Homeಮುಖಪುಟಜಮ್ಮು-ಕಾಶ್ಮೀರ: 20 ಕ್ಕೂ ಹೆಚ್ಚು ನಾಯಕರು ಗುಲಾಂ ನಬಿ ಆಜಾದ್ ಪಕ್ಷದಿಂದ ಕಾಂಗ್ರೆಸ್‌ಗೆ ಮರು ಸೇರ್ಪಡೆ

ಜಮ್ಮು-ಕಾಶ್ಮೀರ: 20 ಕ್ಕೂ ಹೆಚ್ಚು ನಾಯಕರು ಗುಲಾಂ ನಬಿ ಆಜಾದ್ ಪಕ್ಷದಿಂದ ಕಾಂಗ್ರೆಸ್‌ಗೆ ಮರು ಸೇರ್ಪಡೆ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ 20 ಕ್ಕೂ ಹೆಚ್ಚು ರಾಜಕೀಯ ನಾಯಕರು, ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರಲ್ಲಿ ಹೆಚ್ಚಿನವರು ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದವರು ಎಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಮತ್ತು ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ಉಪಸ್ಥಿತರಿದ್ದರು.

ಮಾಜಿ ಸಚಿವರು, ಎರಡು ಬಾರಿ ಶಾಸಕರು,  ಎಎಪಿಯ ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ವಿಭಾಗದ ಮುಖ್ಯಸ್ಥರಾಗಿದ್ದ  ಯಶ್ಪಾಲ್ ಕುಂದಲ್ ಕಾಂಗ್ರೆಸ್‌ಗೆ ಸೇರಿದವರಲ್ಲಿ ಒಬ್ಬರಾಗಿದ್ದರು. ಜೆಕೆಪಿಸಿಸಿಯ ಮಾಜಿ ಉಪಾಧ್ಯಕ್ಷ ಹಾಜಿ ಅಬ್ದುಲ್ ರಶೀದ್ ದಾರ್ ಆಜಾದ್ ಪಕ್ಷದಿಂದ ಕಾಂಗ್ರೆಸ್‌ಗೆ ಮರಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಮ್ಮು& ಕಾಶ್ಮೀರದ ನಾಯಕರ ಪಟ್ಟಿ: ನರೇಶ್ ಕೆ ಗುಪ್ತಾ (ಡಿಪಿಎಪಿ), ಶಾಮ್ ಲಾಲ್ ಭಗತ್ (ಡಿಪಿಎಪಿ), ನಮ್ರತಾ ಶರ್ಮಾ (ಅಪ್ನಿ ಪಾರ್ಟಿ), ಸೈಮಾ ಜಾನ್ (ಡಿಪಿಎಪಿ), ಶಹಜೆಹಾನ್ ದಾರ್ (ಡಿಪಿಎಪಿ), ಫಾರೂಕ್ ಅಹ್ಮದ್ (ಎಎಪಿ), ತರಂಜಿತ್ ಸಿಂಗ್ ಟೋನಿ, ಗಜಾನ್‌ಫರ್ ಅಲಿ, ಸಂತೋಷ್ ಮಜೋತ್ರಾ (ಡಿಪಿಎಪಿ ), ರಜನಿ ಶರ್ಮಾ (ಡಿಪಿಎಪಿ), ನಿರ್ಮಲ್ ಸಿಂಗ್ ಮೆಹ್ತಾ (ಡಿಪಿಎಪಿ), ಮದನ್ ಲಾಲ್ ಚಲೋತ್ರಾ , ಹಮಿತ್ ಸಿಂಗ್ ಬತ್ತಿ (ಎಎಪಿ), ರಮೇಶ್ ಪಂಡೋತ್ರ (ಎಎಪಿ), ವೈದ್ ರಾಜ್ ಶರ್ಮಾ (ಎಎಪಿ), ಮನ್ದೀಪ್ ಚೌಧರಿ (ಎಎಪಿ), ನಜೀರ್ ಅಹ್ಮದ್ ಔಕಾಬ್, ಮಹೇಶ್ವರ ವಿಶ್ವಕರ್ಮ ಮತ್ತು ಜಂಗ್ ಬಹದ್ದೂರ್ ಶರ್ಮಾ (ಡಿಪಿಎಪಿ) ಅವರು  ಕಾಂಗ್ರೆಸ್ ಸೇರಿದ ನಾಯಕರ ಪಟ್ಟಿಯಲ್ಲಿದ್ದಾರೆ.

ಇದನ್ನು ಓದಿ: ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...