ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಬಾಮೈದ ಬಾವಿಕಟ್ಟೆ ನಾಗಣ್ಣ ನೇಮಕಗೊಂಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಮತ್ತು ಎಸ್. ಶಿವಣ್ಣ ಜೊತೆಯಾಗಿ ತಮ್ಮ ಬಣದ ವ್ಯಕ್ತಿಯನ್ನೇ ಟೂಡಾ ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂಬ ಒತ್ತಾಸೆ ಈಡೇರಿದಂತಾಗಿದೆ.
ಈ ಮೂಲಕ ‘ಬಸವಜ್ಯೊತಿ’ ಪ್ರಾಬಲ್ಯ ಕುಸಿಯುವಂತೆ ಮಾಡಲಾಗಿದೆ. ಟೂಡಾಧ್ಯಕ್ಷರ ನೇಮಕದಲ್ಲಿ ಮೂಲ ಬಿಜೆಪಿಗರೇ ಮೇಲುಗೈ ಆಗಿದ್ದು ವಲಸಿಗರಿಗೆ ಮುಖ ಭಂಗವಾದಂತಾಗಿದೆ.
ಇದನ್ನೂ ಓದಿ: UPSC ಪಾಸಾದ ಜಾಮಿಯಾದ ಮುಸ್ಲಿಂ ವಿದ್ಯಾರ್ಥಿಗಳ ಅವಹೇಳನ: ಸುದರ್ಶನ್ ಚಾನೆಲ್ ನಿರೂಪಕನ ಮೇಲೆ ದೂರು ದಾಖಲು
ಹಿಂದೆ ಶಾಸಕ ಜ್ಯೋತಿಗಣೇಶ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾಗ ಹಲವು ಹುದ್ದೆಗಳಿಗೆ ಕೆಜೆಪಿಯಿಂದ ಬಂದವರಿಗೆ ಆದ್ಯತೆ ನೀಡಿದ್ದರು. ‘ಬಸವಜ್ಯೋತಿ’ಗೆ ಆಪ್ತರಾಗಿದ್ದವರನ್ನು ಮಾತ್ರ ಪದಾಧಿಕಾರಿಗಳ ಹುದ್ದೆಗೆ ನೇಮಕ ಮಾಡಿ ಆಗ ಮೇಲುಗೈ ಸಾಧಿಸಿದ್ದರು. ಅಧ್ಯಕ್ಷರ ನಡೆ ಮೂಲ ಬಿಜೆಪಿ ಮತ್ತು ವಲಸಿಗ ಬಿಜೆಪಿ ಎಂದು ಎರಡು ಗುಂಪುಗಳು ಹುಟ್ಟಿಕೊಂಡಿದ್ದವು. ಮಾಜಿ ಸಚಿವ ಸೊಗಡು ಶಿವಣ್ಣ ಪತ್ರಿಕಾಗೋಷ್ಠಿ ನಡೆಸಿ ‘ಅಪ್ಪಮಗ’ನ ವಿರುದ್ಧ ಟೀಕೆ-ಆಕ್ರೋಶ ವ್ಯಕ್ತಪಡಿಸಿದ್ದರು. ಬಣ ರಾಜಕೀಯಕ್ಕೆ ನಾಂದಿಯಾಗಿ ಆನಂತರ ತಣ್ಣಗಾಗಿತ್ತು.
‘ಅಪ್ಪಮಗನ’ ಆಟಕ್ಕೆ ಅಂತ್ಯ ಹಾಡಬೇಕು. ವಲಸಿಗರಿಗೇ ಮಣ ಹಾಕಲಾಗಿದೆ. ಮೂಲ ಬಿಜೆಪಿಗರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ವರಿಷ್ಠರಿಗೆ ದೂರು ನೀಡಿದ್ದರು ಸೊಗಡು ಶಿವಣ್ಣ. ಈ ಹಿನ್ನೆಲೆಯಲ್ಲಿ ಸೊಗಡು ಮನೆಗೆ ಕೆ.ಎಸ್. ಈಶ್ವರಪ್ಪ ಬಂದು ಪಕ್ಷದ ಹುದ್ದೆಗೆಳ ನೇಮಕದಲ್ಲಿ ಆಗಿರುವ ಲೋಪ ಸರಿಪಡಿಸುವ ಭರವಸೆ ನೀಡಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸೊಗಡು ಶಿವಣ್ಣ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಶಕ ಬಿ.ಸುರೇಶ್ ಗೌಡ ಜೊತೆ ಹೆಚ್ಚು ಆಪ್ತತೆ ಬೆಳೆಸಿಕೊಂಡರು.
ಈಗ ಮತ್ತೆ ಬಿ.ಸುರೇಶ್ ಗೌಡ ಎರಡನೇ ಬಾರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಾದಿ ಏರುತ್ತಿದ್ದಂತೆ ‘ಅಪ್ಪಮಗ ‘ಬಸವಜ್ಯೋತಿ’ ಆಟಕ್ಕೆ ಕಡಿವಾಣ ಹಾಕಲು ತೆರೆಮರೆಯಲ್ಲೇ ತಂತ್ರ ಹೆಣೆದು ಇದೀಗ ಯಶ್ವಿಯಾಗಿದ್ದಾರೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಮೂಲ ಬಿಜೆಪಿಗರಿಗೆ ಮಣೆ ಹಾಕುವ ಮೂಲಕ ಅಪ್ಪಮಗನ ಪ್ರಾಬಲ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸೊಗಡು ಶಿವಣ್ಣ ಮತ್ತು ಬಿ.ಸುರೇಶ್ ಗೌಡ ಉರುಳಿಸುತ್ತಿರುವ ದಾಳಕ್ಕೆ ‘ಬಸವಜ್ಯೋತಿ’ ವಿಲವಿಲ ಒದ್ದಾಡುವಂತಹ ಪರಿಸ್ಥಿತಿ ಬಂದಿದೆ. ಯಡಿಯೂರಪ್ಪ ನಾಯಕತ್ವ ಬದಲಾಣೆಯ ಬಿಸಿಯಲ್ಲಿ ಇರುವಾಗಲೇ ಮೂಲ ಬಿಜೆಪಿ ನೆಲಗಳು ಗಟ್ಟಿಗೊಳ್ಳತೊಡಗಿವೆ.
ಇದನ್ನೂ ಓದಿ: 1962 ರ ನಂತರ ಇದೇ ಮೊದಲ ಬಾರಿಗೆ ಲಡಾಖ್ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ; ಒಪ್ಪಿಕೊಂಡ ವಿದೇಶಾಂಗ ಸಚಿವ
ತುಮಕೂರು ಜಿಲ್ಲೆಯ ಮಟ್ಟಿಗೆ ಟೂಡಾ ಅಧ್ಯಕ್ಷರ ನೇಮಕ ‘ಬಸವಜ್ಯೋತಿ’ಗೆ ಮುಖಭಂಗವಾಗಿದೆ. ತಮ್ಮ ಬಣದವರನ್ನು ತರಬೇಕೆಂಬ ಆಸೆಗೆ ತಣ್ಣೀರು ಎರೆಚಿದಂತೆ ಆಗಿದೆ. ಆದರೆ ಟೂಡಾಧ್ಯಕ್ಷರಾಗಿ ತಾನೇ ನೇಮಕಗೊಳ್ಳುತ್ತೇನೆ ಎಂದು ಬೈಕ್ ಬಿಟ್ಟು ಸ್ನೇಹಿತರ ಕಾರಿನಲ್ಲಿ ಓಡುತ್ತಿದ್ದವರಿಗೆ ಇರಿಸುಮುರುಸಾಗಿದೆ. ತಮ್ಮ ಬಾಂಧವರ ಹೋಟೆಲ್‌ಗಳಿಗೆ ಹೋಗಿ ನೆರವು ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದ ಬಿಜೆಪಿ ಬೆಂಬಲಿಗನಿಗೆ ಬಾವಿಕಟ್ಟೆ ನಾಗಣ್ಣ ಅವರ ನೇಮಕ ಕಿರಿಕಿರಿ ಉಂಟುಮಾಡಿದೆ.
‘ಬಸವಜ್ಯೋತಿ’ ಬೆಳಕು ಮಸುಕಾಗಿದೆ. ಸೊಗಡು ಹೆಚ್ಚಾಗಿದೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ, ಪಾಲಿಕೆ ಆಯುಕ್ತರು, ಟೂಡಾ ಅಧ್ಯಕ್ಷರು ಹೀಗೆ ಎಲ್ಲಾ ಪ್ರಮುಖ ಹುದ್ದೆಗಳಿಗೂ ಒಂದೇ ಸಮುದಾಯದವರನ್ನು ತಂದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
~ಕೆ.ಇ. ಸಿದ್ದಯ್ಯ
ಇದನ್ನೂ ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್‌ಡಿಟಿವಿ ತನಿಖಾ ವರದಿ
