Homeಕರ್ನಾಟಕಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ;...

ಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ; ಹಿರಿಯೂರು ಉಪಚುನಾವಣೆ ಸಿದ್ಧತೆಯೂ ಜೋರು

- Advertisement -
- Advertisement -

ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸಮುದಾಯದ ವಿಶಿಷ್ಟ ಗುರುತು, ಸಂಪ್ರದಾಯ ಹಾಗೂ ಜೀವನಶೈಲಿಯನ್ನು ಸಮಗ್ರವಾಗಿ ದಾಖಲಿಸಲು ಈ ಅಧ್ಯಯನ ಕೈಗೊಳ್ಳಲಾಗುತ್ತಿದ್ದು, ಸಮುದಾಯದ ಹಕ್ಕು ಮತ್ತು ನ್ಯಾಯಯುತ ಮಾನ್ಯತೆಗಾಗಿ ಸರ್ಕಾರ ನಿರಂತರವಾಗಿ ಪ್ರಯತ್ನಿಸಲಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿದ್ದಾರೆ. ಕೇಂದ್ರ ಸರ್ಕಾರ ಎತ್ತಿರುವ ಆಕ್ಷೇಪಣೆಗಳಿಗೆ ಉತ್ತರ ನೀಡಿ ಎಸ್‌ಟಿ ಸೇರ್ಪಡೆಯ ಬೇಡಿಕೆಯನ್ನು ಬಲಪಡಿಸುವ ಉದ್ದೇಶದಿಂದ ಹೊಸ ಸಮಗ್ರ ಜನಾಂಗೀಯ ಅಧ್ಯಯನಕ್ಕೆ ಆದೇಶಿಸಿ, ಕೇಂದ್ರಕ್ಕೆ ಶಿಫಾರಸನ್ನು ನವೀಕರಿಸಲು ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ರಾಜ್ಯದ 12 ಜಿಲ್ಲೆಗಳ 40 ತಾಲ್ಲೂಕುಗಳಲ್ಲಿನ ಸುಮಾರು 1,273 ಹಟ್ಟಿಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಸೇರಿದಂತೆ ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಈ ಸಮುದಾಯದ ಉಪಸ್ಥಿತಿ ಗಮನಾರ್ಹವಾಗಿದೆ. ಹಲವು ಹಟ್ಟಿಗಳು ದೊಡ್ಡ ಗ್ರಾಮಗಳ ಹೊರವಲಯದಲ್ಲಿ, ಮುಖ್ಯ ವಸತಿ ಪ್ರದೇಶಗಳಿಂದ ಮೂರರಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಹಾಗೂ ಅರಣ್ಯದ ಗಡಿಗಳ ಸಮೀಪದಲ್ಲಿದ್ದು, ರಸ್ತೆ, ಕುಡಿಯುವ ನೀರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೇ ಜನರು ಜೀವನ ಸಾಗಿಸುತ್ತಿದ್ದಾರೆ. ಈ ಸಮುದಾಯವು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಮೀಸಲಾತಿ ಮಾನ್ಯತೆ ಅವರ ಮೂಲಭೂತ ಹಕ್ಕುಗಳ ಸಾಕಾರಕ್ಕೆ ಅಗತ್ಯವಾಗಿದೆ.

2015ರಿಂದಲೇ ಎಸ್‌ಟಿ ಸೇರ್ಪಡೆಗಾಗಿ ರಾಜ್ಯ ಸರ್ಕಾರ ಪ್ರಯತ್ನಿಸುತ್ತಾ ಬಂದಿದ್ದರೂ, ಈ ಹಿಂದೆ ಐದು ಬಾರಿ ಪ್ರಸ್ತಾವನೆ ತಿರಸ್ಕೃತಗೊಂಡಿರುವ ಹಿನ್ನೆಲೆ ಇದೆ. ಫೆಬ್ರವರಿ 6, 2017, ಫೆಬ್ರವರಿ 18, 2019, ಸೆಪ್ಟೆಂಬರ್ 22, 2022, ಮಾರ್ಚ್ 27, 2024 ಮತ್ತು ಜೂನ್ 15, 2026ರಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ORGI) ಕಚೇರಿಯು ಪ್ರಸ್ತಾವನೆಯನ್ನು ಶಿಫಾರಸು ಮಾಡಲು ನಿರಾಕರಿಸಿತ್ತು; ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದನ್ನು ಸಮರ್ಥಿಸಲು ಸಾಕಷ್ಟು ಹೊಸ ಮಾಹಿತಿ ಅಥವಾ ಹೆಚ್ಚುವರಿ ಪುರಾವೆಗಳನ್ನು ರಾಜ್ಯ ನೀಡಿಲ್ಲ ಎಂಬುದು ಮುಖ್ಯ ಆಕ್ಷೇಪಣೆಯಾಗಿತ್ತು.

ಇದರ ಬೆನ್ನಲ್ಲೇ, ಜುಲೈ 22, 2026ರಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕರ್ನಾಟಕದ ಪ್ರಸ್ತಾವನೆಯನ್ನು ಅಧಿಕೃತವಾಗಿ ತಿರಸ್ಕರಿಸಿತ್ತು. ಸಂವಿಧಾನದ 342ನೇ ವಿಧಿಯಡಿ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಅಂತಿಮ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಇದ್ದರೂ, ಸಮಗ್ರ ಜನಾಂಗೀಯ ಅಧ್ಯಯನ ಮತ್ತು ದತ್ತಾಂಶಗಳನ್ನು ಸಲ್ಲಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ, ಮೂರು ತಿಂಗಳೊಳಗೆ ಅಧ್ಯಯನ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ನವೆಂಬರ್ 18ರಂದು ಆದೇಶ ಹೊರಡಿಸಿದ್ದು, ಧಾರವಾಡದ CMDR ಸಂಸ್ಥೆಯ ತಜ್ಞ ಮಾನವಶಾಸ್ತ್ರಜ್ಞರ ತಂಡವು ಸಮುದಾಯದ ಸಾಮಾಜಿಕ ರಚನೆ, ಸಾಂಸ್ಕೃತಿಕ ಆಚರಣೆಗಳು, ಸಂಪ್ರದಾಯಗಳು ಮತ್ತು ವಿಶಿಷ್ಟ ಜೀವನಶೈಲಿಯನ್ನು ದಾಖಲಿಸಲಿದೆ.

ಇದೇ ವೇಳೆ, ಇನ್ನೂ ಅಧಿಕೃತವಾಗಿ ಘೋಷಣೆಯಾಗದ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಹಿರಿಯೂರಿನಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಪಾಲ್ಗೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿರುವುದಲ್ಲದೆ, ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯದ ಮತದಾರರು ನಿರ್ಣಾಯಕವಾಗಿರುವ ಹಿರಿಯೂರು ಕ್ಷೇತ್ರದಲ್ಲಿ ಸುಮಾರು 40,000ಕ್ಕೂ ಹೆಚ್ಚು ಕಾಡುಗೊಲ್ಲ ಮತದಾರರಿದ್ದಾರೆ ಎಂದು ಹಿಂದಿನ ಅಂದಾಜುಗಳು ಸೂಚಿಸುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜಕೀಯ ವಲಯದಲ್ಲೂ ಚರ್ಚೆಯಾಗುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...

ಕೇರಳ: ಇ20 ಪರೀಕ್ಷೆಗೆ ಶುದ್ಧ ಪೆಟ್ರೋಲ್ ನೀಡಲು ತೈಲ ಕಂಪನಿಗಳ ಹಿಂದೇಟು

ಪೆಟ್ರೋಲ್‌ನಲ್ಲಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸುವ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇ20 ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣವನ್ನು ಹೋಲಿಕೆ ಮಾಡಿ ಪರೀಕ್ಷಿಸಲು ಅಗತ್ಯವಿರುವ ಎಥನಾಲ್ ಮಿಶ್ರಣವಿಲ್ಲದ ಶುದ್ಧ ಪೆಟ್ರೋಲ್ ಮಾದರಿಗಳನ್ನು ಒದಗಿಸಲು ತೈಲ ಕಂಪನಿಗಳು...

ಜಮ್ಮು-ಕಾಶ್ಮೀರ: ನೇಮಕಾತಿ ಅಕ್ರಮದ ವಿರುದ್ಧ  ಕೊರೆಯುವ ಚಳಿಯಲ್ಲೂ ಧರಣಿ: ವಿದ್ಯಾರ್ಥಿಗಳ ಜೊತೆ ರಾತ್ರಿ ಕಳೆದ ಮಾಜಿ ಸಂಸದ ಅಗಾ ರುಹುಲ್ಲಾ

ಶ್ರೀನಗರ: ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು, ಪರೀಕ್ಷಾ ವಂಚನೆ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ...

ತಿರುಪರಂಕುಂದ್ರಂ ವಿವಾದ : ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ 'ದೀಪತ್ತೂನ್' (ಕಲ್ಲಿನ ಸ್ತಂಭ) ಮೇಲೆ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿರುವ ಇತ್ತೀಚಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ....

ಅಗ್ನಿವೀರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಯತ್ನ: 14 ವರ್ಷದ ಬಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್‌ನಲ್ಲಿ 500 ಡಾಲರ್‌ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು...

ರೋಹಿಂಗ್ಯಾ ಮುಸ್ಲಿಮರ ನರಮೇಧಕ್ಕೆ ಇಸ್ರೇಲ್‌ ಶಸ್ತ್ರಾಸ್ತ್ರ ಪೂರೈಕೆ ಹಾಗೂ ತರಬೇತಿ ನೀಡಿದೆ: ಮ್ಯಾನ್ಮಾರ್ ಹೋರಾಟಗಾರ ಮೌಂಗ್ ಝರ್ನಿ ಗಂಭೀರ ಆರೋಪ

ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನರಮೇಧ ನಡೆಸುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್ ದೇಶವು ಮ್ಯಾನ್ಮಾರ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ, ತರಬೇತಿಯನ್ನೂ ನೀಡಿತ್ತು ಎಂದು ಮ್ಯಾನ್ಮಾರ್‌ನ ಖ್ಯಾತ ಹೋರಾಟಗಾರ ಮತ್ತು ಶಿಕ್ಷಣತಜ್ಞ ಮೌಂಗ್ ಝರ್ನಿ...

ಉತ್ತರ ಪ್ರದೇಶ ಚುನಾವಣೆ: ಒಬಿಸಿ ಮತಗಳ ‘ಕ್ರೋಢೀಕರಣಕ್ಕೆ’ ಅಖಿಲೇಶ್ ಯಾದವ್ ಯತ್ನ; ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿಗೆ ಚಿಂತನೆ

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಮತಗಳನ್ನು ಕ್ರೋಢೀಕರಿಸಿ ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್...

IDBI ಬ್ಯಾಂಕ್ ಮಾರಾಟ ‘ಭಾರತದ ಅತಿದೊಡ್ಡ ಹಗರಣ’: ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಗಂಭೀರ ಆರೋಪ; ಸಂಸತ್ ಚರ್ಚೆಗೆ ಇ.ಎ.ಎಸ್. ಶರ್ಮಾ ಒತ್ತಾಯ!

ಲಾಭದ ಹಳಿಗೆ ಮರಳಿರುವ IDBI ಬ್ಯಾಂಕ್‌ನ ಶೇ. 60.72ರಷ್ಟು ಷೇರುಗಳನ್ನು ಕೆನಡಾದ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಗೆ 52,878 ಕೋಟಿ ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ಈಗ...

ದಾಖಲೆಯ 100 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಲೋಕಸಭಾ ಸ್ಥಾನಗಳ ಹೆಚ್ಚಳಕ್ಕೆ ಸಂಬಂಧಿಸಿದ ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಕೇಂದ್ರ ಸರ್ಕಾರ ಮರುಮಂಡಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಚರ್ಚೆಗಳ ನಡುವೆಯೇ, ಸಂಸತ್ತಿನ ಮುಂಗಾರು ಅಧಿವೇಶನವು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿ (Sine die)...

‘ಕಾಂಗ್ರೆಸ್ ಬಡವರನ್ನು ದಾರಿ ತಪ್ಪಿಸಿತು; ನನ್ನ ಸರ್ಕಾರ 50 ಕೋಟಿ ಜನರನ್ನು ಬಡತನದಿಂದ ಹೊರತಂದಿದೆ’: ಬಿಹಾರದಲ್ಲಿ ಪ್ರಧಾನಿ ಮೋದಿ ಹೇಳಿಕೆ

ಪಾಟ್ನಾ: ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಬಡತನ ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿದೆ. ಬಡವರನ್ನು ದಾರಿ ತಪ್ಪಿಸುವ ಕೆಲಸ ಮಾಡಿದೆ. ಆದರೆ, ತಮ್ಮ ಸರ್ಕಾರದ ಉತ್ತಮ ಉದ್ದೇಶಗಳು ಮತ್ತು ಪ್ರಯತ್ನಗಳಿಂದಾಗಿ ದೇಶದ 50...