Homeಮುಖಪುಟಅಲ್‌ ಜಝೀರಾ ಕಚೇರಿಯನ್ನು ಬಂದ್ ಮಾಡಲು ಮುಂದಾದ ಇಸ್ರೇಲ್‌

ಅಲ್‌ ಜಝೀರಾ ಕಚೇರಿಯನ್ನು ಬಂದ್ ಮಾಡಲು ಮುಂದಾದ ಇಸ್ರೇಲ್‌

- Advertisement -
- Advertisement -

ಇಸ್ರೇಲ್‌ನಲ್ಲಿ ಅಲ್ ಜಝೀರಾ ಕಚೇರಿ ಮುಚ್ಚುವ ಬಗ್ಗೆ ಇಸ್ರೇಲ್‌ನ ಸಂವಹನ ಸಚಿವ ಶ್ಲೋಮೋ ಕರ್ಹಿ ತುರ್ತು ಪ್ರಸ್ತಾಪವನ್ನಿಟ್ಟಿದ್ದಾರೆ.

ಅಲ್ ಜಝೀರಾದ ಸ್ಥಳೀಯ ಬ್ಯೂರೋವನ್ನು ಮುಚ್ಚಲು ತಾನು ಪ್ರಯತ್ನಿಸುತ್ತಿರುವುದಾಗಿ ಇಸ್ರೇಲ್‌ನ ಸಂವಹನ ಸಚಿವ ಶ್ಲೋಮೋ ಕರ್ಹಿ ಹೇಳಿದ್ದಾರೆ.  ಅಲ್ ಜಝೀರಾ ಸುದ್ದಿ ಕೇಂದ್ರವು ಹಮಾಸ್ ಪರ ಪ್ರಚೋದನೆ ಮಾಡುತ್ತಿದೆ ಮತ್ತು ಇಸ್ರೇಲ್‌ ಸೈನಿಕರ ಮೇಲೆ ಗಾಜಾದಲ್ಲಿ ಸಂಭಾವ್ಯ ದಾಳಿಗೆ ಪ್ರಚೋದಿಸಿದೆ ಎಂದು ಆರೋಪಿಸಿದ್ದಾರೆ.

ಅಲ್ ಜಝೀರಾದ ಇಸ್ರೇಲ್‌ ಬ್ಯೂರೋವನ್ನು ಮುಚ್ಚುವ ಪ್ರಸ್ತಾಪವನ್ನು ಇಸ್ರೇಲ್‌ನ ಭದ್ರತಾ ಅಧಿಕಾರಿಗಳು ಪರಿಶೀಲಿಸಿದ್ದಾರೆ ಮತ್ತು ಈ ಕುರಿತು ಕಾನೂನು ತಜ್ಞರ ಪರಿಶೀಲನೆ ನಡೆಯುತ್ತಿದೆ. ಈ ಬಗ್ಗೆ ಕ್ಯಾಬಿನೆಟ್‌ನಲ್ಲೂ ಪ್ರಸ್ತಾಪಿಸುವುದಾಗಿ ಶ್ಲೋಮಾ ಕರ್ಹಿ ಹೇಳಿದ್ದಾರೆ.

ಇಸ್ರೇಲ್‌ನ ಸಚಿವರ ಪ್ರಸ್ತಾಪದ ಬಗ್ಗೆ ಈವರೆಗೆ ಅಲ್ ಜಝೀರಾ  ಪ್ರತಿಕ್ರಿಯೆ ನೀಡಿಲ್ಲ.

ಹಮಾಸ್ ವಕ್ತಾರರ ಸಂದೇಶವು ಈ ಅಲ್ ಜಝೀರಾ ಕೇಂದ್ರದ ಮೂಲಕ ಪ್ರಸಾರವಾಗುತ್ತದೆ. ನಾವು ಇದನ್ನು ಇಂದೇ ನಿಲ್ಲಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ ಜಝೀರಾ ಕತಾರ್‌ ಮೂಲದ ಅಂತರಾಷ್ಟ್ರೀಯ ಸುದ್ದಿ ವಾಹಿನಿಯಾಗಿದೆ.  ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಜಾಗತಿಕ ಮಾಧ್ಯಮಗಳಲ್ಲಿ ಅಲ್ ಜಝೀರಾ ಒಂದಾಗಿದೆ.

ಇಸ್ರೇಲ್‌ನೊಂದಿಗೆ ಅಲ್ ಜಝೀರಾ ಸಂಬಂಧವು ಹದಗೆಟ್ಟಿದೆ. ಇತ್ತೀಚೆಗೆ ಮೇ 2022 ರಲ್ಲಿ ಹಿರಿಯ ಅಲ್ ಜಝೀರಾ ವರದಿಗಾರ ಶಿರೀನ್ ಅಬು ಅಕ್ಲೆಹ್ ಅವರ ಹತ್ಯೆ ಬಗ್ಗೆ ಇಸ್ರೇಲ್ ಮೇಲೆ ಆರೋಪ ಮಾಡಲಾಗಿತ್ತು. ಆದರೆ ವರದಿಗಾರನ ಸಾವಿನಲ್ಲಿ ಕೈವಾಡವಿಲ್ಲ ಎಂದು ಇಸ್ರೇಲ್ ನಿರಂತರವಾಗಿ ನಿರಾಕರಿಸಿತ್ತು.

ಇದನ್ನು ಓದಿ: ಭಾರತದಲ್ಲಿ ಇರಬೇಕಿದ್ದರೆ ‘ಭಾರತ ಮಾತಾ ಕಿ ಜೈ’ ಹೇಳಬೇಕು: ವಿವಾದಾತ್ಮಕ ಹೇಳಿಕೆ ಕೊಟ್ಟ ಕೇಂದ್ರ ಸಚಿವ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜ್ಯದ 5,8,9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಶಿಕ್ಷಣ ಇಲಾಖೆ ಆದೇಶ

0
ರಾಜ್ಯದ ಎಲ್ಲಾ ಶಾಲೆಗಳ 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಆದೇಶ ಹೊರಡಿಸಿದ್ದು,...