Homeಮುಖಪುಟನ್ಯಾಯವನ್ನು ಸೇಡಿನಿಂದ ಪಡೆಯಲಾಗದು: ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ

ನ್ಯಾಯವನ್ನು ಸೇಡಿನಿಂದ ಪಡೆಯಲಾಗದು: ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ

- Advertisement -
- Advertisement -

ತೆಲಂಗಾಣ ಎನ್‌ಕೌಂಟರ್‌ ಕುರಿತು ಮಾತನಾಡಿರುವ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆಯವರು ನ್ಯಾಯವು ಎಂದಿಗೂ ಸೇಡು ತೀರಿಸಿಕೊಳ್ಳಬಾರದು, ಸೇಡು ತೀರಿಸಿಕೊಂಡರೆ ನ್ಯಾಯವು ತನ್ನ ಪಾತ್ರವನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣದ ಪಶುವೈದ್ಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಮರುದಿನ ಅವರು ಹೀಗೆ ತಿಳಿಸಿದ್ದಾರೆ.

“ದೇಶದಲ್ಲಿ ಇತ್ತೀಚಿನ ಘಟನೆಗಳು ಹಳೆಯ ಚರ್ಚೆಯನ್ನು ಹೊಸ ಹುರುಪಿನಿಂದ ಹುಟ್ಟುಹಾಕಿದೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಕ್ರಿಮಿನಲ್ ವಿಷಯಗಳನ್ನು ವಿಲೇವಾರಿ ಮಾಡಲು ತೆಗೆದುಕೊಳ್ಳುವ ಸಮಯದ ಬಗ್ಗೆ ತನ್ನ ನಿಲುವು ಮತ್ತು ಮನೋಭಾವವನ್ನು ಮರುಪರಿಶೀಲಿಸಬೇಕು ಎಂಬುದರಲ್ಲಿ ಸಂದೇಹವಿಲ್ಲ” ಎಂದು ಸಿಜೆಐ ಬೊಬ್ಡೆ ಹೇಳಿಕೆಯನ್ನು ಎಎನ್‌ಐ ಉಲ್ಲೇಖಿಸಿದೆ.

“ನ್ಯಾಯವು ತತ್‌ಕ್ಷಣವೇ ಸಿಗಲು ಸಾಧ್ಯವಿಲ್ಲ. ನ್ಯಾಯವು ಎಂದಿಗೂ ಸೇಡು ತೀರಿಸಿಕೊಳ್ಳಬಾರದು. ಇದು ಸೇಡು ತೀರಿಸಿಕೊಂಡರೆ ನ್ಯಾಯವು ತನ್ನ ನ್ಯಾಯದ ಪಾತ್ರವನ್ನು ಕಳೆದುಕೊಳ್ಳುತ್ತದೆ ಎಂದು ನಾನು ನಂಬುತ್ತೇನೆ ”ಎಂದು ನ್ಯಾಯಮೂರ್ತಿ ಬಾಬ್ಡೆ ರಾಜಸ್ಥಾನದಲ್ಲಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...