.ಗೂ ಅಧಿಕ ವಂಚನೆಯಾಗಿದ್ದು, ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣವಾಗಿದೆ. ನೀರವ್ ಮೋದಿ 6,000 ಕೋಟಿ ರೂ. ವಂಚಿಸಿದ್ದಾರೆ. ಚೋಕ್ಸಿಯ ಕಂಪನಿಗಳಿಗೆ 5,000 ಕೋಟಿ ರೂ.ಗೂ ಅಧಿಕ ಸಾಲದ ಸುಸ್ತಿದಾರರ ಪ್ರಕರಣವೂ ಸಿಬಿಐ ಅಡಿಯಲ್ಲಿ ತನಿಖೆಯ ಹಂತದಲ್ಲಿದೆ.

ಮೇ 2021ರಲ್ಲಿ ಬಾರ್ಬುಡಾ ನೆರೆಯ ಡೊಮಿನಿಕಾದಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಚೋಕ್ಸಿಯನ್ನು ಅಲ್ಲಿ ಅಕ್ರಮ ಪ್ರವೇಶಕ್ಕಾಗಿ ಅವರನ್ನು ಬಂಧಿಸಲಾಯಿತು.

ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿದೆ ಎಂಬ ಸುದ್ದಿ ಹೊರಬಿದ್ದ ನಂತರ, ಭಾರತವು ಸಿಬಿಐ ಡಿಐಜಿ ಶಾರದಾ ರಾವುತ್ ನೇತೃತ್ವದ ಅಧಿಕಾರಿಗಳ ತಂಡವನ್ನು ಅವರ ವಿರುದ್ಧ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡಿತು.

ವಿಚಾರಣೆಗೆ ಅಂಗೀಕರಿಸಲ್ಪಟ್ಟ ಡೊಮಿನಿಕಾ ಹೈಕೋರ್ಟ್‌ಗೆ, ಚೋಕ್ಸಿ ಅವರ ವಕೀಲರು ಚಾಣಾಕ್ಷತನದಿಂದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ ಭಾರತದ ಪ್ರಯತ್ನವನ್ನು ವಿಫಲಗೊಳಿಸಿದರು.

51 ದಿನಗಳ ಜೈಲುವಾಸದ ನಂತರ ಜುಲೈ 2021ರಂದು ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್ ಜಾಮೀನು ನೀಡಿತು. ನಂತರ, ಡೊಮಿನಿಕಾಗೆ ಅಕ್ರಮ ಪ್ರವೇಶದ ಚೋಕ್ಸಿ ವಿರುದ್ಧದ ಎಲ್ಲಾ ಪ್ರಕ್ರಿಯೆಗಳನ್ನು ಕೈಬಿಡಲಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read