Homeಮುಖಪುಟಹರಿಯಾಣ: ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ; ಪ್ರಕರಣ ದಾಖಲು

ಹರಿಯಾಣ: ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ; ಪ್ರಕರಣ ದಾಖಲು

- Advertisement -
- Advertisement -

ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರು ಲೈಂಗಿಕ ಕಿರುಕಳ ನೀಡುತ್ತಿದ್ದಾರೆ ಎಂದು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಲು ವಿಳಂಬ ಮಾಡಿದೆ ಎಂದು ಹರಿಯಾಣ ರಾಜ್ಯ ಮಹಿಳಾ ಆಯೋಗವು ಹೇಳಿದೆ.

ಸೆಪ್ಟೆಂಬರ್ 14ರಂದು ಶಾಲೆಯ ಕೆಲವು ವಿದ್ಯಾರ್ಥಿನಿಯರ ದೂರುಗಳನ್ನು ಪೊಲೀಸರಿಗೆ ರವಾನಿಸಿದ್ದೇವೆ ಆದರೆ ಅಕ್ಟೋಬರ್ 30ರಂದು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.

ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಿಂದ್ ಶಾಲೆಯ ಆಡಳಿತ ಮಂಡಳಿಯು ಪ್ರಾಂಶುಪಾಲರನ್ನು ಅಮಾನತು ಮಾಡಿದ ಕೆಲವು ದಿನಗಳ ನಂತರ ಹರಿಯಾಣ ಪೊಲೀಸರು ಸೋಮವಾರ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಲು ಜಿಂದ್ ಪೊಲೀಸರು ತಂಡಗಳನ್ನು ರಚಿಸಿದ್ದಾರೆ ಎಂದು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಪ್ರಾಂಶುಪಾಲರು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಂಚಕುಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ, ”ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿನಿಯರಿಂದ 60 ಲಿಖಿತ ದೂರುಗಳು ಬಂದಿವೆ. ಈ ಪೈಕಿ 50 ದೂರುಗಳು ದೈಹಿಕ ದೌರ್ಜನ್ಯ ನಡೆಸಿದ ಕುರಿತಾಗಿವೆ. ಇತರ ಹತ್ತು ಹುಡುಗಿಯರು, ತಮ್ಮ ದೂರಿನಲ್ಲಿ, ಪ್ರಿನ್ಸಿಪಾಲ್ ಅಂತಹ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಮಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಈ ಎಲ್ಲಾ ದೂರುಗಳನ್ನು ಅಪ್ರಾಪ್ತ ಬಾಲಕಿಯರು ನೀಡಿದ್ದಾರೆ ಎಂದು ಭಾಟಿಯಾ ಹೇಳಿದರು.

ಪ್ರಾಂಶುಪಾಲರು ತಮ್ಮನ್ನು ಅವರ ಕಚೇರಿಗೆ ಕರೆಸಿಕೊಂಡು ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

”ಸೆಪ್ಟೆಂಬರ್ 13 ರಂದು ಕೆಲವು ವಿದ್ಯಾರ್ಥಿನಿಯರು ದೂರು ನೀಡಿದರು ಮತ್ತು ಮರುದಿನ ಅದನ್ನು ಪೊಲೀಸರಿಗೆ ರವಾನಿಸಿದ್ದೇವೆ. ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 29ರವರೆಗೆ ಅವರ ಯಾವುದೇ ಕ್ರಮ ಜರುಗಿಸಿಲ್ಲ ಎಂದು Ms ಭಾಟಿಯಾ ಹೇಳಿದರು.

”ಪೊಲೀಸರು ಕ್ರಮ ಜರುಗಿಸದ ಕಾರಣ ವಿದ್ಯಾರ್ಥಿನಿಯರು ನಮ್ಮನ್ನು ಮತ್ತೆ ಸಂಪರ್ಕಿಸಿದರು. ನಾವು ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿದ ಬಳಿಕ ಎಫ್ಐಆರ್ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.

”ಎಫ್‌ಐಆರ್ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಲಿಲ್ಲ, ಇದು ಅವರಿಗೆ ತಲೆಮರೆಸಿಕೊಳ್ಳಲು ಸಮಯಾವಕಾಶ ನೀಡಿತು” ಎಂದು ಎಂಎಸ್ ಭಾಟಿಯಾ ಕೇಳಿದರು.

”ಪ್ರಾಂಶುಪಾಲರನ್ನು ಬೆಂಬಲಿಸಿದ ಮಹಿಳಾ ಶಿಕ್ಷಕಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಹೇಳಿದರು.

ಗುರುವಾರ ಸಂಜೆ ಕೆಲವು ವಿದ್ಯಾರ್ಥಿನಿಯರಿಗೆ ಅಪರಿಚಿತ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬಂದಿದ್ದು,ತಮ್ಮ ಮೇಲಿನ ದೂರು ವಾಪಸ್ ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ಅವರು ಹೇಳಿದರು.

ಆರೋಪಿಯನ್ನು ಕೂಡಲೇ ಬಂಧಿಸುವಂತೆ ಹರ್ಯಾಣ ಡಿಜಿಪಿ ಮತ್ತು ಜಿಂದ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಆಯೋಗದ ಅಧ್ಯಕ್ಷರು ಒತ್ತಾಯಿಸಿದ್ದಾರೆ. ಅಂತಹ ವ್ಯಕ್ತಿಗಳನ್ನು ತಕ್ಷಣವೇ ಕಂಬಿಗಳ ಹಿಂದೆ ಕಳುಹಿಸಬೇಕು ಎಂದು ಆಗ್ರಹಿಸಿದೆ.

ಪ್ರಾಂಶುಪಾಲರು ಕೆಲವು ಹುಡುಗಿಯರೊಂದಿಗೆ ಚಾಟ್ ಮಾಡಿರುವ ಬಗ್ಗೆ ಆಯೋಗದ ಬಳಿ ಪುರಾವೆಗಳಿವೆ ಎಂದು Ms ಭಾಟಿಯಾ ಹೇಳಿದರು.

ಜಿಂದ್ ಜಿಲ್ಲೆಯ ಪೊಲೀಸರು ಸೋಮವಾರ ಪ್ರಾಂಶುಪಾಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 341 (ತಪ್ಪು ಸಂಯಮ) ಮತ್ತು 342 (ತಪ್ಪಾದ ಬಂಧನ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ 27 ರಂದು ಹರಿಯಾಣ ಸರ್ಕಾರವು ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿದೆ ಎಂದು ಜಿಂದ್ ಜಿಲ್ಲಾಡಳಿತದ ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

ಇದನ್ನೂ ಓದಿ: ಮಹಿಳಾ ಮೀಸಲಾತಿ ಕಾನೂನು ರದ್ದುಗೊಳಿಸುವುದು ತುಂಬಾ ಕಷ್ಟ: ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...