Homeಚಳವಳಿಪ್ರಭುತ್ವದೊಂದಿಗಿನ ಸಮರಕ್ಕೆ ಇನ್ನೊಂದು ಹೆಸರು ಇರೋಮ್ ಶರ್ಮಿಳಾ

ಪ್ರಭುತ್ವದೊಂದಿಗಿನ ಸಮರಕ್ಕೆ ಇನ್ನೊಂದು ಹೆಸರು ಇರೋಮ್ ಶರ್ಮಿಳಾ

ನಿರಂತರ 16 ವರ್ಷಗಳ ಉಪವಾಸ ಸತ್ಯಾಗ್ರಹದ ಮೂಲಕ ಇಡೀ ಪ್ರಪಂಚಕ್ಕೆ ಪರಿಚಿತರಾದವರು ಇರೋಮ್ ಶರ್ಮಿಳಾ.

- Advertisement -
- Advertisement -

| ಮುತ್ತುರಾಜು |

ನವೆಂಬರ್ 02, 2000ನೇ ಇಸವಿ. ಅಸ್ಸಾಂ ರಾಜ್ಯದ ಇಂಫಾಲ ಬಳಿ ಇರುವ ಮಾಲೋಮ್ ನಗರದಲ್ಲಿ 10 ಜನ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿರುತ್ತಾರೆ. ಅಲ್ಲಿಗೆ ಏಕಾಏಕಿ ನುಗ್ಗಿದ ಅಸ್ಸಾಂ ರೈಫಲ್ಸ್ ಪೊಲೀಸರು ಗುಂಡಿನ ದಾಳಿ ನಡೆಸಿ 10 ಜನರನ್ನು ಕೊಂದು ಹಾಕುತ್ತಾರೆ. ಈ ಘೋರ ದುರಂತದ ವಿರುದ್ಧ ಅಸ್ಸಾಂ ಜನತೆ ಕಂಬನಿ ಮಿಡಿಯುತ್ತದೆ. ಆದರೆ 28 ವರ್ಷದ ಒಬ್ಬ ಹುಡುಗಿ ದಿಟ್ಟ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಅದು ಆ ದಾಳಿಗೆ ನ್ಯಾಯಕ್ಕಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ. ಅಲ್ಲಿಂದ ಆರಂಭವಾದ ಆಕೆಯ ಉಪವಾಸ ಸತ್ಯಾಗ್ರಹ ಹೋರಾಟ 2016ರವರೆಗೆ ಅಂದರೆ ಸತತ 16 ವರ್ಷ ಮುಂದುವರೆಯುತ್ತದೆ ಎಂದು ಸ್ವತಃ ಆಕೆಯು ಸಹ ಊಹಿಸಿರಲಿಕ್ಕಿಲ್ಲ.

ಹೌದು ನಾವು ಮಾತಾನಾಡುತ್ತಿರುವುದು ಮೊನ್ನೆ ತಾನೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಮಣಿಪುರದ ಉಕ್ಕಿನ ಮಹಿಳೆ ಎಂದು ಪ್ರಖ್ಯಾತವಾದ ಚಾನು ಇರೋಮ್ ಶರ್ಮಿಳಾರವರ ಬಗ್ಗೆ. ಸದ್ಯ ಬೆಂಗಳೂರಿನ ಮಲ್ಲೇಶ್ವರಂನ ಕ್ಲೌಡ್‍ನೈನ್ ಆಸ್ಪತ್ರೆಯಲ್ಲಿರುವ 46 ವರ್ಷದ ನಾಗರಿಕ ಹಕ್ಕುಗಳ ಕಾರ್ಯಕರ್ತೆ ಶರ್ಮಿಳಾರವರು, ಮೇ 12ರ ವಿಶ್ವ ತಾಯಂದಿರ ದಿನವೇ ಅವಳಿ ಮಕ್ಕಳಿಗೆ ಜನ್ಮನೀಡಿರುವುದು ಮತ್ತೊಂದು ವಿಶೇಷವಾಗಿದೆ. ಈ ಕುರಿತು ಎಲ್ಲಾ ಮಾಧ್ಯಮಗಳು ಸುಕೋಮಲವಾಗಿ ವರದಿ ಮಾಡುತ್ತಿವೆ. ಆದರೆ ಆಕೆಯ ಹೋರಾಟದ ಇತಿಹಾಸದತ್ತ ಕಣ್ಣು ಹಾಯಿಸಿದರೆ ಅಸಾಮಾನ್ಯ ತ್ಯಾಗ, ದಿಟ್ಟತನ, ನೋವು, ಕೆಚ್ಚು, ಹತಾಶೆ ಎಲ್ಲವೂ ದಿಗ್ಗನೇ ಎದ್ದು ನಿಲ್ಲುತ್ತವೆ.  ಶಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯ ವಿರುದ್ಧ ನಿರಂತರ 16 ವರ್ಷಗಳ ಉಪವಾಸ ಸತ್ಯಾಗ್ರಹದ ಮೂಲಕ ಇಡೀ ಪ್ರಪಂಚಕ್ಕೆ ಪರಿಚಿತರಾದವರು ಇರೋಮ್ ಶರ್ಮಿಳಾ. ಭಾರತದ 7 ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಕಾಶ್ಮಿರ ರಾಜ್ಯದಲ್ಲಿ ಜಾರಿಯಲ್ಲಿರುವ 1958ರ ಶಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆಯು ಅಲ್ಲಿನ ಜನರ ಸ್ವಾತಂತ್ರ್ಯವನ್ನು ಸಂಪೂರ್ಣ ಕಿತ್ತುಕೊಂಡಿದೆ. ಇಲ್ಲಿ ಸೇನಾಪಡೆಗಳಿಗೆ ಅನುಮತಿಯಿಲ್ಲದೇ ಯಾರನ್ನಾದರೂ ವಿಚಾರಣೆ ಮಾಡುವು, ಬಂಧಿಸುವ ಅಧಿಕಾರವಿರುತ್ತದೆ. ಈ ವಿಚಾರವಾಗಿ ಸೇನಾಪಡೆಗಳ ವಿರುದ್ಧ ದೂರು ನೀಡುವ ಹಕ್ಕು ನಾಗರಿಕರಿಗಿರುವುದಿಲ್ಲ.

ಈ ಕಾಯ್ದೆಯು ದುರ್ಬಳಕೆಯಗುತ್ತಿದ್ದು ಇದರಿಂದ ಮುಗ್ಧಜನರ ಜೀವಹಾನಿಯಾಗುತ್ತಿದೆ ಎಂಬುದು ಶರ್ಮಿಳಾರವರ ಆರೋಪ. ಈ ಆರೋಪಕ್ಕೆ ಸಾವಿರಾರು ಸಾಕ್ಷಿಗಳು ಸಹ ಅವರ ಬಳಿ ಇವೆ. ಈ ಕಾಯ್ದೆಯ ವಿರುದ್ಧದ ಬಂಡಾಯದಲ್ಲಿ ಹಲವು ದಶಕಗಳಿಂದ 5000ಕ್ಕೂ ಹೆಚ್ಚು ಮಣಿಪುರದ ಜನ ಸಾವನಪ್ಪಿದ್ದಾರೆ. ಸೇನಾಪಡೆಗಳ ಮಿತಿಮೀರದ ದೌರ್ಜನ್ಯದಿಂದಾಗಿ ನೂರಾರು ಹೆಣ್ಣು ಮಕ್ಕಳು ಅತ್ಯಚಾರಕ್ಕೊಳಗಾಗಿದ್ದಾರೆ. ಹಾಗಾಗಿ ಆ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂಬ ಏಕೈಕ ಬೇಡಿಕೆಯನ್ನಿಟ್ಟುಕೊಂಡು ಧೀರೋದಾತ್ತ ಹೋರಾಟ ನಡೆಸಿದವರು ಇರೋಮ್ ಶರ್ಮಿಳಾ.

ಇವರ ಹೋರಾಟವನ್ನು ಪ್ರಭುತ್ವ ಕ್ರೂರವಾಗಿ ಹತ್ತಿಕ್ಕಲು ಪ್ರಯತ್ನಿಸಿತು. ಉಪವಾಸ ಆರಂಭಿಸಿದ ಮೂರೇ ದಿವಸಕ್ಕೆ ಇವರ ಮೇಲೆ ಆತ್ಮಹತ್ಯೆಗೆ ಪ್ರಯತ್ನ ಎಂಬ ಕೇಸ್ ಜಡಿಯಿತು. ಶರ್ಮಿಳಾ ಜಗ್ಗಲಿಲ್ಲ. ನಂತರ ನ್ಯಾಯಾಂಗ ಬಂಧನ, ಜೈಲಿನಲ್ಲಿದ್ದಾಗಲೂ ಉಪವಾಸ ಮುಂದುವರೆಸಿದರು. ಕೊನೆಗೆ ಆಸ್ಪತ್ರೆಯಲ್ಲಿಟ್ಟು ಮೂಗಿನ ನಳಿಕೆ ಮೂಳಕ ಬಲವಂತವಾಗಿ ಆಹಾರ ನೀಡುವ ಪದ್ದತಿಯನ್ನು ಪೊಲೀಸರು ಅನುಸರಿಸಿದರು.

ಜಗತ್ತಿನಾದ್ಯಂತ ಇರೋಮ್ ಶರ್ಮಿಳಾರವರ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದುಬಂತು. ಇವರ ಹೋರಾಟಕ್ಕೆ ಸಹಮತ ಸೂಚಿಸಿ ದೇಶಾದ್ಯಂತ ಹೋರಾಟಗಳು ನಡೆದವು. ಆದರೆ ಕಿವುಡು, ಕುರುಡು ಸರ್ಕಾರ ಬಗ್ಗಲಿಲ್ಲ. ದಾಖಲೆಯ 16 ವರ್ಷಗಳ ಉಪವಾಸದ ನಂತರ ತಮ್ಮ ಹೋರಾಟದ ಮಾರ್ಗ ಬದಲಿಸಲು ಶರ್ಮಿಳಾ ನಿರ್ಧರಿಸಿದರು. ಅದರಂತೆ 2016ರ ಆಗಸ್ಟ್ 09 ರಂದು ಉಪವಾಸ ಸತ್ಯಾಗ್ರಹ ಕೊನೆಗೊಳಿಸಿ ಚುನಾವಣಾ ರಾಜಕೀಯದ ಮೂಲಕ ಹೋರಾಟ ಮುಂದುವರೆಸಲು ನಿರ್ಧರಿಸಿದರು.

ಪಕ್ಷ ಸೇರುವಂತೆ ಆಪ್ ಸೇರಿದಂತೆ ಹಲವು ಪಕ್ಷಗಳು ಆಹ್ವಾನಿಸಿದರು ಒಪ್ಪದೇ ಪೀಪಲ್ಸ್ ರೆಸೆರ್ಜೆನ್ಸ್ ಅಂಡ್ ಜಸ್ಟೀಸ್ ಅಲೆಯನ್ಸ್ ಎನ್ನುವ ಪಕ್ಷ ಸ್ಥಾಪಿಸಿದರು. 2017ರಲ್ಲಿ ಮಣಿಪುರದ ಸಿಎಂ ಆಗಿ ಅಲ್ಫಾ ಕಾಯ್ದೆಯನ್ನು ಕಿತ್ತೊಗೆಯುವ ಕನಸು ಕಂಡರು. ಅದರಂತೆ ಹಾಲಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ವಿರುದ್ಧ ತೋಬಲ್ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಚುನಾವಣಾ ಫಲಿತಾಂಶ ಮಾತ್ರ ಆಘಾತಕಾರಿಯಾಗಿತ್ತು. ಲಕ್ಷಾಂತರ ಜನ ಇರೋಮ್ ಶರ್ಮಿಳಾರವರ ಹೋರಾಟವನ್ನು ಬೆಂಬಲಿಸಿದ್ದರೂ ಅವರಿಗೆ ಬಿದ್ದಿದ್ದ ಓಟುಗಳು ಮಾತ್ರ ಕೇವಲ 90. ಇದು ಅವರಲ್ಲಿ ತೀವ್ರ ನಿರಾಶೆಯನ್ನುಂಟುಮಾಡಿತು. 

ಸೋತರು ಅವರು ಜನರನ್ನು ದೂಷಿಸಲಿಲ್ಲ. ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡರು. ನನ್ನ ಮನೋಭಾವ ಮತ್ತು ನನ್ನ ಅಂತರಂಗದ ಮಧ್ಯೆ ಎಲ್ಲೋ ಸಂಪರ್ಕ ತಪ್ಪಿಹೋಗಿದೆ. ರಾಜಕೀಯ ಕ್ಷೇತ್ರ ನನಗಾಗದು. ಆದ್ದರಿಂದ ರಾಜಕೀಯ ಕ್ಷೇತ್ರಕ್ಕೆ ವಿದಾಯ ಹೇಳುತ್ತೇನೆ ಎಂದರು. ಆದರೆ ಅವರೊಳಗಿದ್ದ ಕ್ರಾಂತಿಯ ಜ್ವಾಲೆ ಮಾತ್ರ ತಣ್ಣಗಾಯಿತು. ಚುನಾವಣಾ ರಾಜಕಾರಣದ ಮಿತಿಯು ಇದಕ್ಕೆ ಕಾರಣವಿರಬಹುದು. ಈ 16 ವರ್ಷಗಳ ಹೋರಾಟ ಯಾರಿಗಾಗಿ? ತನಗಾಗಿ ಮಾಡಿದ್ದು ಏನು ಎಂಬ ಪ್ರಶ್ನೆಗಳು ಬಹುಶಃ ಅವರ ಮನಸ್ಸಿನಲ್ಲಿ ಬಂದಿರಬೇಕು. 2017ರಲ್ಲಿ ತನ್ನ ಹೋರಾಟದ ಸಂಗಾತಿ, ಗೆಳೆಯ ಗೋವಾ ಮೂಲದ ಬ್ರಿಟಿಷ್ ಪ್ರಜೆ ಡೆಸ್ಮೆಂಡ್ ಕುಟಿನ್ಹೊರನ್ನು ವಿವಾಹವಾಗಿ ಕೊಡೈಕೆನೈಲ್‍ನಲ್ಲಿ ನೆಲೆಸಿದರು. ಈಗ ಆರೋಗ್ಯದ ಕಾರಣಕ್ಕೆ ಒಂದು ವರ್ಷದಿಂದ ಬೆಂಗಳೂರಿನಲ್ಲಿದ್ದ ಅವರು 2019ಕ್ಕೆ ಎರಡು ಮಕ್ಕಳ ಚೊಚ್ಚಲ ತಾಯಿಯಾಗಿದ್ದಾರೆ.

ಯಾವಾಗ ಜಾಗತೀಕರಣ ವಿಜೃಂಭಿಸಲು ಆರಂಭಿಸಿತ್ತೊ, ಯಾವಾಗ ಚಳವಳಿಗಳು ತನ್ನ ಶಕ್ತಿ ಕಳೆದುಕೊಳ್ಳುತ್ತಿದ್ದವೊ ಆಗ ಹೋರಾಟದ ಕಣಕ್ಕೆ ಧುಮುಕಿದ ಇರೋಮ್ ಶರ್ಮಿಳಾರವರ ಹೋರಾಟದ ಜೀವನ ಸಾಮಾಜಿಕ ಬದಲಾವಣೆ ಬಯಸುವ ಪ್ರತಿಯೊಬ್ಬ ವ್ಯಕ್ತಿಗಳು ಅಧ್ಯಯನ ಮಾಡಬೇಕಾದ ಸಂಗತಿಯಾಗಿದೆ. ಹೌದು ಇದು ಚಳವಳಿಗಳಿಗೆ ಸೂಕ್ತ ಕಾಲವಲ್ಲ. ಆದರೆ ಕಾಲ ಹೀಗೆಯೇ ಇರುವುದಿಲ್ಲವಲ್ಲ? ಮಣಿಪುರದ ಜನರ ಸಮಸ್ಯೆ ಬೆಂಗಳೂರಿನ ಬಹುಪಾಲು ಜನಕ್ಕೆ ಸಮಸ್ಯೆ ಅನ್ನಿಸಲೇ ಇಲ್ಲ. ಕಾಶ್ಮಿರದ ಜನರ ಸಮಸ್ಯೆ ಉತ್ತರ ಪ್ರದೇಶದ ಜನರಿಗೆ ಭಯೋತ್ಪಾದನೆಯಾಗಿಯೇ ಕಾಣಬಹುದು. ಹಾಗಾಗಿ ಇರೋಮ್ ಶರ್ಮಿಳಾರವರು ಚಳವಳಿ ಬಿಟ್ಟು ಸೆಟ್ಲ್ ಆದರು ಎಂಬ ಅಭಿಪ್ರಾಯಕ್ಕೆ ನಾವು ಬರುವುದು ಬೇಡ.

ಆಶಾವಾದದಿಂದ ಭವಿಷ್ಯವನ್ನು ಎದುರಿಸೋಣ. ಎಲ್ಲಾ ಚಳವಳಿಗಳಿಗೂ ತಕ್ಷಣದ ಪರಿಹಾರ ಸಿಗದಿದ್ದರೂ ಧೀರ್ಘಕಾಲೀನ ಶಾಶ್ವತ ಪರಿಹಾರಕ್ಕಾಗಿ ವಿನೂತನವಾಗಿ ಹೋರಾಟಕ್ಕಿಳಿಯೋಣ. ಸದ್ಯಕ್ಕೆ ಇರೋಮ್ ಶರ್ಮಿಳಾರವರಿಗೆ ಜನಿಸಿರುವ ಮೊದಲ ಮಗುವಿನ ಹೆಸರು ನಿಕ್ಸ್ ಶಾಕಿ (ಶರ್ಮಿಳಾರ ತಾಯಿ ಇರೋಮ್ ಶಾಕಿಯ ನೆನಪಿನಲ್ಲಿ) ಮತ್ತು ಎರಡನೇ ಮಗುವಿನ ಹೆಸರು ಅತುಮನ್ ತಾರ (ಬೌದ್ಧ ದೇವರ ನೆನಪಿನಲ್ಲಿ) ರಂತಹ ಮಕ್ಕಳ ಪೀಳಿಗೆಗೆಗಾದರು ಹಿಂಸೆ, ಅನ್ಯಾಯ, ಶೋಷಣೆಗಳು ಇಳಿಮುಖವಾಗುವ, ಶಾಂತಿ, ಪ್ರೀತಿ, ಸಾಮರಸ್ಯ, ಸಹೋದರತ್ವ, ಸಮಾನತೆ ಹೆಚ್ಚಾಗುವ ಸಮಾಜ ನಿರ್ಮಾಣವಾಗಲಿ ಎಂದು ಆಶಿಸೋಣ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...