Homeಮುಖಪುಟಜೀನ್ಸ್ ಪ್ಯಾಂಟ್ ವಿವಾದ: ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಉತ್ತರಾಖಂಡ್ ಸಿಎಂ

ಜೀನ್ಸ್ ಪ್ಯಾಂಟ್ ವಿವಾದ: ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಉತ್ತರಾಖಂಡ್ ಸಿಎಂ

- Advertisement -
- Advertisement -

‘ರಿಪ್ಪಡ್‌ ಜೀನ್ಸ್ ಪ್ಯಾಂಟ್‌‌’ ಬಗ್ಗೆ ಮಾತನಾಡಿ ವಿವಾದವೆಬ್ಬಿಸಿದ್ದ ಉತ್ತರಾಖಂಡ್ ಮುಖ್ಯಮಂತ್ರಿ ತಿರತ್‌ ಸಿಂಗ್ ರಾವತ್‌, ಇದೀಗ ತಮ್ಮ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದ್ದಾರೆ.

ಆದರೆ ಅದೇ ಸಮಯದಲ್ಲಿ, ಅವರು ಹರಿದಿರುವ ಜೀನ್ಸ್ ಬಗ್ಗೆ ತಮ್ಮ ಆಕ್ಷೇಪಣೆಯನ್ನು ಪುನರಾವರ್ತಿಸಿದ್ದು, ಜೀನ್ಸ್‌ನೊಂದಿಗೆ ತನಗೆ ಯಾವುದೇ ತೊಂದರೆಯಿಲ್ಲ ಆದರೆ ‘ಹರಿದ ಬಟ್ಟೆ’ಗಳನ್ನು ಧರಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ ಪತ್ನಿ

ಈ ವಾರದ ಆರಂಭದಲ್ಲಿ ತಾನು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ತಿರತ್‌‌ ಸಿಂಗ್‌, “ಇತ್ತೀಚಿನ ದಿನಗಳಲ್ಲಿ ಮಕ್ಕಳು ದುಬಾರಿ ಜೀನ್ಸ್ ಮನೆಗೆ ತಂದು ನಂತರ ಕತ್ತರಿ ಕತ್ತರಿಸುತ್ತಾರೆ. ನಾನು ಮನೆಯ ವಾತಾವರಣದ ಬಗ್ಗೆ ಮಾತನಾಡಿದ್ದೆ. ಆ ಮಾತು ನನಗೂ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.

“ಮೌಲ್ಯಗಳ ಕೊರತೆಯಿಂದಾಗಿ ಯುವಕರು ವಿಚಿತ್ರವಾದ ಫ್ಯಾಷನ್ ಪ್ರವೃತ್ತಿಯನ್ನು ಅನುಸರಿಸುತ್ತಾರೆ ಮತ್ತು ಮೊಣಕಾಲು ಕಾಣುವ ಹರಿದ ಜೀನ್ಸ್ ಧರಿಸಿದ ಅವರು ತಾವು ದೊಡ್ಡ ಜನರೆಂದು ಭಾವಿಸುತ್ತಾರೆ. ಮಹಿಳೆಯರು ಕೂಡ ಇಂತಹ ಪ್ರವೃತ್ತಿಯನ್ನು ಅನುಸರಿಸುತ್ತಾರೆ” ಎಂದು ವಿಮಾನದಲ್ಲಿ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಉಡುಪಿನ ಬಗ್ಗೆ ರಾವತ್ ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಇದು ಭಾರಿ ಟೀಕೆಗೆ ಗುರಿಯಾಗಿತ್ತು.

ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವುದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ- ಉತ್ತರಾಖಂಡ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...