Homeಮುಖಪುಟಸಿಎಎ ವಿರುದ್ಧದ ಪ್ರತಿಭಟನೆ: ಕೇರಳ ಪೊಲೀಸರಿಂದ ಲಾಠೀ ಚಾರ್ಜ್‌

ಸಿಎಎ ವಿರುದ್ಧದ ಪ್ರತಿಭಟನೆ: ಕೇರಳ ಪೊಲೀಸರಿಂದ ಲಾಠೀ ಚಾರ್ಜ್‌

- Advertisement -
- Advertisement -

ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿ ಸಂಘಟನೆಯಾದ ಫ್ರೆಟರ್ನಿಟಿ ಮೂವ್‌ಮೆಂಟ್‌ನ ಸದಸ್ಯರ ಮೇಲೆ ಕೇರಳ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.   ಪ್ರತಿಭಟನೆಗೆ ಸಂಬಂಧಿಸಿ ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ.

ಪೊಲೀಸರ ಲಾಠೀ ಚಾರ್ಜ್‌ನಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು  ಕೋಝಿಕ್ಕೋಡ್‌ನ ಬೀಚ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಕೋಝಿಕ್ಕೋಡ್ ಕಾರ್ಪೊರೇಷನ್‌ನಿಂದ ಆರಂಭವಾದ ಮೆರವಣಿಗೆ ರಾತ್ರಿ 11 ಗಂಟೆ ಸುಮಾರಿಗೆ ಬೀಚ್ ಬಳಿಯ ಆಕಾಶವಾಣಿ ಕಚೇರಿ (ಆಕಾಶವಾಣಿ) ತಲುಪಿದೆ.

ಪೊಲೀಸರು ಯಾವುದೇ ಅಹಿತಕರ ಘಟನೆ ಅಥವಾ ಪ್ರಚೋದನೆ ಇಲ್ಲದೆ ಶಾಂತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಲಾಠೀ ಪ್ರಹಾರ ನಡೆಸಿದ್ದಾರೆ, ಜೊತೆಗೆ ಮಹಿಳಾ ವಿದ್ಯಾರ್ಥಿಗಳಿಗೆ ಪುರುಷ ಪೊಲೀಸ್‌ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಫ್ರಟರ್ನಿಟಿ ಮೂವ್‌ಮೆಂಟ್‌ನ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಶಾಹೀನ್ ಅಹಮ್ಮದ್ ಈ ಬಗ್ಗೆ ಮಾತನಾಡಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠೀ ಪ್ರಹಾರ ಮಾಡಲು ಪ್ರಾರಂಭಿಸಿದರು. ರಸ್ತೆ ಅಥವಾ ಸಮುದ್ರ ತೀರದಲ್ಲಿ ಯಾವುದೇ ರಶ್ ಇರಲಿಲ್ಲ ಏಕೆಂದರೆ ಅದು ರಂಜಾನ್ ತಿಂಗಳ ಆರಂಭವಾಗಿದೆ. ನಾವು ರಸ್ತೆಯ ಒಂದು ಬದಿಯನ್ನು ನಿರ್ಬಂಧಿಸಿದ್ದೇವೆ ಆದರೆ ಇನ್ನೊಂದು ಬದಿಯಲ್ಲಿ ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರತಿಭಟನೆಯ ಉದ್ಘಾಟನಾ ಭಾಷಣದ ವೇಳೆ, ಪೊಲೀಸ್ ಸಿಬ್ಬಂದಿ ಬಸ್‌ನಲ್ಲಿ ಬಂದು ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸಿದರು. ನಾವು ಬಂಧನವನ್ನು ವಿರೋಧಿಸಿದ ನಂತರ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಮಗೆ ಯಾವುದೇ ತೊಂದರೆ ಮಾಡುವ ಉದ್ದೇಶ ಇರಲಿಲ್ಲ, ನಾವು ಪ್ರತಿಭಟನಾ ಭಾಷಣದ ಬಳಿಕ ಅಲ್ಲಿಂದ ತೆರಳುತ್ತಿದ್ದೆವು ಆದರೆ ಪೊಲೀಸರು ಲಾಠೀ ಚಾರ್ಜ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನಾಕಾರರು ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಪ್ರತಿಭಟನಾಕಾರರು ನಡೆಸಿದ ಬಲ ಪ್ರಯೋಗದಿಂದ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಈ ಕುರಿತು ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಒಂಬತ್ತು ವಿದ್ಯಾರ್ಥಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇದರಲ್ಲಿ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 143 (ಕಾನೂನುಬಾಹಿರ ಸಭೆ), 283, 353, 332 ಮತ್ತು ಕೇರಳ ಪೊಲೀಸ್ ಕಾಯಿದೆ 2011ರ 177 (ಇ)ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಲ್ಲದೆ ತಿರುವನಂತಪುರಂ ಮ್ಯೂಸಿಯಂ ಪೊಲೀಸರು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದಕ್ಕಾಗಿ ಫ್ರಾಟರ್ನಿಟಿ ಮೂವ್ಮೆಂಟ್, ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ ಮತ್ತು ವೆಲ್ಫೇರ್ ಪಾರ್ಟಿಗೆ ಸೇರಿದ 124 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಿಎಎ ಪ್ರತಿಭಟನೆಯ ಭಾಗವಾಗಿ ಮಾವೇಲಿ ಎಕ್ಸ್‌ಪ್ರೆಸ್‌ನ್ನು ತಡೆದಿದ್ದಕ್ಕಾಗಿ ಎರ್ನಾಕುಲಂ ಪೊಲೀಸರು ಏಳು ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ರೈಲ್ವೇ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸಿಎಎ ಅನುಷ್ಠಾನದ ವಿರುದ್ಧ ಪ್ರತಿಭಟನೆ ನಡೆಸಿದ ಸುಮಾರು 500 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರ ಮೇಲೆ ಆಲುವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಸಿಎಎ ಮತ್ತು ಭಾರತೀಯ ಮುಸ್ಲಿಮರ ಕುರಿತ ಧನಾತ್ಮಕ ನಿರೂಪಣೆ PIB ವೆಬ್‌ಪೇಜ್‌ನಿಂದ ನಾಪತ್ತೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...