Homeಅಂತರಾಷ್ಟ್ರೀಯಒತ್ತೆಯಾಳು ಒಪ್ಪಂದದ ಕುರಿತು ಇಸ್ರೇಲ್‌ಗೆ 2 ಸಲಹೆಗಳನ್ನು ನೀಡಿದ ಕತಾರ್

ಒತ್ತೆಯಾಳು ಒಪ್ಪಂದದ ಕುರಿತು ಇಸ್ರೇಲ್‌ಗೆ 2 ಸಲಹೆಗಳನ್ನು ನೀಡಿದ ಕತಾರ್

- Advertisement -
- Advertisement -

ಹಮಾಸ್‌ನೊಂದಿಗಿನ ಒತ್ತೆಯಾಳುಗಳ ಒಪ್ಪಂದದ ಕುರಿತು ಕತಾರ್ ಇಸ್ರೇಲ್‌ಗೆ ಎರಡು ಸಲಹೆಗಳನ್ನು ನೀಡಿದೆ ಎಂದು ಪ್ಯಾಲೆಸ್ತೀನ್‌ ಮೂಲಗಳು ತಿಳಿಸಿರುವ ಬಗ್ಗೆ ವರದಿಯಾಗಿದೆ.

ಮೊದಲನೆಯದಾಗಿ 3  ದಿನಗಳ ಕದನ ವಿರಾಮ ಮತ್ತು ಗಾಝಾ ಪಟ್ಟಿಗೆ ನಿರ್ದಿಷ್ಟ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ 53 ಮಕ್ಕಳು ಮತ್ತು ಮಹಿಳೆಯರನ್ನು ಬಿಡುಗಡೆ ಮಾಡಲು ಹಮಾಸ್‌ಗೆ ಮೊದಲ ಸಲಹೆ ನೀಡಲಾಗಿದೆ.

ಪ್ಯಾಲೆಸ್ತೀನ್ ಮಹಿಳೆಯರು ಮತ್ತು ಮಕ್ಕಳು ಮತ್ತು ಕೆಲವು ಭದ್ರತಾ ಖೈದಿಗಳ ಬಿಡುಗಡೆ, 5 ದಿನಗಳ ಕದನ ವಿರಾಮ ಮತ್ತು ಹೆಚ್ಚಿನ ಪ್ರಮಾಣದ ಇಂಧನದ ಪೂರೈಕೆಗೆ ಬದಲಾಗಿ ಹಮಾಸ್ 87 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಎರಡನೆಯ ಸಲಹೆಯನ್ನು ನೀಡಲಾಗಿದೆ ಎಂದು ಪ್ಯಾಲೆಸ್ತೀನ್‌ ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿದೆ.

ಹಮಾಸ್‌ನಿಂದ ಬಂಧನಕ್ಕೊಳಗಾಗಿರುವ ಎಲ್ಲಾ ತಾಯಂದಿರು ಮತ್ತು ಮಕ್ಕಳ ಬಿಡುಗಡೆಗೆ ಇಸ್ರೇಲ್ ಒತ್ತಾಯಿಸಿದೆ ಮತ್ತು ಹೆಚ್ಚುವರಿ ಅಪಹರಣಕ್ಕೊಳಗಾದವರ ಬಿಡುಗಡೆಗೆ ಬದಲಾಗಿ ಹೆಚ್ಚುವರಿ ದಿನಗಳ ಶಾಂತಿ ಸ್ಥಾಪಿಸುವ ಬಗ್ಗೆ ಚರ್ಚಿಸಲು ಸಾಧ್ಯವಿದೆ ಎಂಬ ಸಂದೇಶವನ್ನು ರವಾನಿಸಿದೆ ಎನ್ನಲಾಗಿದೆ.

ಶುಕ್ರವಾರ ಇಸ್ರೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ತ್ಜಾಚಿ ಹನೆಗ್ಬಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಒತ್ತೆಯಾಳುಗಳ ಬಿಡುಗಡೆಯ ನಂತರವೇ ಕದನ ವಿರಾಮ ಸಂಭವಿಸಬಹುದು. ಅದು ಸೀಮಿತವಾಗಿರುತ್ತದೆ ಏಕೆಂದರೆ ಅದರ ನಂತರ ನಾವು ನಮ್ಮ ಯುದ್ಧದ ಗುರಿಗಳನ್ನು ಸಾಧಿಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಝಾ ಪಟ್ಟಿಯಲ್ಲಿ ಇಟ್ಟುಕೊಂಡಿರುವ ಇಸ್ರೇಲ್‌ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ಇನ್ನೂ ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಯುದ್ಧ ಘೋಷಿಸಿದ ಬಳಿಕ ಈವರೆಗೆ ಪ್ಯಾಲೆಸ್ತೀನ್‌ನಲ್ಲಿ ಮೃತರ ಸಂಖ್ಯೆ 15,000ಕ್ಕೂ ಅಧಿಕ ಇದೆ ಎಂದು ಯುರೋ-ಮೆಡ್ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಮೃತರಲ್ಲಿ 6,403 ಮಕ್ಕಳು ಮೃತಪಟ್ಟಿದ್ದಾರೆ. ಮೃತರಲ್ಲಿ 3,561 ಮಂದಿ ಮಹಿಳೆಯರು ಸೇರಿದ್ದಾರೆ.

ಇದನ್ನು ಓದಿ: ಕೆಂಪು ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗು ಇಸ್ರೇಲ್‌ಗೆ ಸೇರಿದ್ದು: ವರದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...