Homeಮುಖಪುಟಪೊಲೀಸ್ ಅಧಿಕಾರಿ ಕೊಂದ ಆರೋಪಿಗೆ ಹೂಮಾಲೆ ಹಾಕಿ ಭವ್ಯ ಸ್ವಾಗತ, ಜೈ ಶ್ರೀರಾಂ ಘೋಷಣೆಗಳ ಅಬ್ಬರ

ಪೊಲೀಸ್ ಅಧಿಕಾರಿ ಕೊಂದ ಆರೋಪಿಗೆ ಹೂಮಾಲೆ ಹಾಕಿ ಭವ್ಯ ಸ್ವಾಗತ, ಜೈ ಶ್ರೀರಾಂ ಘೋಷಣೆಗಳ ಅಬ್ಬರ

- Advertisement -
- Advertisement -

ಕಳೆದ ಡಿಸೆಂಬರ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೊಲ್ಲಲ್ಪಟ್ಟ, ಬುಲಂದ್‌ಶಹರ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಿಗಳಿಗೆ ಸಿಕ್ಕಿರುವ ವೀರರ ಸ್ವಾಗತ ದೊಡ್ಡ ವಿಷಯವೇನಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಈ ಪ್ರಕರಣದ 33 ಆರೋಪಿಗಳ ಪೈಕಿ ಏಳು ಮಂದಿಯನ್ನು ಕಳೆದ ವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆಗ ಅವರನ್ನು ಬಲಪಂಥೀಯ ಕಾರ್ಯಕರ್ತರು ಹೂಮಾಲೆ ಹಾಕಿ ಮತ್ತು “ಜೈ ಶ್ರೀ ರಾಮ್, ವಂದೇ ಮಾತರಂ” ಘೋಷಣೆ ಕೂಗಿ ಸ್ವಾಗತಿಸಿದ್ದರು.

ಶನಿವಾರ ಜಾಮೀನಿನ ಮೇಲೆ ಬಿಡುಗಡೆಯಾದವರಲ್ಲಿ ಸ್ಥಳೀಯ ಬಿಜೆಪಿ ಯುವ ವಿಭಾಗದ ಮಾಜಿ ಮುಖ್ಯಸ್ಥ ಶಿಖರ್ ಅಗರ್ವಾಲ್, ಬಲಪಂಥೀಯ ಗುಂಪಿನ ಭಾಗವಾಗಿರುವ ಹೇಮು ಮತ್ತು ಉಪೇಂದ್ರ ರಾಘವ್, ಮಾಜಿ ಸೇನಾ ವ್ಯಕ್ತಿ ಜೀತು ಫೌಜಿ, ಸೌರವ್ ಮತ್ತು ರೋಹಿತ್ ರಾಘವ್ ಸೇರಿದ್ದಾರೆ. ಸ್ಥಳೀಯ ವರದಿಗಾರರಿಂದ ಚಿತ್ರೀಕರಿಸಲ್ಪಟ್ಟ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

“ಜೈಲಿನಿಂದ ಬಿಡುಗಡೆಯಾದ ಜನರ ಬೆಂಬಲಿಗರು ಅವರನ್ನು ಸ್ವಾಗತಿಸಿದರೆ, ಸರ್ಕಾರ ಮತ್ತು ಬಿಜೆಪಿ ಏನು ಮಾಡಲಾಗುವುದಿಲ್ಲ ಮತ್ತು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪ್ರತಿಪಕ್ಷಗಳು ಇದನ್ನು ದೊಡ್ಡ ವಿಷಯ ಮಾಡಬಾರದು ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೆ.ಪಿ.ಮೌರಿಯಾ ಹೇಳಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಹತ್ತಿರದ ಅರಣ್ಯ ಪ್ರದೇಶದಲ್ಲಿ 25 ಹಸುಗಳ ಮೃತದೇಹಗಳು ಪತ್ತೆಯಾದ ನಂತರ ಗ್ರಾಮದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಅವರ ಮೇಲಿದೆ.

ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರು ಈ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಹೋದಾಗ ಸುಮಾರು 400 ಜನರ ಗುಂಪಿನಿಂದ ಹಲ್ಲೆ ನಡೆಸಿದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಕೊಡಲಿಯಿಂದ ಅವರ ಎರಡು ಬೆರಳುಗಳನ್ನು ಕತ್ತರಿಸಿ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರರು ಪೊಲೀಸ್ ಮೇಲೆ ಗುಂಡು ಹಾರಿಸಿದ್ದರು.

ದಾಳಿಯ ನಂತರ ಸಿಕ್ಕಿದ ಸೆಲ್ ಫೋನ್ ವಿಡಿಯೋದಲ್ಲಿ ಜನಸಮೂಹವು “ಗೋಲಿ ಮಾರೊ” (ಗುಂಡು ಹಾರಿಸಿ) ಎಂದು ಕೂಗುತ್ತಿರುವುದನ್ನು ಕಂಡುಬಂದಿದೆ.

ಎಸ್.ಐ.ಟಿ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದರು. ನಂತರ ಐವರು ಪುರುಷರ ಮೇಲೆ ಕೊಲೆ ಆರೋಪ ಮತ್ತು 33 ಮಂದಿ ಹಿಂಸಾಚಾರ ಮತ್ತು ಅಗ್ನಿಸ್ಪರ್ಶವನ್ನು ಪ್ರಚೋದಿಸಿದ ಆರೋಪ ಹೊರಿಸಲಾಯಿತು. 38 ಆರೋಪಿಗಳ ವಿರುದ್ಧ ಎಸ್‌ಐಟಿ 3,400 ಪುಟಗಳ ಕೇಸ್ ಡೈರಿ ಮತ್ತು 103 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...