Homeಮುಖಪುಟನೆಟ್ಟಿಗರಿಂದ ಮೋದಿ ಮೇಲೆ ಟ್ರೋಲ್, ರಾಹುಲ್ ಪ್ರಿಯಾಂಕ ಮೇಲೆ ಲವ್

ನೆಟ್ಟಿಗರಿಂದ ಮೋದಿ ಮೇಲೆ ಟ್ರೋಲ್, ರಾಹುಲ್ ಪ್ರಿಯಾಂಕ ಮೇಲೆ ಲವ್

ಬಿಜೆಪಿ ಕಾರ್ಯಕರ್ತರಿಗೆ “ನಿಮ್ಮ ನಿಲುವು ನಿಮ್ಮದು, ನನ್ನ ನಿಲುವು ನನ್ನದು, ಆಲ್ ದಿ ಬೆಸ್ಟ್” ಎಂದ ಪ್ರಿಯಾಂಕ ಗಾಂಧಿ

- Advertisement -
- Advertisement -

ಕೊನೆಯ ಹಂತದ ಚುನಾವಣೆಗಳು ಮುಗಿಯುವ ವೇಳೆಗೆ ರಾಜಕೀಯ ಪಲ್ಲಟಗಳು ನಡೆಯುತ್ತಿವೆ. ಒಂದು ಕಡೆ ಮೋಡ-ರಾಡಾರ್, ಡಿಜಿಟಲ್ ಕ್ಯಾಮೆರ – ಮೇಲ್ ಅಂತ ಮೋದಿ ತೀವ್ರ ಟೀಕೆಗೆ, ಟ್ರೋಲ್‍ಗೆ ಒಳಗಾಗುತ್ತಿದ್ದರೆ ಇತ್ತ ರಾಹುಲ್, ಪ್ರಿಯಾಂಕ ಅಣ್ಣ-ತಂಗಿ ಇಬ್ಬರೂ ತಮ್ಮ ಧೈರ್ಯ ಮತ್ತು ಮಾನವೀಯ ನಡವಳಿಕೆಗಳಿಂದ ಪ್ರಶಂಸೆಯ ಸುರಿಮಳೆ ಪಡೆಯುತ್ತಿದ್ದಾರೆ.

ನವದೆಹಲಿಯಲ್ಲಿ ಪ್ರಿಯಾಂಕ ಗಾಂಧಿ ಕಾರಿನಲ್ಲಿ ತೆರಳುತ್ತಿದ್ದ ಮಾರ್ಗದಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಪ್ರಿಯಾಂಕ ಕಾರು ಬಂದಕೂಡಲೇ ಮೋದಿ-ಮೋದಿ, ಮತ್ತೊಮ್ಮೆ ಎಂದು ಜೋರಾಗಿ ಕೂಗಿದ್ದಾರೆ. ತಕ್ಷಣವೇ ಕಾರು ನಿಲ್ಲಿಸಲು ಹೇಳಿ, ಕಾರಿನಿಂದಿಳಿದ ಪ್ರಿಯಾಂಕ ಗಾಂಧಿ ಅವರತ್ತ ಹಸ್ತಲಾಘವ ಚಾಚುತ್ತಾರೆ. “ನಿಮ್ಮ ನಿಲುವು ನಿಮ್ಮದು, ನನ್ನ ನಿಲುವು ನನ್ನದು, ಆಲ್ ದಿ ಬೆಸ್ಟ್” ಎಂದು ಪ್ರಿಯಾಂಕ ಗಾಂಧಿ ಹೇಳಿದೊಡನೆಯೇ ಅವರೆಲ್ಲರೂ ಖುಷಿಯಿಂದ ಹಸ್ತಲಾಘವ ಮಾಡಿದ್ದಲ್ಲದೇ ಆಲ್ ದಿ ಬೆಸ್ಟ ಮೇಡಂ, ಬೆಸ್ಟ್ ಆಫ್ ಲಕ್ ಎಂದು ಶುಭ ಹಾರೈಸಿದ್ದಾರೆ. ಅಷ್ಟೆ ಅಲ್ಲದೇ ಆ ಕಾರ್ಯಕರ್ತುರು ಪ್ರಿಯಾಂಕರ ಫೋಟೊ ಜೊತೆಗೆ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪ್ರಿಯಾಂಕಾ ಗಾಂಧಿಯವರ ಧೈರ್ಯ ಮತ್ತು ಹೃದಯವೈಶಾಲ್ಯತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇದು ಪ್ರಿಯಾಂಕರವರ ‘ಗಾಂಧಿಗಿರಿ’ ಎಂದು ಬಿರುದ್ದು ನೀಡಿದ್ದಾರೆ.

ವಿಡಿಯೋ ನೋಡಿ

ಇನ್ನೊಂದು ಕಡೆ ಮೋದಿಯ ಸ್ಕ್ರಿಪ್ಟೆಡ್ ಪ್ರಶ್ನೆಗಳ ಸಂದರ್ಶನದ ಕಾರಣಕ್ಕಾಗಿ, ಮೋಡ-ರಾಡಾರ್, ಡಿಜಿಟಲ್ ಕ್ಯಾಮೆರ – ಮೇಲ್ ವಿಷಯದ ಕಾರಣಕ್ಕಾಗಿ ಭಾರೀ ಸದ್ದು ಮಾಡಿದ್ದ ನ್ಯೂಸ್ ನೇಷನ್ ಚಾನಲ್ ಇಂದು ಪಂಜಾಬ್‍ನ ಬಹಿರಂಗ ಮೈದಾನದಲ್ಲಿ ಸ್ಕ್ರಿಪ್ಟೆಡ್ ಪ್ರಶ್ನೆಗಳಿಲ್ಲದೆ ರಾಹುಲ್ ಗಾಂಧಿಯವರ ಸಂದರ್ಶನ ಮಾಡಿದೆ.

ಈ ಐದು ವರ್ಷದ ಮೋದಿಜಿ ಆಡಳಿತದಲ್ಲಿ ಒಬ್ಬ ವ್ಯಕ್ತಿಯ ಸರ್ಕಾರವಾಗಿದೆ. ಅವರು ಯಾರ ಮಾತನ್ನು ಕೇಳಿಲ್ಲ. ನೋಟು ನಿಷೇಧ ಮತ್ತು ಜಿಎಸ್‍ಟಿ ಜಾರಿ ಮಾಡುವಾಗ ಮೋದಿ ಯಾರ ಸಲಹೆಯನ್ನು ಪಡೆಯದೇ ಏಕಾಏಕಿ ನಿರ್ಧಾರ ಮಾಡಿದರು. ಭಾರತದಲ್ಲಿ ಆರ್ಥಿಕ ಇಲಾಖೆ ಇದೆ, ಅರ್ಥ ಸಚಿವರಿದ್ದಾರೆ, ಸಮರ್ಥ ಅಧಿಕಾರಿಗಳಿದ್ದಾರೆ, ಆರ್‍ಬಿಐ ಗವರ್ನರ್ ಇದ್ದಾರೆ, ಯಾರನ್ನು ಕೇಳದೆ ಹೇಳದೆ ಜಾರಿ ಮಾಡಿದುದು ಸರಿ ಅಲ್ಲ, ಭಾರತದ ಜನರ ದನಿಗೆ ಅನುಗುಣವಾಗಿ ಸರ್ಕಾರ ನಡೆಸಬೇಕೆ ಹೊರತು ಒಬ್ಬ ವ್ಯಕ್ತಿಯ ಮನಸ್ಸಿಗೆ ಬಂದ ಹಾಗೆ ಅಲ್ಲ ಎಂದು ರಾಹುಲ್ ಹೇಳಿದರು.

ಅದಕ್ಕೆ ಸಂದರ್ಶಕ, ನೀವು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವಿರುದ್ಧ ಮಾತಾಡುತ್ತೀರಿ ಅವನ್ನು ಜಾರಿಗೆ ತಂದ ನಂತರವೂ ಉತ್ತರ ಪ್ರದೇಶ ಮತ್ತು ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದೆ ಎಂದು ಮೋದಿ ನಮ್ಮ ಸಂದರ್ಶನದಲ್ಲಿ ಉತ್ತರಿಸಿದ್ದರಲ್ಲ ಎಂದು ಕೇಳಿದರು. ಆಗ “ಮೋದಿಜಿಯವರು ಸ್ಕ್ರಿಪ್ಟೆಡ್ ಫೈಲ್‍ನಲ್ಲಿ ಈ ಉತ್ತರವನ್ನು ಬರೆದುಕೊಂಡು ಬಂದಿದ್ದರ?” ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ಅದಕ್ಕೆ ಸಂದರ್ಶಕ ಇಲ್ಲ ಮೋದಿಯವರು ಕೇವಲ ಕವನ ಮಾತ್ರ ಫೈಲ್‍ನಲ್ಲಿ ಬರೆದುಕೊಂಡು ಬಂದಿದ್ದರು ಎಂದಾಗ, ಮೋದಿಯವರ ಫೈಲ್‍ನಲ್ಲಿ ಪ್ರಶ್ನೆ, ಉತ್ತರ ಎರಡು ಇರುವುದನ್ನು ಇಂಟರ್‍ನೆಟ್‍ನಲ್ಲಿ ಎಲ್ಲರೂ ನೋಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ನಾವು ಭಾರತವನ್ನು ಪ್ರೀತಿ, ಸಹೋದರತೆ, ನ್ಯಾಯ, ನಾವೆಲ್ಲ ಒಂದು ಎನ್ನುವ ಮನೋಭಾವದ ಆಧಾರದಲ್ಲಿ ಕಟ್ಟಲು ಬಯಸಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ಸಂದರ್ಶನ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....