Homeಮುಖಪುಟಪತ್ರಕರ್ತ ಎನ್. ರಾಮ್, ಅರ್ಥಶಾಸ್ತ್ರಜ್ಞ ಅಬುಸಲೇಹ್ ಷರೀಫ್‌ಗೆ 'ಕ್ವೈಡ್ ಮಿಲ್ಲೆತ್ ಪ್ರಶಸ್ತಿ'

ಪತ್ರಕರ್ತ ಎನ್. ರಾಮ್, ಅರ್ಥಶಾಸ್ತ್ರಜ್ಞ ಅಬುಸಲೇಹ್ ಷರೀಫ್‌ಗೆ ‘ಕ್ವೈಡ್ ಮಿಲ್ಲೆತ್ ಪ್ರಶಸ್ತಿ’

- Advertisement -
- Advertisement -

ಹಿರಿಯ ಪತ್ರಕರ್ತ ಎನ್. ರಾಮ್ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಅಬುಸಲೇಹ್ ಷರೀಫ್ ಅವರನ್ನು 2023ರ ಕ್ವೈಡ್ ಮಿಲ್ಲೆತ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

‘ದಿ ಹಿಂದೂ ಗ್ರೂಪ್ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌’ನ ನಿರ್ದೇಶಕರಾದ ಹಿರಿಯ ಪತ್ರಕರ್ತ ಎನ್.ರಾಮ್ ಮತ್ತು ಸೆಂಟರ್ ಫಾರ್ ರಿಸರ್ಚ್ ಅಂಡ್ ಡಿಬೇಟ್ಸ್ ಇನ್ ಡೆವಲಪ್‌ಮೆಂಟ್ ಪಾಲಿಸಿ (CRDDP) ಸಂಸ್ಥಾಪಕರಾದ ಅಬುಸಲೇಹ್ ಷರೀಫ್ ಅವರನ್ನು ಕ್ವೈಡ್ ಮಿಲ್ಲೆತ್ ಎಜುಕೇಶನಲ್ ಅಂಡ್ ಸೋಶಿಯಲ್ ಟ್ರಸ್ಟ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕ್ವೈಡ್ ಮಿಲ್ಲೆತ್ ಪ್ರಶಸ್ತಿಯನ್ನು 2015ರಲ್ಲಿ ಆರಂಭಿಸಲಾಗಿದೆ. ಕ್ವೈಡ್ ಮಿಲ್ಲೆತ್ ಮೊಹಮ್ಮದ್ ಇಸ್ಮಾಯಿಲ್ ಸಾಹೇಬ್ ದಕ್ಷಿಣ ಭಾರತದ ಜನಪ್ರಿಯ ನಾಯಕ, ಅವರು ‘ಕ್ವೈಡ್ ಮಿಲ್ಲೆತ್’ ಎಂದು ಹೆಸರುವಾಸಿಯಾಗಿದ್ದಾರೆ. ಅವರು ಸ್ವತಂತ್ರ ಭಾರತದ ರಚನೆಯ ವೇಳೆ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಸಂವಿಧಾನ ಸಭೆಯ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ (1952-58) ಪ್ರಭಾವವನ್ನು ಬೀರಿದ್ದರು ಮತ್ತು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಸಾಂವಿಧಾನಿಕ ಮೌಲ್ಯ, ಜಾತ್ಯತೀತತೆ, ಬಹುತ್ವ ಮತ್ತು ಅಂಚಿನಲ್ಲಿರುವ ಜನರ ಸೇವೆಗೆ ಆಳವಾದ ಬದ್ಧತೆಯೊಂದಿಗೆ ರಾಜಕೀಯ-ಸಾರ್ವಜನಿಕ ಜೀವನದಲ್ಲಿ ಅಮೋಘ ಸಾಧನೆ ಮಾಡಿದ ಅನುಭವಿಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಎನ್. ರಾಮ್ ಅವರು ನಿರ್ಭೀತ ಸ್ವತಂತ್ರ ಪತ್ರಕರ್ತ ಮತ್ತು ಜಾತ್ಯತೀತತೆ, ಕಾನೂನು ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಹೋರಾಟಗಾರ ಎಂದು ಪ್ರಶಸ್ತಿ ಸಮಿತಿ ಅವರನ್ನು ಕರೆದಿದ್ದು, ಅವರ ಅತ್ಯುತ್ತಮ ಕೊಡುಗೆಗಳನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.

ಶರೀಫ್ ಅವರಿಗೆ ಸಾಚಾರ್ ಸಮಿತಿಯ ವರದಿಯ ತಯಾರಿಕೆಯಲ್ಲಿ ಅವರ ಪಾತ್ರಕ್ಕಾಗಿ ಮತ್ತು ವಿವಿಧ ಸಾರ್ವಜನಿಕ ಕೊಡುಗೆಗಳಿಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮೊದಲು ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‌, ಹಿರಿಯ ಕಮ್ಯುನಿಸ್ಟ್ ನಾಯಕರಾದ ಆರ್.ನಲ್ಲಕಣ್ಣು, ಎನ್.ಶಂಕರಯ್ಯ ಮತ್ತು ತೀಸ್ತಾ ಸಟಲ್ವಾಡ್‌ ಮತ್ತು ಅರುಣಾ ರಾಯ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ಇದನ್ನು ಓದಿ: ಮೋದಿ ಹೇಳಿಕೆಗಳಿಂದ ಜನ ಬೇಸತ್ತಿದ್ದಾರೆ, #ByeByeModi ಟ್ರೆಂಡಿಂಗ್‌ನಲ್ಲಿದೆ: ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...