HomeUncategorizedಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ 22 ಕಾರು ಖರೀದಿಸಿ ಅಡಗಿಸಿಟ್ಟಿದ್ದ ಕೆಸಿಆರ್: ರೇವಂತ್ ರೆಡ್ಡಿ

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ 22 ಕಾರು ಖರೀದಿಸಿ ಅಡಗಿಸಿಟ್ಟಿದ್ದ ಕೆಸಿಆರ್: ರೇವಂತ್ ರೆಡ್ಡಿ

- Advertisement -
- Advertisement -

ವಿಧಾನಸಭಾ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್‌) ಚುನಾವಣೆಗೂ ಮುನ್ನವೇ 22 ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿ ಅಡಗಿಸಿಟ್ಟಿದ್ದರು ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

ಬುಧವಾರ ಕಾಂಗ್ರೆಸ್‌ನ ‘ಪ್ರಜಾ ಪಾಲನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯಾರಿಗೂ ಗೊತ್ತಿಲ್ಲದಂತೆ ಕೆಸಿಆರ್ 22 ಕಾರುಗಳನ್ನು ಖರೀದಿಸಿ ವಿಜಯವಾಡದಲ್ಲಿ ಅಡಗಿಸಿಟ್ಟಿದ್ದರು. ನಾನು ಸಿಎಂ ಆಗಿ 10 ದಿನಗಳವರೆಗೆ ಈ ವಿಚಾರ ಗೊತ್ತಿರಲಿಲ್ಲ. ಬಳಿಕ ಅಧಿಕಾರಿಯೊಬ್ಬರು ನನ್ನ ಗಮನಕ್ಕೆ ತಂದರು. ಕೆಸಿಆರ್‌ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಮನೆಗೆ ಹೋದರು. ಆದರೆ, ಕಾರುಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಎಲ್ಲಾ ಕಾರುಗಳು ಸರ್ಕಾರದ ಸ್ವತ್ತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ಹಿಂಬಾಲಿಸಲು ಬಿಆರ್‌ಎಸ್‌ ಶ್ಯಾಡೋ ಟೀಂ ರಚಿಸಲಿದೆ ಎಂಬ ಮಾಜಿ ಸಚಿವ ಕೆಟಿಆರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ರೇವಂತ್ ರೆಡ್ಡಿ, ಸದನದಲ್ಲಿ ಪ್ರತಿಪಕ್ಷ ಸರ್ಕಾರಕ್ಕೆ ಸಲಹೆ ನೀಡಿ, ಕಾರ್ಯವೈಖರಿಗಳನ್ನು ಪರಿಶೀಲನೆ ನಡೆಸುತ್ತಿರುವಾಗ ಶ್ಯಾಡೋ ಟೀಂ ಮಾಡುವ ಅನಿವಾರ್ಯತೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ಸೋತರೂ, ಗೆದ್ದರೂ ನಿಮ್ಮ ಜೊತೆ ಮಾಜಿ ಮಂತ್ರಿಗಳಿದ್ದಾರೆ. ಅವರು ಶ್ಯಾಡೋ ಮಂತ್ರಿಗಳಾಗಿ ಕೆಲಸ ಮಾಡಲಿ. ಅವರು ಸಚಿವರಾಗಿದ್ದಾಗ ಕೆಲಸ ಮಾಡಿಲ್ಲ, ಈಗಲಾದರೂ ಮಾಡಲಿ ಎಂದು ಕೆಟಿಆರ್‌ಗೆ ರೇವಂತ್ ರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.

ಕೆಟಿಆರ್ ಏನೇನೋ ಮಾತನಾಡುತ್ತಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸೋತ ನೋವಿನಲ್ಲಿ ಜನರು ಹಲವು ರೀತಿಯಲ್ಲಿ ಮಾತನಾಡುತ್ತಾರೆ. ಅವರು ಪ್ರತಿಪಕ್ಷವಾಗಿ ಸರ್ಕಾರಕ್ಕೆ ಸಲಹೆ ನೀಡುವ ಅವಕಾಶವಿದೆ, ಅದನ್ನು ಮಾಡಲಿ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ರಾಜ್ಯದ ಪ್ರಮುಖ ವಿಷಯಗಳಲ್ಲಿ ಒಂದಾದ ಟಿಎಸ್‌ಪಿಎಸ್‌ಸಿ ಪರೀಕ್ಷೆಯ ಕುರಿತು ಮಾತನಾಡಿದ ಸಿಎಂ, ಪರೀಕ್ಷಾ ಮಂಡಳಿಯ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ನಿರ್ಧಾರ ಈಗ ರಾಜ್ಯಪಾಲರ ಬಳಿ ಇದೆ ಎಂದಿದ್ದಾರೆ.

ಇದನ್ನೂ : ಯತ್ನಾಳ್ ಹಿಟ್ ಆ್ಯಂಡ್ ರನ್ ಮಾಡದೆ ದಾಖಲೆ ಒದಗಿಸಲಿ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...