Homeಮುಖಪುಟಕೇರಳ: ನಿಪಾ ವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ, 789 ಸಂಪರ್ಕಗಳ ಮೇಲೆ ನಿಗಾ

ಕೇರಳ: ನಿಪಾ ವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ, 789 ಸಂಪರ್ಕಗಳ ಮೇಲೆ ನಿಗಾ

- Advertisement -
- Advertisement -

ಕೇರಳದ ಖಾಸಗಿ ಆಸ್ಪತ್ರೆಯ ಸಿಬ್ಬಂಧಿಯೊಬ್ಬರಿಗೆ ನಿಪಾ ವೈರಸ್ ಧನಾತ್ಮಕ ಪರೀಕ್ಷೆ ನಡೆಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ನಿಪಾ ವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

”ಹಂದಿಗಳು ಮತ್ತು ಹಣ್ಣಿನ ಬಾವಲಿಗಳಂತಹ ಪ್ರಾಣಿಗಳಿಂದ ಈ ನಿಪಾ ವೈರಸ್ ಮನುಷ್ಯರಿಗೆ ಹರಡುವ “ಝೂನೋಟಿಕ್ ಕಾಯಿಲೆ” ಆಗಿದೆ. ಇದು ರೋಗಿಗಳಲ್ಲಿ ಜ್ವರ ಮತ್ತು ಶೀತದಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಸೋಂಕು ಮೆದುಳಿನ ಉರಿಯೂತ, ಮತ್ತು ಮಯೋಕಾರ್ಡಿಟಿಸ್ ಅಥವಾ ಹೃದಯದ ಉರಿಯೂತದ ಎನ್ಸೆಫಾಲಿಟಿಸ್‌ಗೆ ಕಾರಣವಾಗಬಹುದು” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ವೈರಸ್‌ನಿಂದ ಈ ತಿಂಗಳು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರೆ, ಆಗಸ್ಟ್ 30 ರಂದು ಇನ್ನೊಬ್ಬ ಸಾವು ಸಂಭವಿಸಿದೆ. ಬುಧವಾರ ವೈರಸ್ ಇರುವುದು ಪತ್ತೆಯಾದ ಆರೋಗ್ಯ ಕಾರ್ಯಕರ್ತೆ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದು, ಅಲ್ಲಿ ಇಬ್ಬರು ಈ ನಿಪಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿ ಸೇರಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

”ದೃಢಪಟ್ಟಿರುವ ಸೋಂಕಿತರು 789 ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಇವರಲ್ಲಿ 77 ಜನರು ಹೈರಿಸ್ಕ್ ವಿಭಾಗದಲ್ಲಿದ್ದು, 153 ಜನರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಕೋಝಿಕ್ಕೋಡ್‌ನ ಆಸ್ಪತ್ರೆಗಳಲ್ಲಿ ಹದಿನೇಳು ಜನರನ್ನು ಪ್ರತ್ಯೇಕವಾಗಿಡಲಾಗಿದೆ.

ರಾಜ್ಯ ಸರ್ಕಾರವು ಕೋಝಿಕ್ಕೋಡ್ ಜಿಲ್ಲೆಯ ಒಂಬತ್ತು ಪಂಚಾಯತ್‌ಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಿದೆ ಮತ್ತು ರಾಜ್ಯ ಮಟ್ಟದ ನಿಯಂತ್ರಣ ಕೊಠಡಿಯನ್ನು ಸಹ ಸ್ಥಾಪಿಸಿದೆ. ಈ ಕಂಟೈನ್‌ಮೆಂಟ್ ವಲಯಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಮಾತ್ರ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಈಗಾಗಲೇ ದೀರ್ಘಾವಧಿಯ ಕಣ್ಗಾವಲು ಜಾರಿಯಲ್ಲಿದೆ ಮತ್ತು ಎನ್ಸೆಫಾಲಿಟಿಸ್ ರೋಗಲಕ್ಷಣಗಳೊಂದಿಗೆ ಬರುವ ಯಾವುದೇ ರೋಗಿಯನ್ನು ನಿಪಾ ವೈರಸ್‌ಗಾಗಿ ಪರೀಕ್ಷಿಸಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್‌ನಿಂದ ಇಬ್ಬರು ಸಾವು: ಕೇಂದ್ರದ ತಂಡ ರವಾನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕವಿತಾಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿ: ಜಾರಿ ನಿರ್ದೇಶನಾಲಯ

0
ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ಜಾಮೀನು ಅರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ವಿರೋಧಿಸಿದೆ. "ಅವರ...