Homeಮುಖಪುಟಇಸ್ರೇಲ್ ಮಿಲಿಟರಿಯಿಂದ ಆಸ್ಪತ್ರೆಗಳ ಮೇಲೆ ದಾಳಿ: ಗಾಜಾ ಅಧಿಕಾರಿಗಳು

ಇಸ್ರೇಲ್ ಮಿಲಿಟರಿಯಿಂದ ಆಸ್ಪತ್ರೆಗಳ ಮೇಲೆ ದಾಳಿ: ಗಾಜಾ ಅಧಿಕಾರಿಗಳು

- Advertisement -
- Advertisement -

ಇಸ್ರೇಲ್ ಕನಿಷ್ಠ ಮೂರು ಆಸ್ಪತ್ರೆಗಳ ಮೇಲೆ ಅಥವಾ ಅದರ ಸಮೀಪ ವೈಮಾನಿಕ ದಾಳಿ ನಡೆಸಿತು ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

”ಏಕಕಾಲದಲ್ಲಿಯೇ ಇಸ್ರೇಲಿ ಮಿಲಿಟರಿ ಹಲವಾರು ಆಸ್ಪತ್ರೆಗಳ ಮೇಲೆ ದಾಳಿ ಪ್ರಾರಂಭಿಸಿತು” ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕಿದ್ರಾ ಅಲ್ ಜಜೀರಾಗೆ ತಿಳಿಸಿದರು.

ಗಾಜಾ ನಗರದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾ ಅಂಗಳದ ಮೇಲೆ ವೈಮಾನಿಕ ದಾಳಿ ನಡೆಸಲಾಯಿತು. ಅಲ್ ಶಿಫಾ ಆಸ್ಪತ್ರೆಯ ಕೆಳಗೆ ಹಮಾಸ್ ಕಮಾಂಡ್ ಸೆಂಟರ್‌ಗಳು ಮತ್ತು ಸುರಂಗಗಳನ್ನು ಹೊಂದಿದೆ ಎಂದು ಇಸ್ರೇಲ್ ಹೇಳಿದೆ. ಅಲ್-ರಾಂಟಿಸಿ ಪೀಡಿಯಾಟ್ರಿಕ್ ಆಸ್ಪತ್ರೆ ಮತ್ತು ಅಲ್-ನಾಸ್ರ್ ಮಕ್ಕಳ ಆಸ್ಪತ್ರೆಯನ್ನೂ ಇಸ್ರೇಲ್ ಗುರಿಯಾಗಿಸಿದೆ.

ಇಸ್ರೇಲ್ ಕದನ ವಿರಾಮವನ್ನು ಒಪ್ಪಿಕೊಂಡಿಲ್ಲ ಆದರೆ ಮಾನವೀಯ ನೆರವು ನೀಡಲು ಗಾಜಾದಲ್ಲಿ ತನ್ನ ಸಶಸ್ತ್ರ ಕಾರ್ಯಾಚರಣೆಗಳಲ್ಲಿ ನಾಲ್ಕು ಗಂಟೆಗಳ ಸ್ಥಳೀಯ ವಿರಾಮಗಳನ್ನು ಅನುಮತಿಸುತ್ತದೆ ಎಂದು ದೇಶದ ಮಿಲಿಟರಿ ಗುರುವಾರ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ಯಾಲೆಸ್ತೀನ್‌ನ ಹಮಾಸ್ ಸಶಸ್ತ್ರ ಗುಂಪನ್ನು ಹತ್ತಿಕ್ಕಲು ಇಸ್ರೇಲಿ ಮಿಲಿಟರಿ ಗಾಜಾ ನಗರವನ್ನು ಸುತ್ತುವರಿಯುತ್ತಿದ್ದಂತೆ ಇದು ಸಂಭವಿಸುತ್ತದೆ. ಪ್ರತಿ ದಿನ ಮೂರು ಗಂಟೆಗಳ ಕಾಲ ನಾಗರಿಕರು ಸುರಕ್ಷಿತ ಮಾರ್ಗಗಳಲ್ಲಿ ಓಡಾಡಬಹುದು ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಫೆಲೆಸ್ತೀನಿಯರು ದಕ್ಷಿಣ ಗಾಜಾಕ್ಕೆ ಪಲಾಯನ ಮಾಡಲು ಎರಡು ಮಾನವೀಯ ಕಾರಿಡಾರ್‌ಗಳಿವೆ ಎಂದು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ.

ಯುದ್ಧದ ನಂತರ ಗಾಜಾವನ್ನು ವಶಪಡಿಸಿಕೊಳ್ಳಲು, ಅಥವಾ ಆಡಳಿತ ನಡೆಸಲುನಾವು ಪ್ರಯತ್ನಿಸುವುದಿಲ್ಲ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.

ಅಕ್ಟೋಬರ್ 7 ರಿಂದ ಪ್ಯಾಲೇಸ್ಟಿನಿಯನ್‌ನ 4,412 ಮಕ್ಕಳು ಸೇರಿದಂತೆ 10,812 ಸಾವಿಗೀಡಾಗಿದ್ದಾರೆ. ಗಾಜಾ ಅಲ್ಲದೆ, ಅಕ್ಟೋಬರ್ 7 ರಿಂದ ಇಸ್ರೇಲಿ ಮಿಲಿಟರಿ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಕನಿಷ್ಠ 182 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇದನ್ನೂ ಓದಿ: ಗಾಜಾ ದಾಳಿಗೆ ತಾತ್ಕಾಲಿಕ ವಿರಾಮ, ಕದನ ವಿರಾಮ ಇಲ್ಲ ಎಂದ ಇಸ್ರೇಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...