Homeಮುಖಪುಟಡಿಜೆಬಿ ಅಕ್ರಮ ಹಣ ವರ್ಗಾವಣೆ ಪ್ರಕರಣ; ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ, ಎಎಪಿ ಸಂಸದ ಎನ್‌ಡಿ ಗುಪ್ತಾ...

ಡಿಜೆಬಿ ಅಕ್ರಮ ಹಣ ವರ್ಗಾವಣೆ ಪ್ರಕರಣ; ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ, ಎಎಪಿ ಸಂಸದ ಎನ್‌ಡಿ ಗುಪ್ತಾ ಮನೆ ಮೇಲೆ ಇಡಿ ದಾಳಿ

- Advertisement -
- Advertisement -

ದೆಹಲಿ ಜಲ ಮಂಡಳಿಯಿಂದ (ಡಿಜೆಬಿ) ಹಣ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್, ರಾಜ್ಯಸಭಾ ಸದಸ್ಯ ಎನ್‌ಡಿ ಗುಪ್ತಾ ಸೇರಿದಂತೆ ಇತರರ ಮೇಲೆ ದಾಳಿ ನಡೆಸಿದೆ.

ತನಿಖಾ ಸಂಸ್ಥೆಯು ಜನವರಿ 31 ರಂದು ಜಗದೀಶ್ ಕುಮಾರ್ ಅರೋರಾ (ಡಿಜೆಬಿಯ ಮಾಜಿ ಮುಖ್ಯ ಇಂಜಿನಿಯರ್) ಮತ್ತು ಉದ್ಯಮಿ ಅನಿಲ್ ಕುಮಾರ್ ಅಗರ್ವಾಲ್ ಅವರನ್ನು ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಿತ್ತು.

ಡಿಜೆಬಿಯಲ್ಲಿನ ಭ್ರಷ್ಟಾಚಾರ ಹಾಗೂ ಲಂಚಕ್ಕೆ ಸಂಬಂಧಿಸಿದ ನಿಗದಿತ ಅಪರಾಧಗಳನ್ನು ಒಳಗೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಆಧಾರದ ಮೇಲೆ ಇಡಿ ಪ್ರಕರಣದಲ್ಲಿ ತನಿಖೆಯನ್ನು ಪ್ರಾರಂಭಿಸಿತು.

ಜಗದೀಶ್ ಕುಮಾರ್ ಅರೋರಾ (ಅಂದಿನ ಮುಖ್ಯ ಇಂಜಿನಿಯರ್) ದೆಹಲಿ ಜಲ ಮಂಡಳಿಯಲ್ಲಿ ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಒಟ್ಟು ₹38,02,33,080 ವೆಚ್ಚಕ್ಕೆ ಕಂಪನಿಯು ತಾಂತ್ರಿಕ ಅರ್ಹತೆಯ ಮಾನದಂಡಗಳನ್ನು ಪೂರೈಸದಿದ್ದರೂ ಸಹ ಕೆಲವು ಗುತ್ತಿಗೆಯನ್ನು ನೀಡಿದ್ದಾರೆ ಎಂದು ಎಫ್‌ಐಆರ್ ಆರೋಪಿಸಿದೆ.

‘ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಕಲಿ ಮತ್ತು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬಿಡ್ ಪಡೆದುಕೊಂಡಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಫ್ಲೋ ಮೀಟರ್‌ನ ಎಸ್‌ಐಟಿಸಿ ಟೆಂಡರ್ ಮಂಜೂರಾತಿಗೆ ಕಂಪನಿಯು ತಾಂತ್ರಿಕ ಅರ್ಹತೆಯ ಮಾನದಂಡಗಳನ್ನು ಪೂರೈಸಿಲ್ಲ ಎಂಬ ಅಂಶವನ್ನು ಜಗದೀಶ್ ಕುಮಾರ್ ಅರೋರಾ ತಿಳಿದಿದ್ದರು. ಎನ್‌ಕೆಜಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಈ ಕೆಲಸವನ್ನು ಅನಿಲ್ ಕುಮಾರ್ ಅಗರ್‌ವಾಲ್ ಅವರ ಮಾಲೀಕತ್ವದ ಸಂಸ್ಥೆಯಾದ ಇಂಟೆಗ್ರಲ್ ಸ್ಕ್ರೂಸ್ ಲಿಮಿಟೆಡ್‌ಗೆ ಉಪ-ಗುತ್ತಿಗೆ ನೀಡಿತು. ಹಣವನ್ನು ಸ್ವೀಕರಿಸಿದ ನಂತರ, ಅನಿಲ್ ಕುಮಾರ್ ಅಗರ್ವಾಲ್ ಅವರು ಲಂಚದ ಮೊತ್ತವನ್ನು ₹ 3 ಕೋಟಿಯನ್ನು ಜಗದೀಶ್ ಕುಮಾರ್ ಅರೋರಾ ಅವರಿಗೆ ನಗದು ಮತ್ತು ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿದ್ದಾರೆ’ ಎಂದು ಇಡಿ ಕಳೆದ ವಾರ ಹೇಳಿಕೆಯಲ್ಲಿ ತಿಳಿಸಿದೆ.

ಲಂಚದ ಮೊತ್ತವನ್ನು ವರ್ಗಾಯಿಸಲು ಜಗದೀಶ್ ಕುಮಾರ್ ಅರೋರಾ ಅವರ ನಿಕಟ ಸಹಚರರು ಮತ್ತು ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳನ್ನು ಬಳಸಲಾಗಿದೆ ಎಂದು ತನಿಖೆಗಳು ತೋರಿಸುತ್ತವೆ. ಜಗದೀಶ್ ಕುಮಾರ್ ಅರೋರಾ ಅವರ ಆಪ್ತ ಸಹ ಲಂಚವನ್ನು ನಗದು ರೂಪದಲ್ಲಿ ಸ್ವೀಕರಿಸಿದ್ದಾರೆ ಎಂದು ಅದು ಹೇಳಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಸಂಬಂಧಿಸಿದ ಇತರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯವು 10 ಸ್ಥಳಗಳಲ್ಲಿ ಹುಡುಕಾಟ ನಡೆಸಿದೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ಅತಿಶಿ, ಬಿಜೆಪಿ ಸರ್ಕಾರ ತನ್ನ ನಾಯಕರನ್ನು ಹೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ‘ಇಂದು ಬೆಳಿಗ್ಗೆ 10 ಗಂಟೆಗೆ ಇಡಿ ಕುರಿತು ಸ್ಫೋಟಕ ಮಾಹಿತಿಯನ್ನು ಎಕ್ಸ್‌ಪೋಸ್ ಮಾಡುತ್ತೇನೆ ಎಂದು ನಿನ್ನೆ ನಾನು ಹೇಳಿದ್ದೆ. ಅದನ್ನು ನಿಲ್ಲಿಸಲು ಮತ್ತು ಎಎಪಿಯನ್ನು ಹೆದರಿಸಲು, ಎಎಪಿ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಬೆಳಿಗ್ಗೆ 7 ರಿಂದ ಇಡಿ ದಾಳಿ ನಡೆಸುತ್ತಿದೆ. ನಮ್ಮ ನಾಯಕ ಎನ್‌ಡಿ ಗುಪ್ತಾ ಮತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದೆ. ಎಎಪಿ ನಾಯಕರ ವಿರುದ್ಧ ಇಡಿ ದಿನವಿಡೀ ದಾಳಿ ನಡೆಸಲಿದೆ ಎಂಬ ವರದಿಗಳಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಎಎಪಿಯನ್ನು ಹೆದರಿಸಲು ಪ್ರಯತ್ನಿಸುತ್ತಿದೆ’ ಎಂದು ಅವರು ರಾಷ್ಟ್ರೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ; ಅಲ್ಪಸಂಖ್ಯಾತರ ವಿರುದ್ಧದ ಕೇಂದ್ರದ ನಿಲುವು: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...