Homeಮುಖಪುಟಅಲ್ಪಸಂಖ್ಯಾತರ ವಿರುದ್ಧದ ಕೇಂದ್ರದ ನಿಲುವು: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ

ಅಲ್ಪಸಂಖ್ಯಾತರ ವಿರುದ್ಧದ ಕೇಂದ್ರದ ನಿಲುವು: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ

- Advertisement -
- Advertisement -

ರಾಮಮಂದಿರದ ಕುರಿತು ಸುಪ್ರೀಂಕೋರ್ಟ್ ಆದೇಶವು ಬರೀ ತೀರ್ಪು, ಅದು ನ್ಯಾಯವಲ್ಲ ಎಂದು ಮೊರಾದಾಬಾದ್‌ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಎಸ್‌ಟಿ ಹಸನ್ ಲೋಕಸಭೆಯಲ್ಲಿ ಹೇಳಿದ್ದು, ಕಾಶಿ ಮತ್ತು ಮಥುರಾದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಕೂಡ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಸರಕಾರ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ತೆಗೆದುಕೊಂಡ ನಿಲುವುಗಳನ್ನು ಕೂಡ ಸದನದ ಮುಂದಿಟ್ಟಿದ್ದು, ಯಾಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಹಸನ್‌, ಸುಪ್ರೀಂಕೋರ್ಟ್ ತೀರ್ಪು ನೀಡಿತು ಮತ್ತು ರಾಮ ಮಂದಿರದ ಸಮಸ್ಯೆಯನ್ನು ಬಗೆಹರಿಸಲಾಯಿತು. ಇದು ತೀರ್ಪು ಮತ್ತು ನ್ಯಾಯವಲ್ಲ, ಆದರೆ ಅದನ್ನು ಪರಿಹರಿಸಲಾಯಿತು. ಈಗ ಮತ್ತೊಂದು ಮಸೀದಿಯ ವಿಷಯ ಬಂದಿದೆ. ಜ್ಞಾನವಾಪಿ, ನಂತರ ಮಥುರಾ ಇರುತ್ತದೆ, ನಂತರ ತಾಜ್ ಮಹಲ್, ಕುತುಬ್ ಮಿನಾರ್ ಮತ್ತು ದೆಹಲಿಯ ಜಮಾ ಮಸೀದಿ, ಜನರು 3,000 ಮಸೀದಿಗಳು ಇದೇ ರೀತಿ ತಮ್ಮದೆಂದರೆ ಹೇಗೆ? ನಾವು ನಮ್ಮ ಮುಂದಿನ ಪೀಳಿಗೆಗೆ ಏನು ನೀಡುತ್ತಿದ್ದೇವೆ ಪ್ರೀತಿ ಅಥವಾ ದ್ವೇಷವನ್ನು ನೀಡುತ್ತಿದ್ದೇವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರವು ಸಾಧಿಸಿದ ಕ್ರೀಡಾ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ ಆದರೆ ಅಲ್ಪಸಂಖ್ಯಾತರಿರ ಮೇಲೆ ನಿರಂತರ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದಾರೆ. ದೇಶದ ಮುಸ್ಲಿಮರನ್ನು ತೊಂದರೆಗೊಳಪಡಿಸುವ ಮತ್ತು ಅವರಲ್ಲಿ ಆತಂಕವನ್ನು ಉಂಟುಮಾಡುವ ಕೆಲವು ಶಾಸನಗಳನ್ನು ಅಂಗೀಕರಿಸಲಾಗಿದೆ. ಮೊದಲ ಬಾರಿಗೆ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಯಿತು. 370ನೇ ವಿಧಿಯನ್ನು ತೆಗೆದುಹಾಕಲಾಯಿತು. ಭಯೋತ್ಪಾದನೆಯನ್ನು ಕೊನೆಗೊಳಿಸಲಾಗುವುದು ಎಂದು ನಮಗೆ ಹೇಳಲಾಗಿದೆ, ಆದರೆ ಪ್ರತಿ ಎರಡನೇ ದಿನಕ್ಕೆ ಒಂದು ಘಟನೆ ನಡೆಯುತ್ತಿದೆ. ತ್ರಿವಳಿ ತಲಾಖ್ ಮಸೂದೆಯನ್ನು ಜಾರಿಗೆ ತರಲಾಯಿತು,  ಹಿಜಾಬ್ ಮತ್ತು ಅಝಾನ್‌ ವಿಚಾರದಲ್ಲಿ ಜನರಿಗೆ ಸಮಸ್ಯೆಗಳನ್ನು ಮಾಡಲಾಯಿತು. ಸ್ವಾತಂತ್ರ್ಯ ಪಡೆಯಲು ನಾವೆಲ್ಲರೂ ಸೇರಿ ರಕ್ತ ಹರಿಸಿದ್ದು ಇದೇ ದೇಶಕ್ಕಯೇ? ಅದು ಎಲ್ಲಿ ನಿಲ್ಲುತ್ತದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹಸನ್ ಅವರು ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಯನ್ನು ಪ್ರಸ್ತಾಪಿಸಿದರು. ನಮ್ಮ ಸರ್ಕಾರವು ಇಸ್ರೇಲ್‌ಗೆ ಬೆಂಬಲವನ್ನು ಘೋಷಿಸಿತ್ತು. ಭಯೋತ್ಪಾದನೆಯನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಒಂದು ರಾಜ್ಯವು ಭಯೋತ್ಪಾದಕರಾದರೆ, ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಕೊಂದರೆ, ಆ ರಾಜ್ಯವನ್ನು ವಿರೋಧಿಸುವುದು ನಮ್ಮ ಕರ್ತವ್ಯವಲ್ವ. ಈ ದಬ್ಬಾಳಿಕೆ ಕೊನೆಗೊಳ್ಳಬೇಕು ಎಂಬ ಸಂದೇಶ ನಮ್ಮ ಸರ್ಕಾರ ಮತ್ತು ಸಂಸತ್ತಿನಿಂದ ಹೋಗಬೇಕಿತ್ತು ಎಂದರು.

ಸರ್ಕಾರವು ಮದರಸಾಗಳಿಂದ ಶಿಕ್ಷಕರನ್ನು ತೆಗೆದುಹಾಕಿದೆ, ಮೌಲಾನಾ ಆಜಾದ್ ವಿದ್ಯಾರ್ಥಿ ವೇತನವನ್ನು ಹಿಂಪಡೆಯಲಾಗಿದೆ, AMU ಮತ್ತು ಜಾಮಿಯಾ ಮಿಲಿಯಾಗೆ ಬಜೆಟ್ ಅನುದಾನ ಏಕೆ ಕಡಿಮೆ ಮಾಡಲಾಗಿದೆ? ಇದು ನೀವು ಧರ್ಮದ ಆಧಾರದ ಮೇಲೆ ಮಾಡುತ್ತಿರುವ ತಾರತಮ್ಯ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಮೋದಿ ಹೇಳಿಕೆಗಳಿಂದ ಜನ ಬೇಸತ್ತಿದ್ದಾರೆ, #ByeByeModi ಟ್ರೆಂಡಿಂಗ್‌ನಲ್ಲಿದೆ: ಕಾಂಗ್ರೆಸ್

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...