Homeಮುಖಪುಟಮಸೂದೆಗಳ ತೆರವು ವಿಚಾರ: ರಾಜ್ಯಪಾಲರ ವಿರುದ್ಧ ಮತ್ತೆ ಸುಪ್ರೀಂ ಮೊರೆ ಹೋದ ಕೇರಳ ಸರ್ಕಾರ

ಮಸೂದೆಗಳ ತೆರವು ವಿಚಾರ: ರಾಜ್ಯಪಾಲರ ವಿರುದ್ಧ ಮತ್ತೆ ಸುಪ್ರೀಂ ಮೊರೆ ಹೋದ ಕೇರಳ ಸರ್ಕಾರ

- Advertisement -
- Advertisement -

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಕೇರಳ ಸರ್ಕಾರ ಬುಧವಾರ ಎರಡನೇ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಸರ್ಕಾರವು ಅಂಗೀಕರಿಸಿದ ನಿರ್ಣಾಯಕ ಮಸೂದೆಗಳನ್ನು ಪರಿಗಣಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಅವರನ್ನು ದೂಷಿಸಿದೆ.

ಕೇರಳ ರಾಜ್ಯವು ತನ್ನ ಮನವಿಯಲ್ಲಿ, “ದೀರ್ಘ ಮತ್ತು ಅನಿರ್ದಿಷ್ಟ ಅವಧಿಗೆ ಮಸೂದೆಗಳನ್ನು ಬಾಕಿ ಇರಿಸುವ ರಾಜ್ಯಪಾಲರ ನಡವಳಿಕೆಯು ಸ್ಪಷ್ಟವಾಗಿ ನಿರಂಕುಶವಾಗಿದೆ ಮತ್ತು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ. ಹೆಚ್ಚುವರಿಯಾಗಿ, ಇದು ಹಕ್ಕುಗಳ ವಿರುದ್ಧವಾಗಿದೆ. ಸಂವಿಧಾನದ ಆರ್ಟಿಕಲ್ 21 (ಜೀವನದ ಹಕ್ಕು) ಅಡಿಯಲ್ಲಿ ಕೇರಳ ರಾಜ್ಯದ ಜನರು, ರಾಜ್ಯ ಅಸೆಂಬ್ಲಿ ಜಾರಿಗೊಳಿಸಿದ ಕಲ್ಯಾಣ ಶಾಸನದ ಪ್ರಯೋಜನಗಳನ್ನು ನಿರಾಕರಿಸುವ ಮೂಲಕ ಜನರ ಹಕ್ಕುಗಳ ಕಡೆಗನಿಸುತ್ತಿದ್ದಾರೆ” ಎಂದು ಹೇಳಿದೆ.

“ಹಲವು ಮಸೂದೆಗಳು ಸಾರ್ವಜನಿಕ ಹಿತಾಸಕ್ತಿಗಳನ್ನು ಒಳಗೊಂಡಿವೆ ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸುತ್ತವೆ, ಈ ರೀತಿ ವಿಳಂಬ ಮಾಡುವ ಮೂಲಕ ರಾಜ್ಯದ ಜನರಿಗೆ ವಂಚಿನೆ ಮಾಡುತ್ತಿದ್ದಾರೆ” ಎಂದು ರಾಜ್ಯವು ನ್ಯಾಯಾಲಯಕ್ಕೆ ತಿಳಿಸಿದೆ.

”ಎಂಟು ಪ್ರಮುಖ ಮಸೂದೆಗಳು ಪ್ರಸ್ತುತ ರಾಜ್ಯಪಾಲರ ಬಳಿ ಬಾಕಿ ಉಳಿದಿವೆ. ರಾಜ್ಯಪಾಲರ ನಿಷ್ಕ್ರಿಯತೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸೂಕ್ತ ಆದೇಶಗಳನ್ನು ಕೋರಲಾಗಿದೆ. ರಾಜ್ಯ ಶಾಸಕಾಂಗವು ಅಂಗೀಕರಿಸಿದ 8 ಮಸೂದೆಗಳನ್ನು ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಅವರ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯಪಾಲರು ಸಹಿ ಹಾಕಿದ ನಂತರವೇ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳು ಕಾನೂನಾಗುತ್ತವೆ. ಸಂವಿಧಾನದ 200 ನೇ ವಿಧಿಯು ರಾಜ್ಯಪಾಲರಿಗೆ ಮಸೂದೆಗೆ ತಮ್ಮ ಅನುಮೋದನೆಯನ್ನು ನೀಡಲು, ತಿರಸ್ಕರಿಸಲು ಅಥವಾ ಕೆಲವು ಸಂದರ್ಭಗಳಲ್ಲಿ ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಲು ಅಧಿಕಾರವನ್ನು ನೀಡುತ್ತದೆ.

ಅನಿರ್ದಿಷ್ಟಾವಧಿಗೆ ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವ ರಾಜ್ಯಪಾಲರ ನಿಷ್ಕ್ರಿಯತೆಯನ್ನು ಪ್ರಶ್ನಿಸಿ ವಕೀಲರ ಮನವಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್‌ನ ಎರ್ನಾಕುಲಂ ಪೀಠದ ಆದೇಶವನ್ನು ಕೇರಳ ಸರ್ಕಾರ ಪ್ರಶ್ನಿಸಿದೆ.

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಕಡ್ಡಾಯವಾಗಿ/ನಿರ್ದೇಶಿಸಲಾದ ವಿಧೇಯಕಗಳಿಗೆ ಸಂಬಂಧಿಸಿದಂತೆ ಒಂದು ಅಥವಾ ಇನ್ನೊಂದು ವಿಧಾನದಲ್ಲಿ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಲು ರಾಜ್ಯಪಾಲರಿಗೆ ಏನಾಗಿದೆ? ಎಂಬ ಪ್ರಶ್ನೆಯನ್ನು ಹೈಕೋರ್ಟ್‌ನಲ್ಲಿ ವಕೀಲರು ಎತ್ತಿದ್ದಾರೆ.

ಇದನ್ನೂ ಓದಿ: ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆ ಸಾಧ್ಯತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...