Homeಕರ್ನಾಟಕಭೂಮಿ ಕಿತ್ತುಕೊಳ್ಳುವುದು: ಮೋದಿ ಕೂಡ ಮಾಡಲಾಗದ್ದನ್ನು ಮಾಡಿ ತೋರಿಸಿದ ಭ್ರಷ್ಟ ರಾಜ್ಯ ಸರ್ಕಾರ

ಭೂಮಿ ಕಿತ್ತುಕೊಳ್ಳುವುದು: ಮೋದಿ ಕೂಡ ಮಾಡಲಾಗದ್ದನ್ನು ಮಾಡಿ ತೋರಿಸಿದ ಭ್ರಷ್ಟ ರಾಜ್ಯ ಸರ್ಕಾರ

- Advertisement -
- Advertisement -

| ಮುತ್ತುರಾಜು |

ಅದು 2014ರ ಡಿಸೆಂಬರ್. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದು ಕೇವಲ ಆರು ತಿಂಗಳಾಗಿತ್ತು ಅಷ್ಟೆ. ತನ್ನನ್ನು ಅನಾಯಾಸವಾಗಿ ಅಧಿಕಾರಕ್ಕೆ ತಂದ ಅದಾನಿ ಅಂಬಾನಿಗಳ ಋಣ ತೀರಿಸಲು 2013ರಲ್ಲಿ ಜನರ ಹೋರಾಟಕ್ಕೆ ಮಣಿದು ಯುಪಿಎ2 ತಂದಿದ್ದ ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಮೋದಿ ಮುಂದಾಗಿದ್ದರು. ಆದರೆ ಇದರ ವಿರುದ್ಧ ದೇಶಾದ್ಯಂತ ಎಲ್ಲಾ ರೈತ ಸಂಘಟನೆಗಳು, ಜನಪರ ಸಂಘಟನೆಗಳು ಧೀರೋಧಾತ್ತ ಹೋರಾಟ ನಡೆಸಿದರು. ವಿಧಿ ಇಲ್ಲದೇ ನರೇಂದ್ರ ಮೋದಿಯವರು ಸುಗ್ರಿವಾಜ್ಞೆ ವಾಪಸ್ ಪಡೆದರು. ಇದು ಮೋದಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಅವರಿಗೆ ಸೋಲಾಗಿತ್ತು. ಜೊತೆಗೆ ಅದು ರೈತರ ಮೊದಲ ಗೆಲುವಾಗಿತ್ತೂ ಕೂಡ.

ಇದು 2019ರ ಫೆಬ್ರವರಿಯಲ್ಲಿ ನಾಲ್ಕು ವರ್ಷಗಳ ನಂತರ ರೈತರ ಪಾಲಿಗೆ ಕರಾಳ ಶಾಸನವಾಗಿರುವ ದೊಡ್ಡ ಬಂಡವಾಳದಾರರು, ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುವ ಭೂ ಸ್ವಾಧೀನ, ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ಕರ್ನಾಟಕ ತಿದ್ದುಪಡಿ ಮಸೂದೆ -2019 ಯನ್ನು ಕರ್ನಾಟಕ ಸರ್ಕಾರ ಯಾವುದೇ ಚರ್ಚೆ ಇಲ್ಲದೇ ಅಂಗಿಕರಿಸಿದೆ. ಅಂದರೆ ಮೋದಿ ಮಾಡಲಾಗದ್ದನ್ನು ಮಾಡಿ ತೋರಿಸಿದೆ ಭ್ರಷ್ಟ ರಾಜ್ಯ ಸರ್ಕಾರ.

 

ಕಳೆದ ಫೆಬ್ರವರಿ 6 ರಿಂದ 13 ರವರೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಏನೊಂದು ಚರ್ಚೆ ಮಾಡದೇ, ಬಿಜೆಪಿಯ ಸರ್ಕಾರ ಬೀಳಿಸುವ ದುಷ್ಕೃತ್ಯದಿಂದುಂಟಾದ ಪರಿಸ್ಥಿತಿಯನ್ನು ವಿಧಾನಸಭೆಯಲ್ಲಿ ದುರುಪಯೋಗಪಡಿಸಿಕೊಂಡು ಸರ್ಕಾರ ಈ ಮಸೂದೆ ಅಂಗೀಕರಿಸಿದೆ. ರೈತರ ಮತ್ತು ರೈತಸಂಘಗಳ ಜೊತೆ ಕನಿಷ್ಠ ಚರ್ಚೆ ನಡೆಸುವ ಸೌಜನ್ಯವನ್ನು ಸರಕಾರ ತೋರದಿರುವುದು ದುರಾದೃಷ್ಟಕರವಾಗಿದೆ.

ಇದೊಂದು ರೈತ ವಿರೋಧಿಯಾದ ಕರಾಳ ತಿದ್ದುಪಡಿಯಾಗಿದೆ. ಇದು ರೈತರ ಜಮೀನುಗಳನ್ನು ಯಾವುದೇ ಒಪ್ಪಿಗೆಯಿಲ್ಲದೇ, ಭೂಸ್ವಾಧೀನದಿಂದ ಸಮಾಜ ಹಾಗೂ ಪರಿಸರದ ಮೇಲಾಗುವ ಪರಿಣಾಮಗಳನ್ನಾಗಲೀ ಮತ್ತು ದೇಶದ, ರಾಜ್ಯದ ಆಹಾರ ಭದ್ರತೆ ಹಾಗೂ ಆಹಾರದ ಸ್ವಾವಲಂಬನೆಯ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಪರಿಗಣಿಸದೇ, ಪುನರ್ವಸತಿ ಕ್ರಮಗಳನ್ನು ದುರ್ಬಲಗೊಳಿಸುವ ಹಾಗೂ ಬೇಕಾಬಿಟ್ಟಿ ದರಕ್ಕೆ ಸ್ವಾಧೀನ ಮಾಡುವ ದುರುದ್ದೇಶವನ್ನು ಹೊಂದಿದೆ. ಇದು ಈ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಮೂರು ಬಾರಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಯತ್ನಿಸಿದುದರ ಪಡಿಯಚ್ಚಾಗಿದೆ.

ಕಾಯ್ದೆಯಲ್ಲಿ ಈ ಮೊದಲು ಭೂಸ್ವಾಧೀನಕ್ಕೆ ಶೇ.80 ರಷ್ಟು ರೈತರ ಒಪ್ಪಿಗೆ ಪಡೆಯಬೇಕಿತ್ತು, ಕೈಗಾರಿಕಾ ಪ್ರದೇಶಾಭಿವೃದ್ಧಿ , ನಗರೀಕರಣ, ರಸ್ತೆಗೆ ಸೇರಿದಂತೆ 6 ಅಂಶಗಳಿಗೆ ಮಾತ್ರ ಭೂಸ್ವಾಧೀನಕ್ಕೆ ಅವಕಾಶ ಇತ್ತು. ಆದರೀಗ ಉದ್ಧೇಶಿತ ತಿದ್ದುಪಡಿ ಬಿಲ್‍ನಲ್ಲಿ 6 ಅಂಶಗಳನ್ನು ಸೇರಿಸಿಲ್ಲ. ಇದರಿಂದ ಕೇವಲ ಉದ್ಯಮಿಗಳು, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿರುವುದು ಸ್ಪಷ್ಟವಾಗಿದೆ. ಸಮಾಜವಾದಿ, ಬಡವರ ಪರ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಕಾಯ್ದೆ ತಿದ್ದುಪಡಿಗೆ ಸೂಚಿಸಿರುವುದು ದೊಡ್ಡ ದುರಂತವಾಗಿದೆ. ಅವರು ಸಹ ಈ ಬಂಡವಾಳಿಗರ ಕಪಿಮುಷ್ಟಿಯಲ್ಲಿಯೇ ಇದ್ದಾರೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ.

ಇನ್ನು ರೈತರ ಪಕ್ಷ, ಮಣ್ಣಿನ ಮಕ್ಕಳು ಎಂದು ಬಡಾಯಿ ಕೊಚ್ಚಿಕೊಳ್ಳುವ ದೇವೇಗೌಡರು ಮತ್ತು ಕುಮಾರಸ್ವಾಮಿ
ಕರ್ನಾಟಕ ಜನರಿಗೆ ಮಾಡಿರುವ ದೊಡ್ಡ ದ್ರೋಹ ಇದಾಗಿದೆ. ಹಣ ಅಧಿಕಾರಕ್ಕಾಗಿ ತಾವು ಏನು ಬೇಕಾದರೂ ಮಾಡುತ್ತೇವೆ ಎಂಬುದನ್ನು ಅವರು ಈ ಮಸೂದೆ ಅಂಗೀಕಾರದ ಮೂಲಕ ತೋರಿಸಿದ್ದಾರೆ. ಇನ್ನು ಪ್ರತಿಪಕ್ಷವಾದ ಬಿಜೆಪಿ ತಮಗೂ ಕೂಡ ಇದೇ ಬೇಕಾಗಿತ್ತು ಎನ್ನುವ ಮೂಲಕ ಮಸೂದೆ ಮಂಡನೆಗೆ ಯಾವುದೇ ಪ್ರತಿರೋಧ ವ್ಯಕ್ತಪಡಿಸಿಲ್ಲ.

ಒಟ್ಟಾರೆ ಕರ್ನಾಟಕ ಈ ಮೂರು ಪಕ್ಷಗಳು ಸಹ ಆರ್ಥಿಕ ವಿಚಾರಗಳು, ರೈತರು ವರ್ಸಸ್ ಬಂಡವಾಳಶಾಹಿಗಳು ಎಂದು ಬಂದಾಗ ತಾವೆಲ್ಲರೂ ಒಂದೇ ಅಂದರೆ ಪಾರ್ಟಿ ಫಂಡ್ ಕೊಡುವ ಬಂಡವಾಳಶಾಹಿಬಳ ಪರವೇ ಹೊರತು ಜನಪರವಲ್ಲ ಎಂದು ತೋರಿಸಿವೆ. ಕರ್ನಾಟಕ ಜನತೆ ಮತ್ತು ರೈತ ಸಂಘಗಳು ಈ ಪಕ್ಷಗಳ ಅಸಲಿ ಮುಖವನ್ನು ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಮತ್ತೊಂದು ಮಹತ್ವದ ಹೋರಾಟಕ್ಕೆ ತಯಾರಾಗಬೇಕಿದೆ.

ಪುಟ್ಟಣ್ಣಯ್ಯ ನವರಂತಹ ರೈತ ನಾಯಕರು ಏಕೆ ವಿಧಾನಸೌಧದಲ್ಲಿರಬೇಕು ಎಂಬುದು ನಮಗೆ ಈಗ ಅರ್ಥವಾಗುತ್ತಿದೆ. ಜನಪರ ಕಾಳಜಿಯ ಕೆಲವರಾದರು ಶಾಸಕರಿದ್ದರೆ ಕರ್ನಾಟಕಕ್ಕೆ ಈ ಸ್ಥಿತಿ ಬರುತ್ತಿರುತ್ತಿಲ್ಲ. ಅವರು ಈ ರೀತಿಯ ಜನವಿರೋಧಿ ಮಸೂದೆಗಳು ಚರ್ಚೆಗೆ ಬಂದಾಗ ಕನಿಷ್ಟ ದನಿ ಎತ್ತುತ್ತಿದ್ದರು. ಒಂದು ಚರ್ಚೆಗೆ ಅವಕಾಶ ಮಾಡಿಕೊಡುತ್ತಿದ್ದರು. ಆದರೆ ಅಂತಹ ದನಿಗಳು ಶಾಸನಸಭೆಗಳಲ್ಲಿ ಇಲ್ಲದಿರುವುದರಿಂದ ಮತ್ತು ಚಳವಳಿಗಳು ಗಟ್ಟಿಯಾಗಿಲ್ಲದಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ.

ಈಗಲೂ ಕಾಲ ಮೀರಿ ಹೋಗಿಲ್ಲ. 2015ರ ಆರಂಭದಲ್ಲಿ ಯಾವ ರೀತಿ ದೇಶದ ರೈತ ಸಂಘಟನೆಗಳು ಕೆಚ್ಚಿನಿಂದ ಹೋರಾಟ ಮಾಡಿ ಗೆಲುವು ಸಾಧಿಸಿದರೋ ಅಂತಹ ಮತ್ತೊಂದು ಹೋರಾಟವನ್ನು ರಾಜ್ಯದಲ್ಲಿ ಎಲ್ಲಾ ಸಂಘಟನೆಗಳು ಸೇರಿ ಕಟ್ಟಬೇಕಿದೆ. ಈಗಾಗಲೇ ಕರ್ನಾಟಕ ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ ಅಲ್ಲಲ್ಲಿ ಈ ಮಸೂದೆಯ ವಿರುದ್ಧ ದನಿ ಎತ್ತಿವೆ. ನಿನ್ನೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯ ಹೆದ್ದಾರ್ ಬಂದ್ ಗೆ ಕರೆನೀಡಿ ರಾಜ್ಯಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ. ಇದು ದೊಡ್ಡ ಆಂದೋಲನವಾಗಬೇಕಿದೆ. ಆಗ ಮಾತ್ರ ಉದ್ದೇಶಿತ ದುಷ್ಟ ಮಸೂದೆಯನ್ನು ಸೋಲಿಸಲು ಸಾಧ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒಳ್ಳೆಯ ಲೇಖನ, ಇಂತಹ ವಿಚಾರಗಳು ಬೆಳಕಿಗೆ ಬರದೇ ಹಾಗೇ ಮುಚ್ಚಿಹೋಗುತ್ತವೆ. ಈ ಲೇಖನಕ್ಕಾಗಿ ಧನ್ಯವಾದಗಳು.

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...