ವರಿಷ್ಠರ ಸೂಚನೆಯಂತೆ ನಡೆಯುವೆ: ರಾಜೀನಾಮೆ ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ತನ್ನಲ್ಲಿಯೆ ಇಟ್ಟುಕೊಳ್ಳುತ್ತರೆ, ಹೀಗಾಗಿ ಅವರು ಸಾರ್ವಜನಿಕವಾಗಿ ನಗುವುದು ಬಹಳ ವಿರಳ. ಹೀಗಿರುವ ಅವರು, ಜುಲೈ 17 ರಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬ ಸುದ್ದಿಯಲ್ಲಿ ಸತ್ಯವಿಲ್ಲ ಎಂದು ಹೇಳುವಾಗ ಅದು ಸರಳ ನಿರಾಕರಣೆಗಿಂತ ಹೆಚ್ಚಿನ ವಿಶ್ವಾಸವನ್ನು ಹೊಂದಿತ್ತು.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಬಹುದು. ಕರ್ನಾಟಕ ಮುಖ್ಯಮಂತ್ರಿ ಜುಲೈ 26 ರಿಂದ ಆಗಸ್ಟ್ 15 ರ ನಡುವೆ ಯಾವುದಾದರೂ ಒಂದು ದಿನ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಹಲವು ಮಾಧ್ಯಮ ವರದಿಗಳು ಉಲ್ಲೇಖಿಸಿದೆ.

ಉತ್ತರ ಪ್ರದೇಶದ ನಂತರ ಕರ್ನಾಟಕದಲ್ಲಿ ನಾಯಕತ್ವದ ಪ್ರಶ್ನೆ

ಯಡಿಯೂರಪ್ಪ ಅವರ ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಅವರ ರಾಜೀನಾಮೆ ದಿನಾಂಕದ ಬಗ್ಗೆ ಅನಿಶ್ಚಿತತೆಯನ್ನು ಉಂಟುಮಾಡಿವೆ ಎಂದು ಮೂಲಗಳು ಹೇಳಿವೆ. ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಹೊಂದಿರುವ ಧಾರ್ಮಿಕ ವ್ಯಕ್ತಿಯಾದ ಯಡಿಯೂರಪ್ಪ ಅವರು ಆಗಸ್ಟ್ 8 ರಂದು ಆಶಾಡಾ ತಿಂಗಳು ಮುಗಿಯುವವರೆಗೂ (ದುರುದ್ದೇಶಪೂರಿತವೆಂದು) ಕಾಯಲು ಬಯಸುತ್ತಾರೆ.

ಇದನ್ನೂ ಓದಿ: ಬಿಜೆಪಿ ಸೇರುತ್ತಿರುವ ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌; ಆಪ್ತರ ಹೇಳಿಕೆ

ಯಡಿಯೂರಪ್ಪ ಅವರನ್ನು ಬದಲಿಸುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ ನಿರ್ಧಾರದ ಬಗೆಗಿನ ಪ್ರಶ್ನೆಯನ್ನು ಪಕ್ಷದ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ಈಗಾಗಲೆ ನಿರಾಕರಿಸಿದ್ದಾರೆ.

ಯಡಿಯೂರಪ್ಪ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ಶಾಸಕರು, ಒಕ್ಕೂಟ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯದಲ್ಲಿಯೂ ಸಿಎಂ ಬದಲಾವಣೆ ಆಗಬಹುದು ಎಂದು ಆಶಿಸಿದ್ದರು. ಆದರೆ, ಉತ್ತರಪ್ರದೇಶದಲ್ಲಿ ಭಿನ್ನಮತೀಯರನ್ನು ಶಾಂತಗೊಳಿಸಿದ ನಂತರವೇ ಪಕ್ಷವು ಕರ್ನಾಟಕದ ವಿಚಾರವನ್ನು ಕೈಗೆತ್ತಿಕೊಳ್ಳಲಿದೆ ಎಂದು ಪಕ್ಷದ ವಲಯದಲ್ಲಿ ತಿಳಿದುಬಂದಿದೆ.

ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ನು ಮಾತನಾಡಿದ್ದಾರೆ?

ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾಗ ಮೋದಿಯನ್ನು ಭೇಟಿ ಮಾಡಿ 10 ನಿಮಿಷಗಳ ಕಾಲ ಸಭೆ ನಡೆಸಿದ್ದಾರೆ. ಈ ವೇಳೆ ಅವರು 2023ರಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿಯವರೆಗೂ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಸಭೆಯ ಆರಂಭದಲ್ಲಿ ಕೇಳಿಕೊಂಡಿದ್ದಾರೆ.

ಆದರೆ, ಪಕ್ಷದ ಎಲ್ಲ ನಾಯಕರು ಯುವ ಪೀಳಿಗೆಗೆ ದಾರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪ್ರಧಾನಿ ಮೋದಿಯವರು ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಿಜೆಪಿ ಮುಗಿಸಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು: ಕಾಂಗ್ರೆಸ್

ಹೀಗಾಗಿ, ಸಿಎಂ ಬಿಎಸ್‌ವೈ ‘ಅನಾರೋಗ್ಯದ ಕಾರಣ’ ನೀಡಿ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಅದರ ನಂತರ ಪಿಎಂ ಮೋದಿ ಅವರು ‘ದಯವಿಟ್ಟು ನೀವು ಹೊರಡುವ ಮೊದಲು ಐದು ನಿಮಿಷಗಳ ಕಾಲ ಕುಳಿತುಕೊಳ್ಳಿ’ ಎಂದು ಯಡಿಯೂರಪ್ಪ ಅವರಿಗೆ ಹೇಳಿದರು ಎಂದು ತಿಳಿದು ಬಂದಿದೆ. ಇತರ ನಾಯಕರೊಂದಿಗಿನ ಸಭೆಯಲ್ಲಿ, ಪಕ್ಷವನ್ನು ಬಲಪಡಿಸುವ ಮತ್ತು ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಜಯಗಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿಯನ್ನು ಕೇಳಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಕೆಟ್ಟ ಪ್ರದರ್ಶನ ನೀಡಿದೆ. ಈ ಚುನಾವಣೆಗಳಲ್ಲಿ ಬಿಜೆಪಿ 3 ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ, ಮೇ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬೆಳಗಾವಿಯನ್ನು ಅತ್ಯಂತ ಕಡಿಮೆ ಮಾರ್ಜಿನ್‌ನಲ್ಲಿ ಬಿಜೆಪಿ ಗೆದ್ದಿದೆ. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಸೋಲುಂಡಿದೆ.

ಅಮಿತ್ ಶಾ ಜೊತೆಗೆ ಒಪ್ಪಂದ?

ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಜುಲೈ 16 ರಿಂದ 17 ರ ವರೆಗೆ ಬಿಜೆಪಿಯ ಎಲ್ಲ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ. ಅವರು ತಮ್ಮ ಮುಂದುವರಿಕೆ ಅಥವಾ ರಾಜೀನಾಮೆಯ ಬಗ್ಗೆ ಅಂತಿಮ ಹೇಳಿಕೆಯನ್ನು ಅಲ್ಲಿ ನೀಡಿದ್ದಾರೆ.

ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡದೆ ವಿಶೇಷ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು.

ಅದರೆ, ಈ ನಡುವೆ ಅವರಿಗೆ ಅಮಿತ್‌‌ ಶಾ ಕಡೆಯಿಂದ ಬುಲಾವ್ ಬಂದಿದ್ದು ನಂತರ ವಾಪಸ್‌ ಹೋದ ಯಡಿಯೂರಪ್ಪ, ಅವರ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅವರು ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜುಲೈ 17 ರಂದು ತಡವಾಗಿ ಬೆಂಗಳೂರಿಗೆ ತಲುಪಿದ ಸಿಎಂ, ಈ ಹಿಂದೆ ತಮ್ಮ ರಾಜೀನಾಮೆಯ ಊಹಾಪೋಹಗಳನ್ನು ದೂರವಿಟ್ಟು ಭಿನ್ನರಾಗವನ್ನು ಹಾಡಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದ ಕಾರಣ ಮುಂದಿಟ್ಟು ರಾಜೀನಾಮೆಗೆ ಮುಂದಾದ ಯಡಿಯೂರಪ್ಪ?

“ನಾಯಕರ ಕೊರತೆಯಿಲ್ಲ ಎಂದು ನಾನು ಪುನರುಚ್ಚರಿಸುತ್ತೇನೆ ಮತ್ತು ಇದೀಗ ನನಗೆ ಜವಾಬ್ದಾರಿಯನ್ನು ನೀಡಲಾಗಿದೆ. ಸದ್ಯಕ್ಕೆ ಮುಂದುವರಿಯಲು ನನ್ನನ್ನು ಕೇಳಲಾಗಿದೆ. ಉನ್ನತ ನಾಯಕತ್ವ ಹೇಳಿದ್ದನ್ನು ನಾವು ಮಾಡಬೇಕು. ಮುಂದಿನ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಸುಗಮ ಬದಲಾವಣೆ ನಿರೀಕ್ಷಿಸಲಾಗಿದೆ

ರಾಜೀನಾಮೆ ಪತ್ರಗಳನ್ನು ಪಡೆಯಲು ಅಂದಿನ ಉತ್ತರಾಖಂಡ ಮತ್ತು ಅಸ್ಸಾಂ ಮುಖ್ಯಮಂತ್ರಿಗಳನ್ನು ನವದೆಹಲಿಗೆ ಕರೆಸಿಕೊಂಡ ಮಾದರಿಯಲ್ಲಿ ಕರ್ನಾಟಕದಲ್ಲಿ ಸುಗಮವಾಗಿ ಅಧಿಕಾರ ಬದಲಾವಣೆ ಮಾಡಲು ಬಿಜೆಪಿ ನಾಯಕತ್ವ ಬಯಸಿದೆ ಎಂದು ಮೂಲಗಳು ತಿಳಿಸಿವೆ.

“ಕೊರೊನಾದಿಂದಾಗಿ ಬಿಬಿಎಂಪಿ ಮತ್ತು ಪಂಚಾಯಿತಿ ಚುನಾವಣೆಗಳನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಹೀಗಾಗಿ, ಶೀಘ್ರದಲ್ಲೇ ಯಾವುದೇ ಚುನಾವಣೆಗಳು ನಡೆಯದ ಕಾರಣ ನಾಯಕತ್ವ ಬದಲಾವಣೆ ಮಾಡಲು ಪಕ್ಷದ ಹೈಕಮಾಂಡ್‌ಗೆ ಇದೇ ಅತ್ಯುತ್ತಮ ಸಮಯ” ಎಂದು ಮೂಲವೊಂದು ತಿಳಿಸಿದೆ.

ಇದನ್ನೂ ಓದಿ: ಹಲವು ಗುಮಾನಿಗಳಿಗೆ ಕಾರಣವಾದ ಸಹಕಾರ ಮಂತ್ರಾಲಯ: ಎ ನಾರಾಯಣ

2012ರಲ್ಲಿ ಬಿಜೆಪಿ ತೊರೆದು ಹೊಸ ಪಕ್ಷವನ್ನು ಕಟ್ಟಿದ್ದ ಯಡಿಯೂರಪ್ಪ, 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿ 110 ಸ್ಥಾನಗಳಿಂದ 40 ಸ್ಥಾನಗಳಿಗೆ ಕುಸಿಯುವಂತೆ ಮಾಡಿದ್ದರು. ಆದರೆ, ಈ ಬಾರಿ ಆ ರೀತಿ ಅಡೆತಡೆಗಳನ್ನು ಅವರು ಸೃಷ್ಟಿಸುವುದಿಲ್ಲ ಎಂಬ ವಿಶ್ವಾಸ ಬಿಜೆಪಿ ಹೈಕಮಾಂಡ್‌ಗೆ ಇದೆ.

ಅಲ್ಲದೆ, ಅವರ ಇಬ್ಬರು ಮಕ್ಕಳಾದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಮತ್ತು ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭವಿಷ್ಯವು ಯಡಿಯೂರಪ್ಪರಿಗೆ ಅತ್ಯಂತ ಮುಖ್ಯವಾಗಿದೆ. ಹೀಗಾಗಿ, ಪಕ್ಷದ ಹೈಕಮಾಂಡ್‌ನ ವಿಶ್ವಾಸವನ್ನು ಉಳಿಸಿಕೊಳ್ಳದೆ ಅವರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲಾಗುವುದಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ.

ಹೀಗಾಗಿ, ಅವರನ್ನು ಸಿಎಂ ಸ್ಥಾನದಿಂದ ಇಳಿಸಿ, ಮಹಾರಾಷ್ಟ್ರ, ಆಂಧ್ರ ಅಥವಾ ತೆಲಂಗಾಣಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾತ್ರವಲ್ಲ, ಅವರ ಮಗ ವಿಜಯೇಂದ್ರ ಅವರಿಗೂ ಉನ್ನತ ಹುದ್ದೆ (ಡಿಸಿಎಂ) ನೀಡುವ ಬಗ್ಗೆ ಪ್ರಸ್ತಾಪವಿದೆ ಎಂದು ಹೇಳಲಾಗಿದ್ದು, ಆ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ.

ಯಡಿಯೂರಪ್ಪ ಅವರಿಗೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದು ಹಿಂದಿನಿಂದಲೂ ಕಷ್ಟಕರವಾಗುತ್ತಲೆ ಬಂದಿದೆ. ಅವರು 2007 ರಲ್ಲಿ ಒಂದು ವಾರ, 2008 ರಲ್ಲಿ ಮೂರೂವರೆ ವರ್ಷ ಮತ್ತು 2018 ರಲ್ಲಿ ಮೂರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. 2021 ರಲ್ಲಿ, ಅವರು ಎರಡು ವರ್ಷ ಅಧಿಕಾರವನ್ನು ಪೂರ್ಣಗೊಳ್ಳುವ ಅವಕಾಶವನ್ನು ನಿರಾಕರಿಸಲಾಗುತ್ತದೆಯೇ? ಎಂಬ ಸಂಶಯವೂ ಈ ಸಂದರ್ಭದಲ್ಲಿ ಮುಂದಿದೆ.

ಆಧಾರ: ದಿ ಕ್ವಿಂಟ್

ಇದನ್ನೂ ಓದಿ: ಯಡಿಯೂರಪ್ಪ ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಿ- ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here