Homeಮುಖಪುಟಭಾರತದಲ್ಲಿ ಒಂದು ಕೋಟಿ ಮುಟ್ಟಿದ ಕೋವಿಡ್ ಪರೀಕ್ಷೆ: ICMR

ಭಾರತದಲ್ಲಿ ಒಂದು ಕೋಟಿ ಮುಟ್ಟಿದ ಕೋವಿಡ್ ಪರೀಕ್ಷೆ: ICMR

- Advertisement -
- Advertisement -

ಭಾರತದಲ್ಲಿ COVID19 ಪರೀಕ್ಷೆಗಳು 1 ಕೋಟಿ ಗಡಿ ದಾಟಿದೆ. ಇಂದು ಬೆಳಿಗ್ಗೆ 11 ರವರೆಗೆ 1,00,04,101 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಕೊರೊನಾ ವೈರಸ್ ಕಾಣಿಸಿಕೊಂಡ ಚೀನಾ ಕೋವಿಡ್ ಪರೀಕ್ಷೆಯಲ್ಲಿ ದಾಖಲೆ ಬರೆದಿದ್ದು 9.4 ಕೋಟಿ ಪರೀಕ್ಷೆಗಳನ್ನು ನಡೆಸಿದೆ ಎಂದು ಸ್ಟ್ಯಾಟಿಸ್ಟ.ಕಾಂ ವರದಿ ಮಾಡಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕಾ (3.7 ಕೋಟಿ), ರಷ್ಯಾ (2.1 ಕೋಟಿ), ಇಂಗ್ಲೆಂಡ್ (1.5 ಕೋಟಿ), ಭಾರತ (1.0 ಕೋಟಿ) ಇವೆ.

ಹೆಚ್ಚು ಪರೀಕ್ಷೆ ನಡೆಸುವುದರಲ್ಲಿ ಭಾರತ 5 ನೇ ಸ್ಥಾನದಲ್ಲಿದೆ. ಜನಸಂಖ್ಯೆಗನುಗುಣವಾಗಿ ಪರೀಕ್ಷೆ ನಡೆಸುವುದರಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದ್ದು ವಿಶ್ವದಲ್ಲಿಯೇ 27ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ ಹತ್ತು ಲಕ್ಷ ಜನರಲ್ಲಿ ಭಾರತದಲ್ಲಿ 7,224 ಜನರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಅಮೆರಿಕಾದಲ್ಲಿ ಹತ್ತು ಲಕ್ಷ ಜನರಲ್ಲಿ 3.5 ಲಕ್ಷ ಜನರನ್ನು ಪರೀಕ್ಷಿಸಿದರೆ, ಇಂಗ್ಲೆಂಡ್‌ನಲ್ಲಿ 1.5 ಲಕ್ಷ ಜನರನ್ನು ಪರೀಕ್ಷಿಸಲಾಗುತ್ತಿದೆ.

ಭಾರತವು ಒಟ್ಟು 6,97,413 ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಒಟ್ಟಾರೆ ಪ್ರಕರಣಗಳಲ್ಲಿ ಮೂರನೇ ಸ್ಥಾನ ತಲುಪಿದೆ. 19,693 ಸಾವುಗಳನ್ನು ದಾಖಲಿಸಿದೆ. ಆ ಮೂಲಕ ಕೋವಿಡ್ ಸಾವುಗಳ ವಿಷಯದಲ್ಲಿ ಪ್ರಪಂಚದಲ್ಲಿಯೇ ಭಾರತ 8ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಮೋದಿಯ ಈ ಮೂರು ವೈಫಲ್ಯಗಳ ಕುರಿತು ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ: ರಾಹುಲ್ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read