Homeಮುಖಪುಟಕಣಿವೆಯಲ್ಲಿ ನಿರ್ಬಂಧ ಸಡಿಲಿಕೆ, ಮೊಬೈಲ್ ರಿಂಗಣ : ಶಾಲಾ-ಕಾಲೇಜು ಉಸ್ತುವಾರಿಗೆ ನ್ಯಾಯಾಧೀಶರ ನೇಮಕ

ಕಣಿವೆಯಲ್ಲಿ ನಿರ್ಬಂಧ ಸಡಿಲಿಕೆ, ಮೊಬೈಲ್ ರಿಂಗಣ : ಶಾಲಾ-ಕಾಲೇಜು ಉಸ್ತುವಾರಿಗೆ ನ್ಯಾಯಾಧೀಶರ ನೇಮಕ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಜನರು ಅಕ್ಷರಶಃ ಕಾರ್ಗತ್ತಲಲ್ಲಿದ್ದರು. ಉಸಿರಾಟ ನಿಂತು ಹೋಗಿತ್ತು. ಬಾಹ್ಯ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದರು. ಇದಕ್ಕೆ ಕಾರಣ ಕೇಂದ್ರ ಸರ್ಕಾರ. ರಾತ್ರೋರಾತ್ರಿ ಸೇನೆ ನಿಯೋಜಿಸಿ, 370ನೇ ವಿಧಿಯು ರದ್ದುಗೊಳಿಸಿದ್ದು, ಇದರಿಂದ ಎಲ್ಲ ಹಕ್ಕುಗಳು ಮೊಟುಕಾಗಿದ್ದವು. ಹೊರ ಪ್ರಪಂಚದೊಂದಿಗೆ ಸಂಪರ್ಕವೇ ಇರಲಿಲ್ಲ. ಅವರೆಲ್ಲ ಮಾನಸಿಕವಾಗಿ ಜರ್ಝರಿತರಾಗಿದ್ದರು. ಅದೂ 69 ದಿನಗಳ ಕಾಲ. ಎಲ್ಲಿಗೂ ಹೋಗದೆ ಮನೆಯೊಳಗೆ ಇರುವುದೆಂದರೆ ಹಿಂಸೆ. ಸರ್ಕಾರಕ್ಕು ಇದೇ ಬೇಕಾಗಿತ್ತು. ಅದನ್ನು ವ್ಯವಸ್ಥಿತವಾಗಿ ಮಾಡಿತ್ತು.

ಎರಡು ತಿಂಗಳು 10 ದಿನಗಳ ನಂತರ ಕಣಿವೆ ರಾಜ್ಯದಲ್ಲಿ ಮೊಬೈಲ್ ರಿಂಗಣಿಸಿವೆ. ಹೋದ ಜೀವ ಬಂದಂತಾಗಿದೆ. ಮಡುಗಟ್ಟಿದ್ದ ಭಾವನೆಗಳ ಕಟ್ಟೆ ಒಡೆದಿದೆ. ಪಂಜರದಲ್ಲಿದ್ದ ಹಕ್ಕಿಗಳು ಹಾರತೊಡಗಿವೆ. ಬಂಧುಗಳು, ಮಕ್ಕಳು, ಸ್ನೇಹಿತರು ಪ್ರೀತಿಪಾತ್ರರ ಜತೆ ಮಾತು ನಡೆದಿದೆ. ಜೀವ ನಿರಾಳವಾದ ಅನುಭವ. ಇದರ ಬೆನ್ನಲ್ಲೇ ಹೋರಾಟವೂ ಆರಂಭವಾಗಿದೆ. ಪ್ರತಿಭಟನೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಶಾಲಾ-ಕಾಲೇಜುಗಳು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಆದರೆ ವಿದ್ಯಾರ್ಥಿಗಳ ಸುಳಿವಿಲ್ಲ. ವಿದ್ಯಾರ್ಥಿಗಳು ತರಗತಿಗಳಿಂದ ದೂರವೇ ಉಳಿದಿದ್ದಾರೆ. ಕಾರಣ ಭಯ. ಪೋಷಕರೂ ಕೂಡ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳಿಸಲು ಭಯಪಡುತ್ತಿದ್ದಾರೆ. ಶಾಲೆ-ಕಾಲೇಜುಗಳ ಸುತ್ತಲೂ ಪೊಲೀಸರು, ಸಿಆರ್‍ಪಿಎಫ್ ಯೋಧರ ಸರ್ಪಗಾವಲು. ಪೊಲೀಸರು ಶಾಲೆ, ಕಾಲೇಜು, ವಿವಿ ಆವರಣದೊಳಗೆ ಪ್ರವೇಶಿಸುವಂತಿಲ್ಲ. ಕ್ಯಾಂಪಸ್ ಹೊರಗೆ ಇರಬೇಕು. ಮುನ್ನೆಚ್ಚರಿಕ ಕ್ರಮವಾಗಿ ಶಾಲೆ-ಕಾಲೇಜುಗಳಲ್ಲಿ ಅತ್ಯಾಧುನಿಕ ಹೈರೆಸಲ್ಯೂಷನ್ ಸಿಸಿ ಟಿವಿ ಆಳವಡಿಸಲಾಗಿದೆ. ಪ್ರತಿಯೊಂದು ಶಾಲೆ-ಕಾಲೇಜು ವಿಶ್ವ ವಿದ್ಯಾಲಯಗಳಿಗೆ ನ್ಯಾಯಾಧೀಶರ ನೇಮಕ ಮಾಡಿದೆ ಸರ್ಕಾರ. ಆದರೂ ವಿದ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಿಲ್ಲ.

ಸ್ಥಳೀಯ ಪತ್ರಕರ್ತ ಅಹಮದ್ ಬರೆಯುತ್ತಾರೆ. 2017ರಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ಹಲವು ದಿನಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಭದ್ರತಾ ಪಡೆಗಳು ಪುಲ್ವಾಮಾ ಜಿಲ್ಲೆಯ ಪದವಿ ಕಾಲೇಜು ಕ್ಯಾಂಪಸ್ ಪ್ರವೇಶಿಸಿದ್ದವು. ಇದೇ ಕಾರಣಕ್ಕೆ ಮೊದಲ ಬಾರಿಗೆ ಶಾಲೆಗಳು-ಕಾಲೇಜುಗಳ ಉಸ್ತುವಾರಿಗೆ ನ್ಯಾಯಾಧೀಶರ ನೇಮಕ ಮಾಡಿದೆ. ನ್ಯಾಯಾಧೀಶರು ಮಕ್ಕಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

ನಿರ್ಬಂಧ ಸಡಿಲಿಕೆಯಾಗಿದ್ದರೂ ವಿದ್ಯಾರ್ಥಿಗಳು ತರಗತಿಗಳಿಂದ ದೂರವೇ ಉಳಿದಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗಳತ್ತ ಕರೆತರುವ ಪ್ರಯತ್ನಗಳು ಸಂಪೂರ್ಣ ವಿಫಲವಾಗಿವೆ. ಸರ್ಕಾರ ಶಾಲೆಗಳನ್ನು ಪುನರ್ ಆರಂಭಿಸಿರುವುದು ರಾಜಕೀಯ ಪ್ರೇರಿತ ಎಂಬ ಭಾವನೆ ಜನರಲ್ಲಿದೆ. ಭಯವೂ ಮೂಡಿದೆ. ಮಕ್ಕಳನ್ನು ಶಾಲೆಗಳಿಗೆ ಕಳಿಸಿದರೆ ಅವರು ಮತ್ತೆ ವಾಪಸ್ ಮನೆಗೆ ಬರುತ್ತಾರೆಂಬ ಭರವಸೆ ಹೊರಟು ಹೋಗಿದೆ. ಜನ ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳನ್ನು ತರಗತಿಗೆ ಹಿಡಿದು ತರಲು ಆಗುತ್ತಿಲ್ಲ ಎನ್ನುತ್ತಾರೆ ಪತ್ರಕರ್ತ ಅಹಮದ್.

ಈ ನಡುವೆ ಸರ್ಕಾರ ಅಕ್ಟೋಬರ್ 23 ರಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಘೋಷಣೆ ಮಾಡಿದೆ. ಪದವಿ ಪೂರ್ವ ಕೋರ್ಸ್‍ಗಳಿಗೆ ನವೆಂಬರ್‍ನಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಆದರೆ ತರಗತಿಗಳೇ ನಡೆದಿಲ್ಲ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಿಲ್ಲ. ಬೋಧಿಸಬೇಕಾದ ಸಿಲಬಸ್ ಅಪೂರ್ಣಗೊಂಡಿದೆ. ಈ ಕಾರಣದಿಂದ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಬೇಕಾದ ಅನಿವಾರ್ಯತೆ ಬಂದೊದಗಿದೆ. ವಿದ್ಯಾರ್ಥಿಗಳು ಪಾಠ ಪ್ರವಚನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪೋಷಕರು ಕೂಡ ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಿರುವುದು ಅವರ ನಡವಳಿಕೆಗಳಿಂದ ತಿಳಿದು ಬರುತ್ತದೆ.

ವಿದ್ಯಾರ್ಥಿಗಳ ಹಾಜರಾತಿ ಇಲ್ಲ. ಪಠ್ಯ ಪೂರ್ಣಗೊಂಡಿಲ್ಲ. ಆದರೂ ಸರ್ಕಾರ ಹಾಜರಾತಿ ಇದೆ ಎನ್ನುತ್ತಿದೆ. ಕಣಿವೆಯಲ್ಲಿ ಸಾಮಾನ್ಯ ಸ್ಥಿತಿಯಿದೆ ಎಂದು ನಂಬಿಸುವ ಪ್ರಯತ್ನ ಮಾಡುತ್ತಿದೆ ಅಷ್ಟೆ. ಸರ್ಕಾರದ ಇಂತಹ ಅವೈಜ್ಞಾನಿಕ ದಿಢೀರ್ ಕ್ರಮಗಳಿಂದ ವಿದ್ಯಾರ್ಥಿಗಳ ಒಂದು ವರ್ಷದ ಶಿಕ್ಷಣ ಅರ್ಧಕ್ಕೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಯದ ವಾತಾವರಣ ಮುಂದುವರಿದರೆ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಮಕ್ಕಳ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಸರ್ಕಾರವೇ ಕಿತ್ತುಕೊಂಡಂತಾಗುತ್ತದೆ. ಮುಂದಾದರೂ ಸರ್ಕಾರ ಅಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...