Homeಮುಖಪುಟಕನ್ಸಾಸ್ ಸಿಟಿ: ಬಾಗಿಲು ಬೆಲ್ ಬಾರಿಸಿದ್ದಕ್ಕೆ ಕಪ್ಪುವರ್ಣೀಯ ಯುವಕನ ಮೇಲೆ ಗುಂಡು ಹಾರಿಸಿದ ಮನೆ ಮಾಲಿಕ

ಕನ್ಸಾಸ್ ಸಿಟಿ: ಬಾಗಿಲು ಬೆಲ್ ಬಾರಿಸಿದ್ದಕ್ಕೆ ಕಪ್ಪುವರ್ಣೀಯ ಯುವಕನ ಮೇಲೆ ಗುಂಡು ಹಾರಿಸಿದ ಮನೆ ಮಾಲಿಕ

- Advertisement -
- Advertisement -

ಕಪ್ಪುವರ್ಣೀಯ ಯುವಕನೊಬ್ಬ ಬಾಗಿಲು ಬೆಲ್ ಬಾರಿಸಿದ್ದಕ್ಕೆ ಮನೆ ಮಾಲಿಕ ಆತನ ಮೇಲೆ ಎರಡು ಬಾರಿ ಗುಂಡು ಹಾರಿಸಿರುವ ಘಟನೆ ಕಳೆದ ವಾರ ಮಿಸೌರಿಯ ಕನ್ಸಾಸ್ ಸಿಟಿಯಲ್ಲಿ ನಡೆದಿದೆ. ಸಧ್ಯ ಗುಂಡು ಹಾರಿಸಿರುವ ವಯಸ್ಸಾದ ವ್ಯಕ್ತಿಯ ವಿರುದ್ಧ ಸೋಮವಾರ ಆರೋಪಗಳನ್ನು ದಾಖಲಿಸಲಾಗಿದೆ ಎಂದು ಕ್ಲೇ ಕೌಂಟಿ ಪ್ರಾಸಿಕ್ಯೂಟಿಂಗ್ ಅಟಾರ್ನಿ ಜಕಾರಿ ಥಾಂಪ್ಸನ್ ಹೇಳಿದ್ದಾರೆ.

85 ವರ್ಷ ವಯಸ್ಸಿನ ಬಿಳಿವರ್ಣೀಯ ಆಂಡ್ರ್ಯೂ ಲೆಸ್ಟರ್ ಅವರು, 16 ವರ್ಷದ ರಾಲ್ಫ್ ಯಾರ್ಲ್ ಅವರಿಗೆ ಗುರುವಾರ ರಾತ್ರಿ 10ಗಂಟೆಯ ಸುಮಾರಿಗೆ ಪಾಂಯಿಂಟ್ 32-ಕ್ಯಾಲಿಬರ್ ಪಿಸ್ತೂಲ್‌ನಿಂದ ಗುಂಡುಹೊಡೆದಿದ್ದಾರೆ. ಈ ಸಂಬಂಧ ಅವರ ಮೇಲೆ ಸಶಸ್ತ್ರ ಆಕ್ರಮಣ ಮತ್ತೊಂದು ಸಶಸ್ತ್ರ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗುಂಡೇಟು ತಿಂದ ಯಾರ್ಲ್ ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ತಲೆ ಮತ್ತು ತೋಳಿಗೆ ಗುಂಡುಬಿದ್ದು ಗಾಯಗೊಂಡಿದ್ದರು, ಸಧ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಗುಂಡಿನ ದಾಳಿಯು ”ಜನಾಂಗೀಯ ಅಂಶ” ಒಳಗೊಂಡಿದೆ ಎಂದು ಥಾಂಪ್ಸನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

”ಇದು ಎಷ್ಟು ನಿರಾಶಾದಾಯಕವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆದರೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಈ ಬಗ್ಗೆ ತನಿಖೆ ಮುಂದುವರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ” ಎಂದು ಥಾಂಪ್ಸನ್ ಹೇಳಿದರು.

ಇದನ್ನೂ ಓದಿ: ಸುಡಾನ್‌ ಸಂಘರ್ಷ: 200 ಜನ ಸಾವು, 1800 ಜನರಿಗೆ ಗಾಯ; ಸಂಕಷ್ಟದಲ್ಲಿ ಕರ್ನಾಟಕದ ಜನ

ಯಾರ್ಲ್‌ನ ಚಿಕ್ಕಮ್ಮ ಸ್ಪೂನ್‌ಮೋರ್ ಅವರು, ಆತನ ಆರೈಕೆಗಾಗಿ ಹಣವನ್ನು ಸಂಗ್ರಹಿಸಲು GoFundMe ಪುಟವನ್ನು ತೆರೆದಿದ್ದಾರೆ. ಆ ಪುಟದ ಪ್ರಕಾರ, ಯಾರ್ಲ್ ಸಹೋದರರು ಸ್ನೇಹಿತರ ಮನೆಗೆ ಹೋಗಿದ್ದರು. ಅವರನ್ನು ಕರೆತರಲು ಹೋದಾಗ ತಪ್ಪಾದ ವಿಳಾಸಕ್ಕೆ ಹೋಗಿ ಬೆಲ್ ಮಾಡಿದ್ದಾನೆ. ಈ ವೇಳೆ ಮನೆ ಮಾಲಿಕ ಗ್ಲಾಸ್‌ನಲ್ಲಿ ನೋಡಿದ ಮನೆ ಮಾಲಿಕ ಕಪ್ಪು ವರ್ಣೀಯ ಮನೆ ಕಳ್ಳತನಕ್ಕೆ ಬಂದಿದ್ದಾನೆ ಎಂದು ಗುಂಡು ಹಾರಿಸಿದ್ದಾನೆ. ಗುಂಡು ಬಿದ್ದ ತಕ್ಷಣ ಅವನು ನೆಲಕ್ಕೆ ಬಿದ್ದಿದ್ದಾನೆ ಆಗಲೂ ಗುಂಡು ಹಾರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಯಾರ್ಲ್ ಅವರು ”ಮಿಸೌರಿಯ ಅಗ್ರ ಬಾಸ್ ಕ್ಲಾರಿನೆಟ್ ಪ್ಲೇಯರ್‌ಗಳಲ್ಲಿ ಒಬ್ಬರು, ಮೆಟ್ರೋಪಾಲಿಟನ್‌ನ ಯುವ ಆರ್ಕೆಸ್ಟ್ರಾದಲ್ಲಿ ಅನೇಕ ವಾದ್ಯಗಳನ್ನು ಆತ ನುಡಿಸುತ್ತಿದ್ದ” ಎಂದು ಆ ಪುಟದಲ್ಲಿ ಹೇಳಲಾಗಿದೆ.

ಹಾಲೆ ಬೆರ್ರಿ, ಕೆರ್ರಿ ವಾಷಿಂಗ್ಟನ್ ಮತ್ತು ಜೆನ್ನಿಫರ್ ಹಡ್ಸನ್ ಅವರಂತಹ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ ಮತ್ತು ಯಾರ್ಲ್ ಕುಟುಂಬಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಸ್ಥಳೀಯ ಕಾಲಮಾನದಂತೆ ಆ ಪುಟವು $1.5m (28,70,16,982 ರೂ.) ಸಂಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read