ಮೋದಿ ಬಂದ ನಂತರವೇ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿತಾ? ಅಸಲಿ ವಿಚಾರವೇನು ಗೊತ್ತೇ?

ಮೋದಿ ಬಂದ ಮೇಲೆ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿದೆ ಎಂದು ಬಿಂಬಿಸಲು ಮಬ್ಭಕ್ತರು ಪ್ರಯತ್ನಿಸುತ್ತಿದ್ದಾರೆ. ವಾಸ್ತವ ಅಂದರೆ ಕಳೆದ ಐದು ವರ್ಷಗಳಲ್ಲಿ ಅಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಿವೆ ಮತ್ತು ಸೈನಿಕರ ಸಾವಿನ ಪ್ರಮಾಣದಲ್ಲಿ ಶೇ.106% ರಷ್ಟು ಏರಿಕೆಯಾಗಿದೆ

‘40 ವರ್ಷಗಳ ನಂತರ ಕಾಶ್ಮೀರದ ಶ್ರೀನಗರದಲ್ಲಿ ಪ್ರಭಾತ್ ಫೇರಿ’: ಅಸಲಿ ವಿಚಾರವೇನು ಗೊತ್ತಾ?

ಈ ದೇಶದ ಭಾಗವೇ ಆಗಿರುವ ಕಾಶ್ಮೀರದ ಶ್ರೀನಗರದ ಬೀದಿಯಲ್ಲಿ ಪ್ರಭಾತ್ ಪೇರಿ ನಡೆದರೆ ಆಶ್ಚರ್ಯದ ವಿಷಯವೂ ಅಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘40 ವರ್ಷಗಳ ನಂತರ ಇದು ಸಾಧ್ಯವಾಗಿದೆ. ಇದಕ್ಕೆ ಮೋದಿಯೇ ಕಾರಣ. ಮೋದಿ ಹೈತೋ ಮುಮ್ಕಿನ್ ಹೈ’ ಎಂದೆಲ್ಲ ವೇಗವಾಗಿ ಹರಡಲಾಗುತ್ತಿದೆ. ಪ್ರಭಾತ್ ಪೇರಿ ಅಂದರೆ ಬೀದಿಯಲ್ಲಿ ಜನರು ಸಾಲಿನಲ್ಲಿ ಚಲಿಸುತ್ತ ಭಜನೆ ಆಥವಾ ಇನ್ನಾವುದೋ ಹಾಡನ್ನು ಹೇಳುತ್ತ ಸಾಗುವುದು. ಅದು ಜೂನ್ 27ರಂದು ನಡೆಯಿತಂತೆ. ನಡೆಯಲು ಬಿಡಿ, ತಪ್ಪೇನು ಎಂದು ನಾವು ಕೇಳಬಹುದು.

ಈಗ ವಿಷಯಕ್ಕೆ ಬರೋಣ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಓಡಿಸುತ್ತಿದ್ದು, ಅದರಲ್ಲಿ ರಸ್ತೆ ಪಕ್ಕ ಸಾಲಾಗಿ ಚಲಿಸುತ್ತಿರುವ ಜನರು ‘ಹರೇ ರಾಮ ಹರೇ ಕೃಷ್ಣ’ ಎಂದು ಭಕ್ತಿಪೂರ್ವಕವಾಗಿ ಪಠಿಸುತ್ತ ನಡೆದಿದ್ದು, ಇದಕ್ಕೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಮೋದಿ ಸೇರಿದಂತೆ ಬಿಜೆಪಿಯ ಹಲವು ಗಣ್ಯರು ಟ್ವಿಟರ್‍ನಲ್ಲಿ ಫಾಲೋ ಮಾಡುವ ಪುನೀತ್ ಶರ್ಮಾ ಎಂಬ ಟ್ವಿಟರಿಗ ಜೂನ್ 27ರಂದು ಈ ವಿಡಿಯೋ ಹಾಕಿ, ‘40 ವರ್ಷಗಳಲ್ಲಿ ಮೊದಲ ಬಾರಿ ಶ್ರೀನಗರದಲ್ಲಿ ಪ್ರಭಾತ್‍ಪೇರಿ ಆಯೋಜಿಸಲಾಗಿತ್ತು. ಇದೆ ಹೇಗೆ ಸಾಧ್ಯವಾಯ್ತು ಎಂದು ಆಶ್ಚರ್ಯ ಪಡುತ್ತಿದ್ದಿರಾ? ಮೋದಿ ಹೈ ತೊ ಮುಮ್ಕಿನ್ ಹೈ’ ಎಂದು ಪ್ರಸಾರ ಮಾಡಿದ್ದಾರೆ. ಇದು ಎಂದಿನಂತೆ ಸಾವಿರಾರು ಸಲ ರಿಟ್ವೀಟ್ ಆಗಿದೆ, ಫೇಸ್‍ಬುಕ್, ವ್ಯಾಟ್ಸಾಪ್‍ನಲ್ಲು ‘ಪ್ರಭಾತ್ ಪೇರಿ’ ಮಾಡುತ್ತಿದೆ.

ಈ ಪೋಸ್ಟ್ ನ ಹುನ್ನಾರ ಏನೆಂದರೆ ಕಾಶ್ಮೀರದಲ್ಲಿ 40 ವರ್ಷಗಳಿಂದ ಹಿಂದೂಗಳು ಮೆರವಣಿಗೆ (ಪ್ರಭಾತ್‍ಪೇರಿ) ಮಾಡಲು ಅಲ್ಲಿನವರು ಅವಕಾಶ ನೀಡಿರಲಿಲ್ಲ. ಈಗ ಅದು ಸಾಧ್ಯವಾಗಿದೆ. ಮೋದಿಯಿದ್ದರೆ ಎಲ್ಲ ಸಾಧ್ಯ ಎಂದು ಡಂಗುರ ಸಾರುವುದು. ‘ಲೇ ನೋಡ್ಲೇ, ಮೋದಿ-ಶಾ ಬಂದ ಮೇಲೆ ಹ್ಯಾಂಗ ಕಾಶ್ಮೀರದ ಸಾಬರು ಬಾಲ ಮುಚ್ಚಿಕೊಂಡ್ಯಾರ’ ಅಂತ ಇಲ್ಲಿನವರು ಬಿಜೆಪಿಗೆ ಬಿಲ್ಡ-ಅಪ್ ಕೊಡುವುದು ಮತ್ತು ಕಾಶ್ಮೀರದ ಜನರೆಲ್ಲ ನಮ್ಮ ಹಿಂದೂ ಧಾರ್ಮಿಕ ಆಚರಣೆಗಳನ್ನು ಸಹಿಸುತ್ತಿರಲಿಲ್ಲ ಎಂಬಂತೆ ಅಪಪ್ರಚಾರ ಮಾಡುವುದು. ಇದಕ್ಕೆ ಪೂರ್ವಭಾವಿಯಾಗಿ ನಮ್ಮ ಕನ್ನಡ ಚಾನೆಲ್‍ಗಳು ಹಲವು ವಿಶೇಷ ಕಾರ್ಯಕ್ರಮ ತೋರಿಸಿ, ಇನ್ನು ಕಾಶ್ಮೀರ ದಾರಿಗೆ ಬರಲಿದೆ ಎಂದು ಗ್ರೌಂಡ್ ರೆಡಿ ಮಾಡಿವೆ. ಅಂದರೆ ಅಲ್ಲಿ ಇಲ್ಲವರೆಗೆ ಸಹಜವಾಗಿ ನಡೆಯುತ್ತಿದ್ದಿಲ್ಲ ಎಂದು ಜನರಲ್ಲಿ ತಪ್ಪು ಗ್ರಹಿಕೆ ಬಿತ್ತುವ ಕೆಲಸ ಮಾಡಿವೆ.

ಕಾಶ್ಮೀರದ ಬಗ್ಗೆ ನಮ್ಮ ಮುಖ್ಯಧಾರೆಯ ಮಾಧ್ಯಮಗಳು ಕೂಡ ಇಂತಹ ಒಂದು ನೆಗೆಟಿವ್ ಅಭಿಪ್ರಾಯ ತುಂಬುತ್ತ ಬಂದಿವೆ. ಕಾಶ್ಮೀರ ಒಂದು ಪಾಕಿಸ್ತಾನ ಇದ್ದಂತೆ, ಅಲ್ಲಿ ಹಿಂದೂಗಳು ಭಜನೆ ಮತ್ತು ಇತರ ಧಾರ್ಮಿಕ ಆಚರಣೆ ಮಾಡಲು ಅವಕಾಶವೇ ಇಲ್ಲ ಎಂಬಂತೆ ಬಿಂಬಿಸುತ್ತ ಬಂದಿದ್ದು, ಕಾಶ್ಮೀರಿ ಜನರೆಲ್ಲ ಹಿಂದೂ ವಿರೋಧಿಗಳು ಎಂಬಂತೆ ಬಿಂಬಿಸುತ್ತ ಬರಲಾಗಿದೆ. ಇದರ ಹಿಂದೆ ಸಂಘದ ದೊಡ್ಡ ಕುತಂತ್ರವೂ ಇದೆ.

ಈಗ ಮತ್ತೆ ವಿಡಿಯೋ ವಿಷಯಕ್ಕೆ ಬರೋಣ: ವಿಡಿಯೋದಲ್ಲಿ ‘ಹರೇ ರಾಮ್ ಹರೇ ಕೃಷ್ಣ’ ಎಂಬ ಭಜನೆ ಇದೆ. ಅದು ಶ್ರೀನಗರದಲ್ಲಿ ನಡೆದದ್ದು ಹೌದು. ಆದರೆ ಈ ಘಟನೆ ಮೋದಿ ಅಧಿಕಾರಕ್ಕೆ ಬಂದ ನಂತರ ಅಥವಾ ಮೋದಿ ಅಧಿಕಾರಕ್ಕೆ ಬಂದ ಕಾರಣಕ್ಕಾಗಿಯೇ ನಡೆಯಲು ಸಾಧ್ಯವಾಯಿತೇ?

ವಿಡಿಯೋದಲ್ಲಿರುವುದು ಇಸ್ಕಾನ್‍ನವರ ಒಂದು ಕಾರ್ಯಕ್ರಮ. (ಟ್ವೀಟರಿಗ ಹೇಳಿದಂತೆ ಅದು ಪ್ರಭಾತ್‍ಪೇರಿ ಅಲ್ಲ ಎಂಬುದುನ್ನು ಮುಂದಿನ ಪ್ಯಾರಾ ನೋಡಿ) ಅಲ್ಟ್ ನ್ಯೂಸ್ ಶ್ರೀನಗರದ ಇಸ್ಕಾನ್ ಸಂಸ್ಥೆಯನ್ನು ಸಂಪರ್ಕಿಸಿತು. ವಿಡಿಯೋದಲ್ಲಿ ಪಲ್ಲಕ್ಕಿಯಲ್ಲಿ ನಿಂತು ಪವಿತ್ರ ತೀರ್ಥವನ್ನು ಚುಮುಕಿಸುತ್ತಿರುವ ಪೂಜಾರಿ ಅಥವಾ ಭಟ್ಟರ ಹೆಸರು ಮೋತಿಲಾಲ್ ರೈನಾ. ಅಲ್ಟ್‍ನ್ಯೂಸ್ ಜೊತೆ ಮಾತಾಡಿದ ಮೋತಿಲಾಲ್ ರೈನಾ, ‘ವಿಡಿಯೋದಲ್ಲಿರುವುದು ಪ್ರಭಾತ್‍ಪೇರಿ (ಮುಂಜಾನೆ ಜನರು ಭಜನೆ ಹಾಡುತ್ತ ಸಾಗುವುದು)ಗೆ ಸಂಬಂಧಿಸಿದ್ದಲ್ಲ. ಆದರೆ ಈ ಸಲದ ರಾಮನವಮಿಯಲ್ಲಿ ಚಿತ್ರೀಕರಿಸಿದ ವಿಡಿಯೋ ಇದು. ರಾಮನವಮಿಯಲ್ಲಿ ಶ್ರೀನಗರದ ಬೀದಿಗಳಲ್ಲಿ ಹೀಗೆ ಪಲ್ಲಕ್ಕಿಯಲ್ಲಿ ಮೆರವಣಿಗೆಯನ್ನು ಮಾಡುತ್ತೇವೆ’ ಎಂದಿದ್ದಾರೆ.

ಮುಂದುವರೆದ ಅವರು, ‘ಪ್ರತಿವರ್ಷ ರಾಮನವಮಿ ಮತ್ತು ಕೃಷ್ಣಜಯಂತಿಯಂದು ಇಂತಹ ಮೆರವಣಿಗೆ ಆಚರಣೆಗಳನ್ನು ಮಾಡುತ್ತೇವೆ. ಯಾವಾಗಲೋ ಒಮ್ಮೆ ಭದ್ರತೆ ಕಾರಣದಿಂದ ಇಂತಹ ಆಚರಣೆಗಳಿಗೆ ನಮಗೆ ಅವಕಾಶ ಸಿಗುವುದಿಲ್ಲ. ಆದರೆ ಶ್ರೀನಗರದಲ್ಲಿ ಇಂತಹ ಆಚರಣೆ 40 ವರ್ಷಗಳಿಂದ ನಡೆದೇ ಇಲ್ಲ ಎಂಬುದು ಅಪ್ಪಟ ಸುಳ್ಳು. ಮೊದಲಿಂದಲೂ ಇವು ನಡೆಯುತ್ತಾ ಬಂದಿವೆ. 2008ರಿಂದಂತೂ ಇಂತಹ ಆಚರಣೆಗಳು ಸುಲಿಲತವಾಗಿ ನಡೆಯುತ್ತಲೇ ಬಂದಿವೆ’ ಎಂದು ವಾಸ್ತವವನ್ನು ತೆರದು ಇಟ್ಟರು.

ಮೇಲಿನ ವಿಡಿಯೋ ಈ ಸಲದ ರಾಮನವಮಿಯದ್ದು. ಅದು ಜರುಗಿದ್ದು ಏಪ್ರಿಲ್‍ನಲ್ಲಿ. ಅಲ್ಟ್ ನ್ಯೂಸ್ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಮೋದಿ ಅಧಿಕಾರಕ್ಕೆ ಬರುವ ಬಹಳ ಮೊದಲಿಂದಲೂ ಶ್ರೀನಗರದಲ್ಲಿ ರಾಮನವಮಿ ಆಚರಣೆಗಳು ಸೇರಿದಂತೆ ಪ್ರಭಾತ್‍ಪೇರಿಗಳು ಸುಲಲಿತವಾಗಿ ಶಾಂತಿಯುತವಾಗಿ ನಡೆಯುತ್ತ ಬಂದಿವೆ.
ವೈರಲ್ ವಿಡಿಯೋದಲ್ಲಿರುವುದು ಏನು?
ವೈರಲ್ ಆಗಿರುವ ವಿಡಿಯೋದಲ್ಲಿರುವುದು ರಾಮನವಮಿಯ ಆಚರಣೆಯ ದೃಶ್ಯ. ಅದು ಟ್ವೀಟ್ ಹೇಳುವಂತೆ ಭಜನೆ ಹಾಡುತ್ತ ಸಾಗುವ ಪ್ರಭಾತ್‍ಪೇರಿಯಲ್ಲ! ಪ್ರಭಾತ್ ಪೇರಿಯೂ ಶ್ರೀನಗರಕ್ಕೆ ಹೊಸದೇನೂ ಅಲ್ಲ, ಹಿಂದೆಯೂ ಅವು ಜರುಗಿವೆ. ಪೂಜಾರಿ ರೈನಾ ಪ್ರಕಾರ, ‘ಶ್ರೀನಗರದಲ್ಲಿ ಭದ್ರತೆ ದೃಷ್ಟಿಯಿಂದ ಪ್ರಭಾತ್ ಪೇರಿ ಆಗಾಗ ನಡೆಯುವುದಿಲ್ಲ, ಆದರೆ ಸಾಧ್ಯವಿರುವಾಗ ಅವನ್ನು ಸಂಘಟನೆ ಮಾಡುತ್ತ ಬರಲಾಗಿದೆ. ಆದರೆ ಜಮ್ಮು ಭಾಗದ ದೊಡ್ಡ ನಗರಗಳಲ್ಲಿ ಒಂದಾಗಿರುವ ಉಧಮಪುರದ ಇಸ್ಕಾನ್ ಮಂದಿರದಲ್ಲಿ ಪ್ರತಿ ದಿನ ಬೆಳಿಗ್ಗೆ ಪ್ರಭಾತ್ ಪೇರಿ ಸುಲಲಿತವಾಗಿ ನಡೆಯುತ್ತ ಬಂದಿದೆ….’

ಅಂದರೆ, ಈ ವರ್ಷ ಶ್ರೀನಗರದಲ್ಲಿ ನಡೆದ ರಾಮನವಮಿ ಉತ್ಸವದ ಆಚರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಎರಡು ಸುಳ್ಳು ವಿಷಯಗಳನ್ನು ಸೇರಿಸಿ ಹರಡಲಾಗುತ್ತಿದೆ: 1) ಅದು ಪ್ರಭಾತ್ ಪೇರಿ ಎಂಬುದು. 2) 40 ವರ್ಷಗಳಿಂದ ಈ ಸಂಪ್ರದಾಯ ಶ್ರೀನಗರದಲ್ಲಿ ನಡೆದೇ ಇಲ್ಲ ಎಂದು…

ಅಲ್ಟ್ ನ್ಯೂಸ್ ಇವೆರಡು ಸುಳ್ಳು ಎಂಬುದನ್ನು ಈ ಮೂಲಕ ಸಾಬೀತು ಮಾಡಿದೆ…..
ಕಾಶ್ಮೀರದಲ್ಲಿ ಹಿಂದೂ ಆಚರಣೆಗಳು ಇಲ್ಲಿನಷ್ಟೇ ಸಹಜವಾಗಿ ನಡೆಯುತ್ತ ಬಂದಿವೆ. ಕೆಲವು ಸಂದರ್ಭಗಳಲ್ಲಿ ಭದ್ರತೆ ಕಾರಣದಿಂದ ಮುಸ್ಲಿಂ ಆಚರಣೆಗಳಿಗೆ ಅವಕಾಶ ನಿರಾಕರಿಸಿದಂತೆ, ನಿರ್ಬಂಧ ಹೇರಿದಂತೆ, ಹಿಂದೂ ಆಚರಣೆಗಳಿಗೂ ಅವಕಾಶ ನಿರಾಕರಿಸಲಾಗಿತ್ತು ಅಥವಾ ನಿರ್ಬಂಧ ಹೇರಲಾಗಿತ್ತು. ಇದೇನೂ ಅಲ್ಲಿ ಇಶ್ಯೂ ಕೂಡ ಆಗಿಲ್ಲ. ಸಹಜ ಸ್ಥಿತಿಯಲ್ಲಿ ಎಲ್ಲ ಆಚರಣೆಗಳೂ ಮುಕ್ತವಾಗಿ ಸಂಭ್ರಮÀದಿಂದ ನಡೆಯುತ್ತ ಬಂದಿವೆ.

ಮೋದಿ ಬಂದ ಮೇಲೆ ಕಾಶ್ಮೀರದಲ್ಲಿ ಹಿಂದೂ ಆಚರಣೆಗಳಿಗೆ ಮುಕ್ತ ಅವಕಾಶ ಸಿಕ್ಕಿದೆ ಎಂದು ಬಿಂಬಿಸಲು ಮಬ್ಭಕ್ತರು ಪ್ರಯತ್ನಿಸುತ್ತಿದ್ದಾರೆ. ವಾಸ್ತವ ಅಂದರೆ ಕಳೆದ ಐದು ವರ್ಷಗಳಲ್ಲಿ ಅಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಿವೆ ಮತ್ತು ಸೈನಿಕರ ಸಾವಿನ ಪ್ರಮಾಣದಲ್ಲಿ ಶೇ.106% ರಷ್ಟು ಏರಿಕೆಯಾಗಿದೆ ಎಂದು ಈ ಹಿಂದೆ ಲೋಕಸಭೆ ನತ್ತು ರಾಜ್ಯಸಭೆಯಲ್ಲಿ ಗೃಹ ಇಲಾಖೆಯೇ ಅಂಕಿಸಂಖ್ಯೆ ನೀಡಿದೆ..

ಸಾಮಾಜಿಕ ಜಾಲತಾಣದ ಫೇಕ್ ಸುದ್ದಿಗಳನ್ನು ಬಿಡಿ, ನಮ್ಮ ಮುಖ್ಯವಾಹಿನಿಯ ರಾಷ್ಟ್ರೀಯ ಮಾಧ್ಯಮಗಳು ಕೂಡ ಕಾಶ್ಮೀರದ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಹುಟ್ಟುವಂತೆ ವರದಿ ಮಾಡುತ್ತ ಬಂದಿವೆ…. ಅದನ್ನೇ ಸಂಘ ಪರಿವಾರ ಬಳಸಿಕೊಳ್ಳುತ್ತ ಧ್ರುವೀಕರಣ ಮಾಡುವ ಕೆಲಸವನ್ನು ಮಾಡುತ್ತ ಬಂದಿದೆ.

ಕೃಪೆ: ಅಲ್ಟ್ ನ್ಯೂಸ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here