HomeUncategorizedತಮಿಳುನಾಡು: 'ಜಾತಿ ದೌರ್ಜನ್ಯ ಎಸಗಿದ ಸವರ್ಣೀಯರನ್ನು ಸರ್ಕಾರ ರಕ್ಷಿಸುತ್ತಿದೆ..' ಎಂದು ಚುನಾವಣೆ ಬಹಿಷ್ಕರಿಸಿದ ದಲಿತ ಕುಟುಂಬಗಳು

ತಮಿಳುನಾಡು: ‘ಜಾತಿ ದೌರ್ಜನ್ಯ ಎಸಗಿದ ಸವರ್ಣೀಯರನ್ನು ಸರ್ಕಾರ ರಕ್ಷಿಸುತ್ತಿದೆ..’ ಎಂದು ಚುನಾವಣೆ ಬಹಿಷ್ಕರಿಸಿದ ದಲಿತ ಕುಟುಂಬಗಳು

- Advertisement -
- Advertisement -

ತಾವು ಕುಡಿಯುವ ನೀರನ್ನು ಮಲದಿಂದ ಕಲುಷಿತಗೊಳಿಸಿದ ಅಪರಾಧಿಗಳ ವಿರುದ್ಧ ತಮಿಳುನಾಡು ಸರ್ಕಾರ ತೋರಿದ ನಿಷ್ಕ್ರಿಯತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪುದುಕೊಟ್ಟೈನ ವೆಂಗವಯಲ್ ಗ್ರಾಮದ ದಲಿತ ನಿವಾಸಿಗಳು, ಇಂದು ನಡೆದ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ ಎಂದು ‘ದಿ ನ್ಯೂಸ್ ಮಿನಿಟ್. ವರದಿ ಮಾಡಿದೆ.

ಜಾತಿ ದೌರ್ಜನ್ಯ ಎಸಗಿದ ಪ್ರಬಲ ಜಾತಿಗಳ ಗುಂಪುಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದು,. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಧರಣಿ ನಿರತ ನಿವಾಸಿಗಳು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು, ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. “ನಾವು ಮಲ ಮಿಶ್ರಿತ ನೀರನ್ನು ಪಡೆಯುತ್ತೇವೆ; ನಮ್ಮ ಮತಗಳು ನಿಮಗೆ ಬೇಕೇ? ಮಲ ಮಿಶ್ರಿತ ನೀರು ಕುಡಿದ ಮೇಲೆ ನಿಮಗೆ ನಮ್ಮ ಮತ ಬೇಕೇ?” ಎಂದು ಪೋಸ್ಟರ್‌ನಲ್ಲಿ ಬರೆದಿದ್ದಾರೆ.

ವೆಂಗವಯಲ್ ನಿವಾಸಿ ಕನಕರಾಜ್ ಮಾತನಾಡಿ, ಸ್ಥಳೀಯ ಪಂಚಾಯಿತಿ ಚುನಾವಣೆ ಸೇರಿದಂತೆ ಪ್ರತಿ ಚುನಾವಣೆಯನ್ನು ತಪ್ಪಿತಸ್ಥರನ್ನು ಬಂಧಿಸುವವರೆಗೆ ಬಹಿಷ್ಕರಿಸುತ್ತಿದ್ದೇವೆ ಎಂದ ಹೇಳಿದ್ದಾರೆ. ಕಲುಷಿತ ನೀರು ಕುಡಿದು ಅಸ್ವಸ್ಥರಾದ ಮಕ್ಕಳಲ್ಲಿ ಅವರ ಮಗಳೂ ಸೇರಿದ್ದಾಳೆ.

“ನಮ್ಮ ಗ್ರಾಮದ 20 ಕುಟುಂಬಗಳು ಮತ್ತು ಸುಮಾರು 106 ಜನರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಪೊಲೀಸರು ನಮ್ಮ ಜನರನ್ನು ಹಿಂಬಾಲಿಸಿ, ಅವರ ಕೆಲವು ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಅವರು ನಮ್ಮ ಮತವನ್ನು ಹೇಗೆ ನಿರೀಕ್ಷಿಸುತ್ತಾರೆ? ಸರ್ಕಾರವು ಒದಗಿಸಿದ ನಮ್ಮ ಪಡಿತರ ಚೀಟಿಗಳನ್ನು ಸಹ ಒಪ್ಪಿಸಲು ನಾವು ಸಿದ್ಧರಿದ್ದೇವೆ. ಏಕೆಂದರೆ, ಅವರು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದರು ಎಂಬ ಬಗ್ಗೆ ನಮಗೆ ಅತ್ಯಂತ ನಿರಾಶೆಯಾಗಿದೆ” ಎಂದು ಕನಕರಾಜ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಬಹಿಷ್ಕಾರದ ವಿರುದ್ಧ ಮನವರಿಕೆ ಮಾಡಲು ಯಾವುದೇ ರಾಜಕೀಯ ಪಕ್ಷಗಳು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ ಕನಕರಾಜ್, ಯಾವುದೇ ಪಕ್ಷವು ನಮಗೆ ಭರವಸೆ ನೀಡಲು ಅಥವಾ ತಪ್ಪಿತಸ್ಥರನ್ನು ಹಿಡಿಯುವುದಾಗಿ ಭರವಸೆ ನೀಡಲು ಪ್ರಯತ್ನಿಸಲಿಲ್ಲ. ಒಬ್ಬ ಸರ್ಕಾರಿ ಅಧಿಕಾರಿ ಮಾತ್ರ ನಮ್ಮನ್ನು ಭೇಟಿ ಮಾಡಿ ನಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಂಡರು. ಆದರೆ, ನಾವು ನಮ್ಮ ನಿಲುವಿನಲ್ಲಿ ದೃಢವಾಗಿದ್ದೇವೆ ಮತ್ತು ನಮಗೆ ನ್ಯಾಯ ಸಿಗುವವರೆಗೂ ಮತ ಚಲಾಯಿಸುವುದಿಲ್ಲ ಎಂದರು.

ಡಿಸೆಂಬರ್ 2022 ರಲ್ಲಿ ವೆಂಗವಯಲ್‌ನ ದಲಿತ ಕುಟುಂಬಗಳ ಐದು ಮಕ್ಕಳು ನೀರು ಕಲುಷಿತಗೊಂಡಿದ್ದರಿಂದ ಅಸ್ವಸ್ಥರಾಗಿದ್ದರು. ನಿವಾಸಿಗಳು ನೀರಿನ ಟ್ಯಾಂಕ್ ಅನ್ನು ಪರಿಶೀಲಿಸಿದಾಗ, ಟ್ಯಾಂಕ್ ನೀರು ಮಾನವ ಮಲದಿಂದ ಕಲುಷಿತವಾಗಿರುವುದನ್ನು ಕಂಡು ಬೆಚ್ಚಿಬಿದ್ದರು. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ, ಟ್ಯಾಂಕ್ ಅನ್ನು ಸ್ಚ್ಛಗೊಳಿಸಿ, ಮನೆಗಳನ್ನು ಸಂಪರ್ಕಿಸುವ ಪೈಪ್‌ಗಳನ್ನು ಬದಲಾಯಿಸಲಾಯಿತು.

ಆದರೆ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಪೊಲೀಸರು ಮತ್ತು ತನಿಖಾಧಿಕಾರಿಗಳು ತಮ್ಮ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದಲಿತ ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ; ಹುಬ್ಬಳ್ಳಿ ನೇಹಾ ಹತ್ಯೆ ಪ್ರಕರಣ: ‘ಲವ್ ಜಿಹಾದ್’ ಆರೋಪ ನಿರಾಕರಿಸಿದ ಸರ್ಕಾರ; ಆರೋಪಿ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...