Homeಮುಖಪುಟ'ರಾಜಕೀಯ ಪ್ರವೇಶಕ್ಕಾಗಿ ಕುಸ್ತಿ ತೊರೆದಿದ್ದಾರೆ’; ಅಥ್ಲೀಟ್‌ಗಳ ವಿರುದ್ಧ ಸಂಜಯ್ ಸಿಂಗ್ ಆರೋಪ

‘ರಾಜಕೀಯ ಪ್ರವೇಶಕ್ಕಾಗಿ ಕುಸ್ತಿ ತೊರೆದಿದ್ದಾರೆ’; ಅಥ್ಲೀಟ್‌ಗಳ ವಿರುದ್ಧ ಸಂಜಯ್ ಸಿಂಗ್ ಆರೋಪ

- Advertisement -
- Advertisement -

ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಮೂವರು ಸದಸ್ಯರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತಾತ್ಕಾಲಿಕ ಸಮಿತಿಯನ್ನು ರಚಿಸಿದ ನಂತರ, ಅಮಾನತಾಗಿರುವ ಅಧ್ಯಕ್ಷ ಸಂಜಯ್ ಸಿಂಗ್ ಆಕ್ರೋಶ ಹರಹಾಕಿದ್ದಾರೆ. ಬಜರಂಗ್ ಪುನಿಯಾ ವಿರುದ್ಧ ಕಿಡಿಕಾರಿರುವ ಅವರು, ‘ಪುನಿಯಾ ಮತ್ತು ಇತರೆ ಕುಸ್ತಿಪಟುಗಳು ರಾಜಕೀಯ ಪ್ರವೇಶದ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ; ಆಟಗಾರರಾಗಿ ಅವರು ತಮ್ಮ ವ್ಯಾಪ್ತಿಯನ್ನು ಮೀರಿದ್ದಾರೆ’ ಎಂದು ಹೇಳಿದರು.

ಕೇಂದ್ರ ಕ್ರೀಡಾ ಸಚಿವಾಲಯವು ಡಬ್ಲ್ಯೂಎಫ್ಐನ ಎಲ್ಲ ಪದಾಧಿಕಾರಿಗಳ ಆಡಳಿತ ಮಂಡಳಿಯನ್ನು ಭಾನುವಾರ ಅಮಾನತುಗೊಳಿಸಿದೆ. ಅದೇ ಸಮಯದಲ್ಲಿ ಸಚಿವಾಲಯವು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ)ಗೆ ಸೂಚನೆ ನೀಡಿದ್ದು, ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯೂಎಫ್‌ಐ) ವ್ಯವಹಾರಗಳನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿತ್ತು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಜಯ್ ಸಿಂಗ್, ‘ಈ ಆಟಗಾರರು ಕುಸ್ತಿ ಆಡುವ ತಮ್ಮ ಪ್ರಾಯ ಮೀರಿದ್ದಾರೆ. ನೀವು ಬಜರಂಗ್ ಪುನಿಯಾ ಅವರನ್ನು ನೋಡಿ, ಅವರು ತಮ್ಮ ಕೊನೆಯ ಪಂದ್ಯವನ್ನು 10-0 ಅಂತರದಿಂದ ಸೋತರು. ಈಗ ಅವರು ರಾಜಕೀಯ ಸೇರುವುದಕ್ಕಾಗಿ ಕುಸ್ತಿಯನ್ನು ತೊರೆದಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಅವರೊಂದಿಗೆ ಕುಸ್ತಿ ಮ್ಯಾಟ್ ಮೇಲೆ ಸೆಣಸಾಡಿದ್ದಾರೆ. ಇದು ಆಟಗಾರರು ಮಾಡುವ ಕೆಲಸವಲ್ಲ’ ಎಂದು ಸಂಜಯ್ ಸಿಂಗ್ ಕಿಡಿಕಾರಿದ್ದಾರೆ.

ಬುಧವಾರ ಬೆಳಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಜಜ್ಜರ್ ಜಿಲ್ಲೆಯ ಛಾರಾ ಗ್ರಾಮದ ವೀರೇಂದ್ರ ಆರ್ಯ ಅಖಾರಾ ತಲುಪಿ ಒಲಿಂಪಿಯನ್ ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ್ದರು.

‘ಪ್ರತಿಭಟನೆ ನಡೆಸುತ್ತಿರುವ ಹಿರಿಯ ಕುಸ್ತಿಪಟುಗಳು ಕಿರಿಯರ ಪ್ರಗತಿ ಬಯಸುತ್ತಿಲ್ಲ. ಅವರ ಪ್ರತಿಭಟನೆಯು ಎಲ್ಲ ಕುಸ್ತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಅವರು ಕಿರಿಯ ಆಟಗಾರರ ಹಿತ ಬಯಸುವುದಿಲ್ಲ, ಅವರು ರಾಜಕೀಯ ಮಾಡುತ್ತಿದ್ದಾರೆ, ಬೇರೆಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಇದರಿಂದ ಟ್ರಯಲ್ಸ್ ನಡೆಯದೆ ಜೂನಿಯರ್‌ಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ನಾನು 10-12 ವರ್ಷಗಳಿಂದ ಕುಸ್ತಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಎಂದಾದರೂ ಕುಸ್ತಿಪಟುವಿಗೆ ಅಗೌರವ ತೋರಿದ್ದರೆ, ಅವರು ಅದಕ್ಕೆ ಪುರಾವೆ ತೋರಿಸಬೇಕು’ ಎಂದು ಸಿಂಗ್ ಹೇಳಿದರು.

‘ನಾನು ಅಧ್ಯಕ್ಷನಾಗಿ ಆಯ್ಕೆಯಾದ ಕೂಡಲೇ ಪ್ರತಿಭಟನೆ ಆರಂಭಿಸಿದ್ದಾರೆ, ಅದರಲ್ಲಿ ನನ್ನ ತಪ್ಪೇನು’ ಎಂದು ಕುಸ್ತಿಪಟುಗಳನ್ನು ಪ್ರಶ್ನಿಸಿದರು.

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಬಗ್ಗೆ ಕೇಳಿದಾಗ, ‘ಇದು ಅವರ ವೈಯಕ್ತಿಕ ವಿಷಯ; ಆದರೆ, ಅವರು ಹಾಗೆ ಮಾಡಬಾರದು. ಏಕೆಂದರೆ ನಮ್ಮ ನಾಗರಿಕರ ಹಣ ಮತ್ತು ಭಾವನೆಗಳು ಅವರನ್ನು ಇಂದು ಸ್ಟಾರ್‌ಗಳನ್ನಾಗಿ ಮಾಡಿದೆ’ ಎಂದರು.

ಇದನ್ನೂ ಓದಿ; ‘ಮುಸ್ಲಿಂ ಲೀಗ್ ಜಮ್ಮು-ಕಾಶ್ಮೀರ’ ಸಂಘಟನೆ ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಆದೇಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...