Homeಮುಖಪುಟಇಸ್ರೇಲ್ ಹಿಂಸಾಚಾರ: 10,000 ಪ್ಯಾಲೆಸ್ತೀನಿಯರ ಸಾವು

ಇಸ್ರೇಲ್ ಹಿಂಸಾಚಾರ: 10,000 ಪ್ಯಾಲೆಸ್ತೀನಿಯರ ಸಾವು

- Advertisement -
- Advertisement -

ಕಳೆದ ನಾಲ್ಕು ವಾರಗಳಿಂದ ಗಾಜಾದ ಮೇಲೆ ಇಸ್ರೇಲಿ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 10,000 ಪ್ಯಾಲೆಸ್ತೀನಿಯರು ಸಾವಿಗೀಡಾಗಿದ್ದಾರೆ. ಯುಎನ್ ಏಜೆನ್ಸಿಗಳು ಮತ್ತು ಎನ್‌ಜಿಒಗಳು ಸೋಮವಾರ ಕದನ ವಿರಾಮಕ್ಕಾಗಿ ಮನವಿ ಮಾಡುತ್ತಿವೆ.

ಇಸ್ರೇಲಿ ಬಾಂಬ್ ದಾಳಿಯಿಂದ 4,100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಗಾಜಾದಲ್ಲಿ ಹಿಂಸಾಚಾರವನ್ನು ಕೊನೆಗೊಳಿಸುವಂತೆ 18UN ಏಜೆನ್ಸಿಗಳು ಮತ್ತು ಎನ್‌ಜಿಒಗಳ ಮುಖ್ಯಸ್ಥರು ಜಂಟಿ ಹೇಳಿಕೆಯನ್ನು ನೀಡಿದ್ದಾರೆ.

”ನಮಗೆ ತಕ್ಷಣದ ಮಾನವೀಯ ಕದನ ವಿರಾಮ ಬೇಕು. ಇದು 30 ದಿನಗಳು. ಸಾಕು ಸಾಕು. ಇದು ಈಗ ನಿಲ್ಲಬೇಕು” ಎಂದು ಯುನಿಸೆಫ್, ವಿಶ್ವ ಆಹಾರ ಕಾರ್ಯಕ್ರಮ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮಕ್ಕಳನ್ನು ಉಳಿಸಿ ಗುಂಪು ಸೇರಿದಂತೆ ಅನೇಕ ದೇಶಗಳು ಹೇಳಿಕೆಗೆ ಸಹಿ ಮಾಡಿವೆ.

”ಸಾವಿನ ಸಂಖ್ಯೆಯಲ್ಲಿ 70% ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದ್ದಾರೆ. ಸುಮಾರು 2,500 ಮಹಿಳೆಯರು ಮತ್ತು 500 ವೃದ್ಧರು ಸಾವಿಗೀಡಾಗಿದ್ದಾರೆ ಎಂದು ನಂಬಲಾಗಿದೆ. ಸುಮಾರು 25,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ” ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ಹಿಂಸಾಚಾರ ಮತ್ತು ಅಶಾಂತಿಯು ಮುಂದುವರೆದಿದೆ, ಇಸ್ರೇಲಿ ವಸಾಹತುಗಾರರು ಮತ್ತು ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪುಗಳ ದಾಳಿಗಳು ಸಂಭವಿಸುತ್ತಿವೆ.

ಅಕ್ಟೋಬರ್ 7 ರಿಂದ ಇಸ್ರೇಲಿ ಬೆಂಕಿಯಿಂದ ಪಶ್ಚಿಮ ದಂಡೆಯಲ್ಲಿ ಕನಿಷ್ಠ 144 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು, ಪ್ಯಾಲೆಸ್ಟೀನಿಯನ್ನರ ವಿರುದ್ಧ ವಸಾಹತುಗಾರರ ಹಿಂಸಾಚಾರದ “ಆತಂಕಕಾರಿ” ಉಲ್ಬಣಗೊಳ್ಳುವ ಬಗ್ಗೆ ಯುಎನ್ ಎಚ್ಚರಿಸಿದೆ.

ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡಂದಿನಿಂದ ಇಲ್ಲಿಯ ತನಕ 4,104 ಮಕ್ಕಳೂ ಸೇರಿದಂತೆ 10,000ಕ್ಕೂ ಅಧಿಕ ಮಂದಿ ಬಲಿಯಾಗಿರುವ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ.

”ನನಗನಿಸುತ್ತೆ ಅನಿರ್ದಿಷ್ಟ ಅವಧಿಗೆ ಇಸ್ರೇಲ್ ಒಟ್ಟಾರೆ ಭದ್ರತಾ ಜವಾಬ್ದಾರಿ ಹೊಂದಲಿದೆ. ಅದಿಲ್ಲದೇ ಇದ್ದಾಗ ಏನಾಗುತ್ತದೆ ಎಂಬುದನ್ನು ನೋಡಿದ್ದೇವೆ. ಅದು ಹಮಾಸ್ ನಾವು ಊಹಿಸದಷ್ಟು ಬೆಳೆಯಲು ಕಾರಣವಾಗಿದೆ” ಎಂದು ಅವರು ಹೇಳಿದರು.

”ನಮ್ಮಒತ್ತೆಯಾಳುಗಳ ಬಿಡುಗಡೆಯಾಗದೆ ಕದನವಿರಾಮ ಇರುವುದಿಲ್ಲ. ತಂತ್ರಗಾರಿಕೆಯ ವಿರಾಮಗಳು, ಒಂದು ಗಂಟೆಯಷ್ಟು ಇರಬಹುದು. ಹಿಂದೆಯೂ ಇತ್ತು. ಮಾನವೀಯ ಉದ್ದೇಶದ ಸರಕುಗಳ ಸಾಗಾಟಕ್ಕೆ ಅನುವು ಮಾಡಲು ಹಾಗೂ ನಮ್ಮ ಒತ್ತೆಯಾಳುಗಳ ಬಿಡುಗಡೆ ಕುರಿತಂತೆ ಪರಿಸ್ಥಿತಿ ಪರಿಶೀಲಿಸುವೆ”’ ಎಂದು ನೆತನ್ಯಾಹು ಹೇಳಿದರು.

ಇದನ್ನೂ ಓದಿ: ಗಾಝಾಕ್ಕೆ ವೈದ್ಯಕೀಯ ನೆರವು ರವಾನಿಸಿದ ಜೋರ್ಡಾನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read