Homeಮುಖಪುಟಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದ ಕಂಗನಾ: ವ್ಯಾಪಕ ಟ್ರೋಲ್

ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದ ಕಂಗನಾ: ವ್ಯಾಪಕ ಟ್ರೋಲ್

- Advertisement -
- Advertisement -

‘ಟೈಮ್ಸ್‌ ನೌ ಸಮ್ಮಿಟ್‌’ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ “ಸ್ವತಂತ್ರ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್” ಎಂದು ಹೇಳುವ ಮೂಲಕ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ನಗೆ ಪಾಟಲಿಗೀಡಾಗಿದ್ದಾರೆ.

ಕಂಗನಾ ಹೇಳಿಕೆಯ ವಿಡಿಯೋವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಮತ್ತು ರಾಜಕೀಯ, ಸಾಮಾಜಿಕ ಮುಖಂಡರು ಹಂಚಿಕೊಂಡಿದ್ದು, ವೈರಲ್ ಆಗಿದೆ.

ಕಾರ್ಯಕ್ರಮದ ನಿರೂಪಕಿ ನವಿಕಾ ಕುಮಾರ್ ಅವರು ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಅಲ್ಲ ಎಂದು ಹೇಳಿದಾಗ, ಕಂಗನಾ “ಹಾಗಾದರೆ ಅವರೇಕೆ ಪ್ರಧಾನಿಯಾಗಲಿಲ್ಲ?” ಎಂದು ಮರು ಪ್ರಶ್ನಿಸಿದ್ದಾರೆ. ಕಂಗನಾರ ಈ ಸಂದರ್ಶನ ನಡೆದು ಒಂದು ವಾರದ ಬಳಿಕ ಈ ಹೇಳಿಕೆ ಸುದ್ದಿಯಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಕಂಗನಾ ಹೇಳಿಕೆಯನ್ನು ಟ್ರೋಲ್ ಮಾಡಿರುವ ಕಾಂಗ್ರೆಸ್‌, “ಕಂಗನಾ ಜಿ ಇತಿಹಾಸದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ. ಇಂತಹ ಇನ್ನೂ ನಾಲ್ಕು ಉದಾಹರಣೆಗಳನ್ನು ಮುಂದಿಟ್ಟರೆ ಬಿಜೆಪಿ ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಬಹುದು” ಎಂದಿದೆ.

 

View this post on Instagram

 

A post shared by Congress (@incindia)

ಈ ವಿಡಿಯೋವನ್ನು ಕಾಂಗ್ರೆಸ್ ನಾಯಕ ಬಿ ವಿ ಶ್ರೀನಿವಾಸ್‌ ಅವರು, ‘ಹೇ ಪ್ರಭು’ ಎಂದು ಹೇಳಿ ಹಂಚಿಕೊಂಡಿದ್ದಾರೆ.

ನಟ ಪ್ರಕಾಶ್ ರಾಜ್ ಅವರು, “ಮಹಾಪ್ರಭುವಿನ ಆಸ್ಥಾನ ವಿದೂಷಕರು” ಎಂದು ಉಲ್ಲೇಖಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ.

ಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ಕಂಗನಾ ಹೇಳಿಕೆಯ ವಿಡಿಯೋಗೆ ಪ್ರತಿಕ್ರಿಯಿಸಿದ್ದು, “ವಿದ್ಯಾವಂತ ಮತ್ತು ಪ್ರಜ್ಞಾವಂತರಿಗೆ ಮತ ನೀಡಿ” ಎಂದಿದ್ದಾರೆ.

ಕಂಗನಾ ಹೇಳಿಕೆ ಎಲ್ಲೆಡೆ ಟ್ರೋಲ್ ಆಗಿದ್ದರೂ, ಇದೊಂದು ಗಂಭೀರ ವಿಚಾರ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರನ್ನು ಸದಾ ಟೀಕಿಸುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಹಿಂದೆಯೂ ನೆಹರೂ ಅಲ್ಲ, ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎಂಬ ಹೇಳಿಕೆ ನೀಡಿದ್ದರು. ಅದನ್ನೇ ಕಂಗನಾ ರಣಾವತ್ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಕ್ರೂರ ಭಯೋತ್ಪಾದನೆ, ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ಕೊನೆಗೊಳಿಸುತ್ತೇವೆ: ಸಿಪಿಐ(ಎಂ) ಪ್ರಣಾಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...