Homeಮುಖಪುಟಉತ್ತರ ಪ್ರದೇಶ: ಅಮ್ರೋಹಾ ಕೋರ್ಟ್ ಬಳಿ ಮಹಿಳೆ ಮೇಲೆ ಹಲ್ಲೆ ನಡೆಸಿದ ವಕೀಲ

ಉತ್ತರ ಪ್ರದೇಶ: ಅಮ್ರೋಹಾ ಕೋರ್ಟ್ ಬಳಿ ಮಹಿಳೆ ಮೇಲೆ ಹಲ್ಲೆ ನಡೆಸಿದ ವಕೀಲ

- Advertisement -
- Advertisement -

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಕೋರ್ಟ್ ಬಳಿ ವಕೀಲರೋರ್ವರು ಮತ್ತು ಮಹಿಳೆಯ ನಡುವೆ ಹೊಡೆದಾಟ ನಡೆದಿದ್ದು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸದರ್ ತೆಹಸಿಲ್‌ನ ಅಮ್ರೋಹಾ ಕೋರ್ಟ್ ಬಳಿ ಈ ಘಟನೆ ನಡೆದಿದೆ ಎಂದು Free Press Journel ವರದಿ ಮಾಡಿದೆ.

ಕ್ಷುಲ್ಲಕ ವಿಚಾರಕ್ಕೆ ಸ್ಟಾಂಪ್ ಮಾರಾಟಗಾರ್ತಿ ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಟಾಂಪ್ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಕೀಲರು ನೆಲಕ್ಕೆ ತಳ್ಳಿದ್ದಾರೆ. ಈ ವೇಳೆ ಮಹಿಳೆ ತನ್ನ ಕೈಯಲ್ಲಿರುವ ಚಪ್ಪಲಿಯನ್ನು ತೋರಿಸುತ್ತ ವಕೀಲರ ವಿರುದ್ಧ ಹರಿಹಾಯ್ದಿದ್ದಾರೆ.  ವಕೀಲ ಮಹಿಳೆಯನ್ನು ಮತ್ತೆ ಎಳೆದಾಡಿ ಹಲ್ಲೆ ನಡೆಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ನಡೆಯುವಾಗ ಸುತ್ತ-ಮುತ್ತ ಹಲವು ಜನರಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸದಂತೆ ವಕೀಲರನ್ನು ತಡೆಯುವುದು ಕಂಡು ಬಂದಿದೆ.

ಕೊನೆಗೆ ವಕೀಲ ಮಹಿಳೆಯನ್ನು ಅಂಗಡಿಯ ಮೆಟ್ಟಿಲುಗಳಿಂದ ತಳ್ಳಿದ ನಂತರ ಅವರು ಸ್ಥಳದಿಂದ ಹೊರಟುಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರುಗಳ ದಾಖಲಾಗಿಲ್ಲ ಎಂದು ವರದಿಯಾಗಿದೆ.

 

ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’: ಸಮಿತಿ ರಚನೆ ಕಣ್ಣೊರೆಸುವ ತಂತ್ರ; ಅಧೀರ್ ರಂಜನ್ ಚೌಧರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read