Homeಮುಖಪುಟಕೆಂಪು ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗು ಇಸ್ರೇಲ್‌ಗೆ ಸೇರಿದ್ದು: ವರದಿ

ಕೆಂಪು ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗು ಇಸ್ರೇಲ್‌ಗೆ ಸೇರಿದ್ದು: ವರದಿ

- Advertisement -
- Advertisement -

ಟರ್ಕಿಯಿಂದ ಕೆಂಪು ಸಮುದ್ರದ ಮೂಲಕ ಭಾರತಕ್ಕೆ ತೆರಳುತ್ತಿದ್ದ ಹಡಗು ಅಪಹರಣಕ್ಕೆ ಒಳಗಾಗಿದೆ. ಆದರೆ ಹಡಗು ನಮ್ಮದಲ್ಲ ಎಂದು ಇಸ್ರೇಲ್‌ ಹೇಳುತ್ತಿದ್ದು, ಈ ಹಡಗು ಇಸ್ರೇಲ್‌ನ ಶ್ರೀಮಂತ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ದಾಖಲೆಗಳು ಬಹಿರಂಗಪಡಿಸಿದೆ.

ಇಸ್ರೇಲ್‌ ಅಧಿಕಾರಿಗಳು ಹಡಗನ್ನು ಬ್ರಿಟಿಷರ ಒಡೆತನದ್ದು ಅಥವಾ ಜಪಾನಿಯವರದ್ದು ಇರಬಹುದು ಎಂದು ಹೇಳಿದೆ. ಆದರೆ ಇಸ್ರೇಲ್‌ನ ಶ್ರೀಮಂತ ವ್ಯಕ್ತಿ ಅಬ್ರಹಾಂ ರಾಮಿ ಉಂಗಾರ್‌ಗೆ ಸೇರಿದ್ದಾಗಿದೆ ಎಂದು ದಾಖಲೆಗಳು ಉಲ್ಲೇಖಿಸಿರುವ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟರ್ಕಿಯಿಂದ ಕೆಂಪು ಸಮುದ್ರದ ಮೂಲಕ ಭಾರತಕ್ಕೆ ತೆರಳುತ್ತಿದ್ದ ಇಸ್ರೇಲ್‌ನ ಸರಕು ಹಡಗನ್ನು ಅಪಹರಿಸಲು  ಯೆಮೆನ್‌ನ ಹೌತಿ ಬಂಡುಕೋರರು ಕಾರಣ ಎಂದು ಇಸ್ರೇಲ್ ಆರೋಪವನ್ನು ಮಾಡಿದ್ದು, ಈ ಬಗ್ಗೆ ಹೌತಿ ಬಂಡುಕೋರರು ಯಾವುದೇ ಪ್ರತಿಕ್ರಿಯನ್ನು ನೀಡಿಲ್ಲ.

ನಿನ್ನೆ ಈ ಘಟನೆ ನಡೆದಿದ್ದು, ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಪ್ರಾದೇಶಿಕ ಉದ್ವಿಗ್ನತೆಯ ಆತಂಕವನ್ನು ಹುಟ್ಟುಹಾಕಿದೆ. ಈ ಬಗ್ಗೆ ಯೆಮೆನ್‌ನಲ್ಲಿನ ಇರಾನ್ ಬೆಂಬಲಿತ ಬಂಡುಕೋರ ಸಂಘಟನೆ ಹೌತಿಗಳಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ ಕೆಂಪು ಸಮುದ್ರದಲ್ಲಿ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳನ್ನು ಗುರಿಯಾಗಿಸುವುದಾಗಿ ಇದಕ್ಕೂ ಮೊದಲು ಬೆದರಿಕೆ ಹಾಕಲಾಗಿತ್ತು.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಘಟನೆಯನ್ನು ಇರಾನಿನ ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದು, ಬಲ್ಗೇರಿಯನ್ನರು, ಫಿಲಿಪಿನೋಗಳು, ಮೆಕ್ಸಿಕನ್ನರು ಮತ್ತು ಉಕ್ರೇನಿಯನ್ನರು ಸೇರಿದಂತೆ ವಿವಿಧ ರಾಷ್ಟ್ರದ 25 ಸಿಬ್ಬಂದಿಗಳಿದ್ದರು. ಆದರೆ ಹಡಗಿನಲ್ಲಿ ಇಸ್ರೇಲ್‌ ಪ್ರಜೆಗಳು ಇರಲಿಲ್ಲ ಎಂದು ಹೇಳಿದ್ದಾರೆ.

ಇಸ್ರೇಲ್‌ ಮಿಲಿಟರಿ ಸರಕು ಹಡಗಿನ ಅಪಹರಣವನ್ನು ಅತ್ಯಂತ ಗಂಭೀರ ಘಟನೆ ಎಂದು ಕರೆದಿದೆ. ಹೌತಿ ಬಂಡುಕೋರರು ಸಮುದ್ರದ ಸಿಪ್ಪಿಂಗ್‌ ಲೈನ್‌ಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದೆ.

ಅಪಹರಿಸಲಾದ ಹಡಗು ಟರ್ಕಿಯ ಕೊರ್ಫೆಜ್‌ನಲ್ಲಿತ್ತು ಮತ್ತು ಇಸ್ರೇಲ್ ವಶಪಡಿಸಿಕೊಂಡ ಸಮಯದಲ್ಲಿ  ಪಿಪಾವಾವ್‌ನಿಂದ ಭಾರತಕ್ಕೆ ತೆರಳುತ್ತಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಹಡಗು ಇಸ್ರೇಲ್ ಮಾಲಿಕತ್ವವನ್ನು ಹೊಂದಿರಬಹುದು ಎಂದು ವರದಿಗಳು ಸೂಚಿಸಿದೆ.

ಹಡಗಿನ ಅಪಹರಣವು ಎರಿಟ್ರಿಯಾದ ಕರಾವಳಿಯ ಸಮೀಪವಿರುವ ಯೆಮೆನ್‌ನ ಬಂದರು ನಗರವಾದ ಹೊಡೆಡಾದ ಕರಾವಳಿಯಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ. ಇಸ್ರೇಲ್ ಗಾಝಾದ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಡಗುಗಳನ್ನು ಗುರಿಯಾಗಿಸುವುದಾಗಿ ಹೌತಿಗಳು ಪದೇ ಪದೇ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇದನ್ನು ಓದಿ: ಉತ್ತರಪ್ರದೇಶ: ಗೋಹತ್ಯೆ ಪ್ರಕರಣದ ಆರೋಪಿಯ ಎನ್‌ಕೌಂಟರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...