Homeಮುಖಪುಟಇಸ್ರೇಲ್ ಹಿಂಸಾಚಾರ: ಶಾಲೆ ಮೇಲೆ ಶೆಲ್ ದಾಳಿ; 20 ಅಮಾಯಕರ ಸಾವು

ಇಸ್ರೇಲ್ ಹಿಂಸಾಚಾರ: ಶಾಲೆ ಮೇಲೆ ಶೆಲ್ ದಾಳಿ; 20 ಅಮಾಯಕರ ಸಾವು

- Advertisement -
- Advertisement -

ಗಾಝಾ ಪ್ರದೇಶದಲ್ಲಿ ಇಸ್ರೇಲ್ ಹಿಂಸಾಚಾರ ಮುಂದುವರೆದಿದ್ದು, ಶಾಲೆಯ ಮೇಲೆ ಶೆಲ್ ದಾಳಿ ನಡೆಸಿದೆ. 20 ಅಮಾಯಕರು ಪ್ರಾಣ ಕಳೆದುಕೊಂಡಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಹಮಾಸ್‌ನ ಆರೋಗ್ಯ ಇಲಾಖೆ, ”ಗಾಝಾದ ಶಾಲೆಯ ಮೇಲೆ ಶೆಲ್ ದಾಳಿ ನಡೆದಿದ್ದು, ಈ ವೇಳೆ ಮಕ್ಕಳು ಅಸುನೀಗಿದ್ದಾರೆ” ಎಂದು ತಿಳಿಸಿದೆ.

ಗಾಜಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದಲ್ಲಿ ಆಂಬ್ಯುಲೆನ್ಸ್‌ ಮೇಲೆ ಇಸ್ರೇಲಿ ಸೇನೆ ದಾಳಿ ನಡೆಸಿದ್ದು, 15 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇಸ್ರೇಲ್-ಹಮಾಸ್ ಯುದ್ಧದಕ್ಕೆ ವಿರಾಮ ಘೋಷಿಸಬೇಕು ಎಂದು ನೀಡಿರುವ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಿದ್ದಾರೆ. ಹಮಾಸ್ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಇಸ್ರೇಲಿಗರನ್ನು ಬಿಡುಗಡೆ ಮಾಡದಿದ್ದರೆ ಇನ್ನಷ್ಟು ತೀವ್ರ ದಾಳಿ ನಡೆಸುವುದಾಗಿ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಈ ಯುದ್ಧ ಇಡೀ ಪ್ರದೇಶಕ್ಕೆ ಹರಡುವ ಭೀತಿ ಎದುರಾಗಿದ್ದು, ಲೆಬನಾನ್‌ನ ಇರಾನ್ ಬೆಂಬಲಿತ ಸಂಘಟನೆ ಹೆಯ್ದುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಹೇಳಿಕೆ ನೀಡಿ, ”ಯುದ್ಧದಿಂದ ಹೊರಗುಳಿಯಬೇಕು ಎಂಬ ಅಮೆರಿಕದ ಎಚ್ಚರಿಕೆಯನ್ನು ನಾವು ಪಾಲಿಸುವುದಿಲ್ಲ. ಸಂಪೂರ್ಣವಾಗಿ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ಸಾವಿನ ಸಂಖ್ಯೆ ಎಷ್ಟು?

ಅಕ್ಟೋಬರ್ 7 ರಿಂದ ಗಾಜಾದ ಮೇಲೆ ಇಸ್ರೇಲಿ ನಡೆಸಿದ ದಾಳಿಗಳಲ್ಲಿ 3,826 ಮಕ್ಕಳು ಸೇರಿದಂತೆ ಕನಿಷ್ಠ 9,227 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಅಕ್ಟೋಬರ್ 7 ರ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಕೊಲ್ಲಲ್ಪಟ್ಟರು ಮತ್ತು 240 ಕ್ಕೂ ಹೆಚ್ಚು ಜನರನ್ನು ಗಾಜಾದಲ್ಲಿ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಭೀಕರ ಭೂಕಂಕ್ಕೆ ಕಂಗೆಟ್ಟ ನೇಪಾಳ: 128 ಜನರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...