Homeಕರ್ನಾಟಕಕುಮಾರಸ್ವಾಮಿ ಜತೆಗೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ವೀರ್ ಹಾಶ್ಮಿ; ಯತ್ನಾಳ್‌ಗೆ ಕಾಂಗ್ರೆಸ್ ತಿರುಗೇಟು

ಕುಮಾರಸ್ವಾಮಿ ಜತೆಗೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ವೀರ್ ಹಾಶ್ಮಿ; ಯತ್ನಾಳ್‌ಗೆ ಕಾಂಗ್ರೆಸ್ ತಿರುಗೇಟು

- Advertisement -
- Advertisement -

‘ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗು ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ’ ಎಂದು ಕೆಲ ಚಿತ್ರಗಳನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್, ತನ್ವೀರ್ ಹಾಶ್ಮಿ ಜತೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇರುವ ಫೋಟೋ ಹಂಚಿಕೊಂಡಿದೆ.

ಈ ಕುರಿತು ಎಕ್ಸ್‌ನಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ… ದಾಸರ ಈ ಸಾಲುಗಳು ಬಿಜೆಪಿಯಲ್ಲಿ ಮನ್ನಣೆ ಸಿಗದೆ ಮತಿಭ್ರಮಣೆಗೊಂಡವರಂತೆ ವರ್ತಿಸುತ್ತಾ, ಭೂಮಿಗೆ ಭಾರವಾಗಿ ಬದುಕುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಅರ್ಪಣೆ’ ಎಂದಿದೆ.

‘ಮುಸ್ಲಿಂ ಧರ್ಮಗುರು ಸೈಯ್ಯದ್ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ನಂಟಿದೆ ಎಂದು ಹುರುಳಿಲ್ಲದ ಆರೋಪ ಮಾಡಿದ ಅತೃಪ್ತ ಆತ್ಮದಂತಿರುವ ಯತ್ನಾಳ್ ಹಾಗೂ ಬಿಜೆಪಿ, ಹಾಶ್ಮಿಯವರ ಸಾಮಾಜಿಕ ಜಾಲತಾಣಗಳಲ್ಲಿದ್ದ ಫೋಟೋಗಳನ್ನು ಎತ್ತಿ ಇತರ ಮುಸ್ಲಿಂ ಧಾರ್ಮಿಕ ನಾಯಕರನ್ನು ಐಸಿಸ್ ನವರೆಂದು ಬಿಂಬಿಸಲು ಹೊರಟಿದ್ದಾರೆ. ಯತ್ನಾಳ್ ಅವರೇ, ಇದೇ ಹಾಶ್ಮಿಯಾವರೊಂದಿಗೆ ನಿಮ್ಮ ಹೊಸ ಬ್ರದರ್ ಕೂಡ ಜಾತ್ಯತೀತತೆಯ ಪೋಷಕು ತೊಟ್ಟಿದ್ದಾಗ ಫೋಟೋ ತೆಗೆದುಕೊಂಡಿದ್ದಾರೆ, ಈಗ ಕುಮಾರಸ್ವಾಮಿಯವರಿಗೂ ಐಸಿಸ್ ಪಟ್ಟ ಕಟ್ಟುತ್ತೀರಾ’ ಎಂದು ಪ್ರಶ್ನಿಸಿದೆ.

ತನ್ವೀರ್ ಹಾಶ್ಮಿಯವರ ಬಗ್ಗೆ ತನಿಖೆ ಮಾಡಿಸಿ ಎಂಬ ಯತ್ನಾಳ್ ಸವಾಲಿಗೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ‘ಮತಿಭ್ರಮಣೆಯಾದವರ ಮಾತುಗಳನ್ನು ಕೇಳಿಕೊಂಡು ತನಿಖೆ ಮಾಡಿಸಿ ಸರ್ಕಾರದ ಸಂಪನ್ಮೂಲ, ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡಲಾದೀತೆ? ಮುಂದೆ ನಮ್ಮ ಮನೆಯ ಬಿಳಿ ನಾಯಿ ಕಪ್ಪು ಮರಿ ಹಾಕಿದೆ ತನಿಖೆ ಮಾಡಿಸಿ ಎನ್ನುವಿರಿ, ಮಾಡಿಸಲು ಸಾಧ್ಯವೇ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಇದನ್ನೂ ಓದಿ; ಗೂಳಿಹಟ್ಟಿ ‘ಅಸ್ಪೃಶ್ಯತೆ’ ಆರೋಪ; ದಲಿತ ನಾಯಕರನ್ನು ಮುಂದಿಟ್ಟು ‘ಡ್ಯಾಮೇಜ್ ಕಂಟ್ರೋಲ್‌’ಗೆ ಮುಂದಾಯಿತೇ ಬಿಜೆಪಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...