Homeಮುಖಪುಟಜಾರ್ಖಂಡ್: ಐಟಿ ಅಧಿಕಾರಿಗಳು ದಾಳಿಗೆ ಬಳಸಿದ ಕಾರಿನಲ್ಲಿತ್ತು ಬಿಜೆಪಿ ಸ್ಟಿಕ್ಕರ್!

ಜಾರ್ಖಂಡ್: ಐಟಿ ಅಧಿಕಾರಿಗಳು ದಾಳಿಗೆ ಬಳಸಿದ ಕಾರಿನಲ್ಲಿತ್ತು ಬಿಜೆಪಿ ಸ್ಟಿಕ್ಕರ್!

ಐಟಿ ಅಧಿಕಾರಿಗಳು ಬಳಸಿದ ಬಿಜೆಪಿ ಸ್ಟಿಕ್ಕರ್ ಇದ್ದ ಕಾರು ಬಿಜೆಪಿ ಮುಖಂಡ ದಿನೇಶ್ ಮಹತೋ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಯತೀಶ್ ರೆಡ್ಡಿ ಆರೋಪಿಸಿದ್ದಾರೆ.

- Advertisement -
- Advertisement -

ಐಟಿ, ಈಡಿ, ಸಿಬಿಐ ಸೇರಿದಂತೆ ಮುಂತಾದ ಸ್ವತಂತ್ರ ತನಿಖಾ ಸಂಸ್ಥೆಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಅಣತಿಯಿಂತೆ ನಡೆದುಕೊಳ್ಳುತ್ತಿವೆ, ಅವು ನಿಷ್ಪಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂದು ವಿಪಕ್ಷಗಳು ಆರೋಪ ಮಾಡುತ್ತಲೇ ಇವೆ. ಆ ಆರೋಪಗಳಿಗೆ ಇಂಬು ಕೊಡುವಂತೆ ಘಟನೆಯೊಂದು ಜಾರ್ಖಂಡ್‌ನಲ್ಲಿ ಜರುಗಿದೆ. ಕಾಂಗ್ರೆಸ್ ಶಾಸಕರ ಮೇಲೆ ಐಟಿ ದಾಳಿ ನಡೆಸಲು ಅಧಿಕಾರಿಗಳು ಬಳಸಿದ್ದ ಕಾರಿನ ಮೇಲೆ ಬಿಜೆಪಿ ಪಕ್ಷದ ಸ್ಟಿಕ್ಕರ್ ಇದ್ದುದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.

ಆಡಳಿತರೂಢ ಮೈತ್ರಿ ಪಕ್ಷಗಳಲ್ಲಿ ಒಂದಾದ ಜಾರ್ಖಂಡ್‌ ಕಾಂಗ್ರೆಸ್ ಪಕ್ಷದ ಪ್ರದೀಪ್ ಯಾದವ್ ಮತ್ತು ಕುಮಾರ್ ಜೈಮಂಗಲ್ ಎಂಬ ಶಾಸಕರ ನಿವಾಸದ ಮೇಲೆ ಶುಕ್ರವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಜೈಮಂಗಲ್‌ರವರ ನಿವಾಸದ ಮೇಲೆ ದಾಳಿ ನಡೆಸಲು ಐಟಿ ಅಧಿಕಾರಿಗಳು ಬಳಸಿದ ಕಾರಿನ ಮೇಲೆ ಬಿಜೆಪಿ ಸ್ಟಿಕ್ಕರ್ ಪತ್ತೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಅಧಿಕಾರಿಗಳು ಆಗಮಿಸಿದ ಕಾರಿನ ಮೇಲೆ ಬಿಜೆಪಿ ವಿಧಾನಸಭೆ ಪಾಸ್ ಎಂದು ಬರೆದಿರು ಸ್ಟಿಕ್ಕರ್ ಇದ್ದು ಅದನ್ನು ಅಧಿಕಾರಿಯೊಬ್ಬ ಕಿತ್ತುಹಾಕುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಎಲ್ಲಡೆ ವೈರಲ್ ಆಗತೊಡಗಿದೆ.

ಜಾರ್ಖಂಡ್‌ನಲ್ಲಿ ಬಿಜೆಪಿ ಒಡೆತನದ ಕಾರುಗಳನ್ನು ಬಳಸಿಕೊಂಡು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಮತ್ತು ಅದರ ಮೇಲೆ ಬಿಜೆಪಿ ಸ್ಟಿಕ್ಕರ್ ಅಂಟಿಸಿದ್ದಾರೆ. JH01 L-5626 ನಂಬರ್‌ನ ಕಾರು ಬಿಜೆಪಿ ಮುಖಂಡ ದಿನೇಶ್ ಮಹತೋ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಟಿಆರ್‌ಎಸ್ ಪಕ್ಷದ ಮುಖಂಡ ಯತೀಶ್ ರೆಡ್ಡಿ ಆರೋಪಿಸಿದ್ದಾರೆ.

ಇತ್ತೀಚೆಗೆ ಬಿಜೆಪಿ ಪಕ್ಷವು ಜಾರ್ಖಂಡ್‌ನಲ್ಲಿ ಆಪರೇಷನ್ ಕಮಲ ನಡೆಸಲು ಯತ್ನಿಸಿತು. ಆದರೆ ನಾನು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಅದಕ್ಕೆ ಅವಕಾಶ ಕೊಡದೆ ತಡೆಯೊಡ್ಡಿದೆವು. ಹಾಗಾಗಿ ಬಿಜೆಪಿ ಪಕ್ಷವು ನಮ್ಮನ್ನು ಬೆದರಿಸಲು ಪ್ರಾಯೋಜಿತ ಐಟಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜೈಮಂಗಲ್ ಆರೋಪಿಸಿದ್ದಾರೆ.

ಪ್ರಜಾತಾಂತ್ರಿಕವಾಗಿ ಜನಾದೇಶದ ಮೂಲಕ ಆಯ್ಕೆಯಾದ ಸರ್ಕಾರಕ್ಕೆ ತೊಂದರೆ ಕೊಡುತ್ತಿರುವುದು ಏಕೆ ಎಂಬುದನ್ನು ಬಿಜೆಪಿ ಜನರಿಗೆ ಹೇಳಬೇಕಿದೆ ಎಂದು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಆಗ್ರಹಿಸಿದ್ದಾರೆ.

ಆದರೆ ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ದೀಪಕ್ ಪ್ರಕಾಶ್ ಮಾತನಾಡಿ, “ಕಾಂಗ್ರೆಸ್ ಕಾರ್ಯಕರ್ತರ ಪಿತೂರಿಯಿಂದಾಗಿ ಐಟಿ ಅಧಿಕಾರಿಗಳ ಕಾರಿನ ಮೇಲೆ ಬಿಜೆಪಿ ಸ್ಟಿಕ್ಕರ್ ಗಳು ಕಂಡುಬಂದಿವೆ. ಈ ರೀತಿಯ ಕಾರುಗಳು ಬಾಡಿಗೆಗೆ ದೊರೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಸಂಬಂಧ ಕಲ್ಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ಗುಜರಾತ್ ಸೇತುವೆ ದುರಂತ: ನವೀಕರಣಕ್ಕೆ ಮಂಜೂರಾಗಿದ್ದ ₹2 ಕೋಟಿಗಳಲ್ಲಿ ಗಡಿಯಾರ ಕಂಪೆನಿ ಖರ್ಚು ಮಾಡಿದ್ದು ಕೇವಲ ₹12 ಲಕ್ಷ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...