Homeಕರ್ನಾಟಕಮತ್ತೆ ಮತ್ತೆ ಗುನುಗುವಂತೆ ಮಾಡುವ ಅಪ್ಪು ಕಂಠಸಿರಿಯಲ್ಲಿ ಮೂಡಿದ ಹಾಡುಗಳಿವು

ಮತ್ತೆ ಮತ್ತೆ ಗುನುಗುವಂತೆ ಮಾಡುವ ಅಪ್ಪು ಕಂಠಸಿರಿಯಲ್ಲಿ ಮೂಡಿದ ಹಾಡುಗಳಿವು

- Advertisement -
- Advertisement -

ನಮ್ಮನ್ನಗಲಿದ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಕನ್ನಡಿಗರಿಗೆ ಅಪ್ಪು ಎಂದೇ ಚಿರಪರಿಚಿತರು. ಅವರು ಗಾಯಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ನಟರಾಗಿ, ನಿರ್ಮಾಪಕರಾಗಿ, ಗಾಯಕರಾಗಿ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

  1. ಚಲಿಸುವ ಮೋಡಗಳು:  ಪುನೀತ್ ರಾಜ್‌ಕುಮಾರ್‌ ಹಾಡು ಎಂದ ತಕ್ಷಣ ನೆನಪಾಗುವುದು ‘ಕಾಣದಂತೆ ಮಾಯವಾದನೋ ಹಾಡು‘. ಹೌದು ಡಾ.ರಾಜ್‌ಕುಮಾರ್‌ ಅಭಿನಯದ ಚಲಿಸುವ ಮೋಡಗಳು ಚಿತ್ರದ ಈ ಹಾಡು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಹಾಡು ಅಚ್ಚುಮೆಚ್ಚು.

 

2. ಯಾರಿವನು: ಚಿತ್ರದ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ’ ಎಂಬ ಹಾಡು ಕೂಡ ಅಷ್ಟೇ ಪ್ರಸಿದ್ಧಿ. ಅಮ್ಮ-ಮಕ್ಕಳ ನೆಚ್ಚಿನ ಗೀತೆಯಾಗಿ ಇಂದಿಗೂ ಗುನುಗಿಸಿಕೊಳ್ಳುತ್ತದೆ.

3. ಭಾಗ್ಯವಂತ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ’ ಹಾಡು ಕೂಡ ಮಕ್ಕಳ ಹಾಡಾಗಿ ಮನೆ ಮಾತಾಗಿದೆ. ಜೋಗುಳದ ಹಾಡಾಗಿ ಇಂದಿಗೂ ಮನೆಗಳಲ್ಲಿ ಗುನುಗಲಾಗುತ್ತದೆ.

4. ಬೆಟ್ಟದ ಹೂ ಚಿತ್ರದ ’ಬಿಸಿಲೇ ಇರಲಿ ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ’ ಹಾಡನ್ನು ಎಸ್‌.ಪಿ.ಬಿ ಜೊತೆಗೆ ಹಾಡಿದ್ದರು ಅಪ್ಪು. ಈ ಹಾಡು ಕೂಡ ಬಹಳ ಜನಪ್ರಿಯವಾಗಿದೆ. ಈ ಚಿತ್ರದ ನಟನೆಗಾಗಿ ಪುನೀತ್‌ ರಾಜ್‌ಕುಮಾರ್‌ಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿದೆ.

ಇದನ್ನೂ ಓದಿ: ಕನ್ನಡಿಗರ ರಾಜಕುಮಾರ, ಪ್ರೀತಿಯ ’ಅಪ್ಪು’ ನಡೆದು ಬಂದ ಹಾದಿ

5. ಅಪ್ಪು ಪುನೀತ್ ರಾಜ್‌ಕುಮಾರ್‌ ನಾಯಕನಟನಾಗಿ ಕಾಣಿಸಿಕೊಂಡ ಮೊದಲ ಚಿತ್ರ. ಈ ಚಿತ್ರದ ’ತಾಲಿಬಾನ್ ಅಲ್ಲ ಅಲ್ಲ’ ಹಾಡನ್ನು ಪುನೀತ್ ರಾಜ್‌ಕುಮಾರ್‌ ಹಾಡಿದ್ದರು. ಕಾಲೇಜ್ ಹುಡುಗರಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿತ್ತು. ನಾಯಕಿಯಾಗಿ ರಕ್ಷಿತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಿತ್ರ.

6. ಮೈಲಾರಿ: ನಟ ಶಿವರಾಜ್‌ಕುಮಾರ್‌ ಅಭಿನಯದ ಮೈಲಾರಿ ಚಿತ್ರದ ‘ಊರಿಂದ ಓಡಿಬಂದ ಜೋಗಿನಾ ಅಲ್ಲರಿ..ಮೈಲಾಪುರ ಮೈಲಾರಿ’ ಹಾಡನ್ನು ಅಪ್ಪು ಹಾಡಿದ್ದರು.

7. ರನ್ ಆ್ಯಂಟನಿ: ರಾಘವೇಂದ್ರ ರಾಜ್‌ಕುಮಾರ್‌ ಪುತ್ರ ವಿನಯ್ ರಾಜ್‌ಕುಮಾರ್‌ ಅಭಿನಯದ ರನ್ ಆ್ಯಂಟನಿ ಚಿತ್ರದ ’ಜನಕ್ ಜನಕ್ ಮನ ಡೋಲೆ’ ಹಾಡಿಗೆ ಅಪ್ಪು ದನಿಯಾಗಿದ್ದರು.

8. ವಂಶಿ ಚಿತ್ರದ ’ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ’ ಹಾಡಿಗೆ ಶ್ರೇಯಾ ಗೋಶಾಲ್‌ ಜೊತೆಗೆ ದನಿಯಾಗಿದ್ದಾರೆ. ಚಿತ್ರದಲ್ಲಿ ನಿಖಿತಾ ನಾಯಕಿಯಾಗಿದ್ದರು.

9. ರಾಮ್ ಚಿತ್ರದ ’ಹೊಸ ಗಾನ ಬಜಾನಾ’ ಹಾಡು ಹೊಸ ಟ್ರೆಂಡ್ ಸೃಷ್ಟಿ ಮಾಡಿತ್ತು ಅಂದ್ರೆ ತಪ್ಪಾಗಲ್ಲ. ಪ್ರಿಯಾಮಣಿ, ರಂಗಾಯಣ ರಘು, ಶ್ರೀನಾಥ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿತ್ತು.

10. ಅಕಿರಾ ಚಿತ್ರದ ’ಕಣ್ಣ ಸನ್ನೆಯಿಂದಲೇನೆ ನನ್ನ ಸಂದೇಶಕೆ ಸಹಿ ಹಾಕು ನಲ್ಲೆ’ ಎಂಬ ರೋಮ್ಯಾಂಟಿಕ್ ಹಾಡನಲ್ಲೂ ಅಪ್ಪು ಮ್ಯಾಜಿಕ್ ಮಾಡಿದ್ದರು.

ಇದನ್ನೂ ಓದಿ: ಕನ್ನಡದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್‌ ಇನ್ನಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...