Homeಕರ್ನಾಟಕಭಾರತಕ್ಕೆ ದಾಳಿ ಇಟ್ಟ ಮಿಡತೆಗಳು, ಕರ್ನಾಟಕಕ್ಕಿಲ್ಲ ಭಯ; ಏಕೆ ಗೊತ್ತಾ?

ಭಾರತಕ್ಕೆ ದಾಳಿ ಇಟ್ಟ ಮಿಡತೆಗಳು, ಕರ್ನಾಟಕಕ್ಕಿಲ್ಲ ಭಯ; ಏಕೆ ಗೊತ್ತಾ?

- Advertisement -
- Advertisement -

ದಕ್ಷಿಣ ಆಫ್ರಿಕಾದಿಂದ ಹೊರಟು ಗಲ್ಪ್‌ ರಾಷ್ಟ್ರಗಳ ಮರುಭೂಮಿಯನ್ನು ದಾಟಿ, ಪಾಕಿಸ್ತಾನದ ಮೂಲಕ ಇದೀಗ ಭಾರತಕ್ಕೂ ಲಗ್ಗೆ ಇಟ್ಟಿರುವ ಡೆಸರ್ಟ್ ಲೊಕಸ್ಟ್ (DESERT LOCUST) ಈಗಾಗಲೇ ಗಡಿಭಾಗದ ರಾಜಸ್ತಾನದಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಇದೀಗ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿರುವ ಈ ಮಿಡತೆಗಳು ಕರ್ನಾಟಕಕ್ಕೂ ದಾಳಿ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಕರ್ನಾಟಕ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೋಟಿ ಸಂಖ್ಯೆಗಳಲ್ಲಿ ಹಿಂಡು ಹಿಂಡಾಗಿ ಚಲಿಸುವ ಈ ಮಿಡತೆಗಳು ಒಮ್ಮೆ ದಾಳಿ ಇಟ್ಟರೆ ಇಡೀ ಹಸಿರನ್ನು ಬಸಿದು ಕುಡಿದು ಬಿಡುತ್ತದೆ. ಇದರಿಂದ ಮನುಷ್ಯನ ಆಹಾರಕ್ಕೂ ತತ್ವಾರ ಉಂಟಾಗುತ್ತದೆ. ಈ ಮಿಡತೆಗಳು ಇದೀಗ ಕರ್ನಾಟಕದ ಬೀದರ್‌ ಜಿಲ್ಲೆಯಿಂದ 510 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ನಾಸಿಕ್ ಹಾಗೂ ನಾಗಪುರ ಜಿಲ್ಲೆಯಲ್ಲಿ ಬೀಡು ಬಿಟ್ಟಿವೆ. ಹೀಗಾಗಿ ಕರ್ನಾಟಕಕ್ಕೂ ಇವು ದಾಳಿ ಇಡಲಿವೆ ಎನ್ನಲಾಗುತ್ತಿತ್ತು. ಇದೇ ಕಾರಣಕ್ಕೆ ಬೀದರ್‌ ಜಿಲ್ಲಾಡಳಿತ ಜೈವಿಕ ಕೀಟ ನಾಶಕವನ್ನು ಸಂಗ್ರಹಿಸಿತ್ತು.

ಆದರೆ, ಈ ಮಿಡತೆಗಳು ಗಾಳಿಯ ದಿಕ್ಕಿಗೆ ಮಾತ್ರ ಚಲಿಸುತ್ತವೆ. ಹೀಗಾಗಿ ಮಹಾರಾಷ್ಟ್ರದಿಂದ ಗಾಳಿಯ ದಿಕ್ಕು ಇದೀಗ ಮಧ್ಯಪ್ರವೇಶದತ್ತ ಬದಲಾದ ಕಾರಣ ಈ ಮಿಡತೆಗಳು ಮಧ್ಯಪ್ರದೇಶದ ಕಡೆಗೆ ಪ್ರಯಾಣ ಬೆಳೆಸಿವೆ ಎನ್ನಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದು ಕರ್ನಾಟಕದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.


ಓದಿ: ಮಿಡತೆ ದಾಳಿಯ ಪೂರ್ವಾಪರ: ಅದೂ ಯಾಕೊ ಕೊರೊನಾ ಥರಾ!; ನಾಗೇಶ್ ಹೆಗಡೆ ಬರಹ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...