Homeಮುಖಪುಟಮಧ್ಯಪ್ರದೇಶ: ಮತದಾನದ ವೇಳೆ ಗೌಪ‍್ಯತೆಯ ಉಲ್ಲಂಘನೆ; ಮರು ಮತದಾನಕ್ಕೆ ಆದೇಶ

ಮಧ್ಯಪ್ರದೇಶ: ಮತದಾನದ ವೇಳೆ ಗೌಪ‍್ಯತೆಯ ಉಲ್ಲಂಘನೆ; ಮರು ಮತದಾನಕ್ಕೆ ಆದೇಶ

- Advertisement -
- Advertisement -

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಅಟರ್ ವಿಧಾನಸಭಾ ಕ್ಷೇತ್ರದ ಬೂತ್‌ವೊಂದರಲ್ಲಿ ಭಾರತೀಯ ಚುನಾವಣಾ ಆಯೋಗವು ಮರು ಮತದಾನಕ್ಕೆ ಆದೇಶಿಸಿದೆ.

ನ.17ರಂದು ಕಿಶುಪುರದಲ್ಲಿ ನಡೆದ ಮತದಾನದ ವೇಳೆ ಮತದಾರರು ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿದ್ದರಿಂದ ಗೌಪ‍್ಯತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಮರು ಮತದಾನಕ್ಕೆ ಆದೇಶಿಸಲಾಗಿದೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಕಿಶುಪುರದ ಮತಗಟ್ಟೆಯಲ್ಲಿ ನ.21ರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾರರ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ ಎಂದು ಆಯೋಗವು ಹೇಳಿದೆ. ಮರು ಮತದಾನದ ಆದೇಶವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ನೀಡಲಾಗಿದೆ.

ಮರು ಮತದಾನದ ವೇಳೆ ಮತಗಟ್ಟೆಗೆ ಮೊಬೈಲ್‌ ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದೆ. ಉಳಿದಂತೆ ನೀತಿ ಸಂಹಿತೆಯ ಎಲ್ಲಾ ನಿಯಮಗಳು ಜಾರಿಯಲ್ಲಿರಲಿವೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಇದಲ್ಲದೆ ಗೌಪ್ಯತೆಯ ಉಲ್ಲಂಘನೆ ಸಂಬಂಧ 4 ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ರಿಟರ್ನಿಂಗ್‌ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಂಜೀವ್ ಶ್ರೀವತ್ಸ ತಿಳಿಸಿದ್ದಾರೆ.

ಮಧ್ಯಪ್ರದೇಶದ ಎಲ್ಲಾ 230 ವಿಧಾನಸಭಾ ಸ್ಥಾನಗಳಿಗೆ ನ.17ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣಾ ಆಯೋಗದ ಪ್ರಕಾರ ಶೇಕಡಾ 77.15 ರಷ್ಟು ಮತದಾನವಾಗಿದೆ.

ಬಿಜೆಪಿಯ ಹಾಲಿ ಶಾಸಕ ಅರವಿಂದ್‌ ಸಿಂಗ್‌ ಬದುರಿಯಾ ವಿರುದ್ಧ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಹೇಮಂತ್ ಕಟಾರೆ ಕಣದಲ್ಲಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕಮಲ್ ನಾಥ್ ಅವರಂತಹ ರಾಜಕೀಯ ದಿಗ್ಗಜರು ಸೇರಿದಂತೆ 230 ವಿಧಾನಸಭಾ ಸ್ಥಾನಗಳಲ್ಲಿ 2,533 ಅಭ್ಯರ್ಥಿಗಳು ಮಧ್ಯಪ್ರದೇಶ ಚುನಾವಣಾ ಕಣದಲ್ಲಿದ್ದರು.

ಮಧ್ಯಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಬಾಲಾಘಾಟ್ ಜಿಲ್ಲೆಯ ಬೈಹಾರ್, ಲಾಂಜಿ ಮತ್ತು ಪರಸ್ವಾಡ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ.

ಇದನ್ನು ಓದಿ: ಕೆಂಪು ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗು ಇಸ್ರೇಲ್‌ಗೆ ಸೇರಿದ್ದು: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ತಾರತಮ್ಯ; ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆಕೊಟ್ಟ ಡಿಎಂಕೆ

0
ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ನಡೆ ಖಂಡಿಸಿ ಆಡಳಿತಾರೂಢ ಡಿಎಂಕೆ ಶನಿವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...