Homeಮುಖಪುಟಲೋಕಸಭಾ ಚುನಾವಣೆ-2024: ಕರ್ನಾಟಕದ ಏಳು ಸ್ಥಾನ ಸೇರಿದಂತೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆ-2024: ಕರ್ನಾಟಕದ ಏಳು ಸ್ಥಾನ ಸೇರಿದಂತೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ

- Advertisement -
- Advertisement -

ವಿಪಕ್ಷಗಳ ‘ಇಂಡಿಯಾ’ ಬಣದೊಂದಿಗೆ ಸೀಟು ಹಂಚಿಕೆ ಗೊಂದಲಗಳು ಅಲ್ಪಮಟ್ಟಿಗೆ ಬಗೆಹರಿಯುತ್ತಿರುವಾಗ ಕಾಂಗ್ರೆಸ್‌ ಪಕ್ಷವು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 2024ರ ಲೋಕಸಭಾ ಚುನಾವಣೆಗೆ ಕೈ ನಾಯಕರು ಸಜ್ಜಾಗಿದ್ದು, ಕರ್ನಾಟಕದ ಏಳು ಸ್ಥಾನಗಳು ಸೇರಿದಂತೆ ಒಟ್ಟು 39 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಗುರುವಾರ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ ಮತ್ತು ತ್ರಿಪುರಾ ರಾಜ್ಯಗಳಿಗೆ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದೆ. ಘೋಷಿಸಲಾದ 39 ಅಭ್ಯರ್ಥಿಗಳಲ್ಲಿ 15 ಸಾಮಾನ್ಯ ಜಾತಿ ಮತ್ತು 24 ಎಸ್‌ಸಿ/ಎಸ್‌ಟಿ/ಅಲ್ಪಸಂಖ್ಯಾತ ಅಭ್ಯರ್ಥಿಗಳಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಗರಿಷ್ಠ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ನಮ್ಮ ಆದ್ಯತೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಗರಿಷ್ಠ ಸಂಖ್ಯೆಯ ಸಂಸತ್ ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಉಪಸ್ಥಿತರಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ಉತ್ತರ ಪ್ರದೇಶದ ಅಮೇಥಿಯಿಂದ ರಾಹುಲ್ ಗಾಂಧಿ ಎರಡನೇ ಸ್ಥಾನಕ್ಕೆ ಸ್ಪರ್ಧಿಸುತ್ತಾರಾ ಎಂಬ ಸಸ್ಪೆನ್ಸ್ ಹಾಗೆಯೇ ಉಳಿದಿದೆ. ಉಳಿದ ರಾಜ್ಯಗಳನ್ನು ಮುಂದಿನ ಸಭೆಗಳಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಉಳಿದಿರುವ ರಾಜ್ಯದಲ್ಲಿ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲು ಪಕ್ಷವು ಮಾರ್ಚ್ 11 ರಂದು ತನ್ನ ಎರಡನೇ ಚುನಾವಣಾ ಸಮಿತಿ ಸಭೆಯನ್ನು ನಡೆಸಲಿದೆ.

ಛತ್ತೀಸ್‌ಗಢ

ಜಂಗ್ರಿರ್-ಚಂಪಾ (ಎಸ್‌ಸಿ): ಶಿವಕುಮಾರ್ ದಹರಿಯಾ

ಕೊರ್ಬಾ: ಜ್ಯೋತ್ಸನಾ ಮಹಂತ್

ರಾಜನಂದಗಾಂವ್: ಭೂಪೇಶ್ ಬಘೇಲ್

ದುರ್ಗ್: ರಾಜೇಂದ್ರ ಸಾಹು

ರಾಯಪುರ: ವಿಕಾಸ್ ಉಪಾಧ್ಯಾಯ

ಮಹಾಸಮುಂಡ್: ತಾಮಧ್ವಜ್ ಸಾಹು

ಕರ್ನಾಟಕ

ಬಿಜಾಪುರ (ಎಸ್‌ಸಿ): ಎಚ್‌ಆರ್‌ ಅಲಗೂರು

ಹಾವೇರಿ: ಆನಂದಸ್ವಾಮಿ ಗಡ್ಡದೇವರ ಮಠ

ಶಿವಮೊಗ್ಗ: ಗೀತಾ ಶಿವರಾಜಕುಮಾರ್

ಹಾಸನ: ಶ್ರೇಯಸ್ ಪಟೇಲ್

ತುಮಕೂರು: ಎಸ್‌.ಪಿ. ಮುದ್ದಹನುಮೇಗೌಡ

ಮಂಡ್ಯ: ವೆಂಕಟರಾಮೇಗೌಡ (ಸ್ಟಾರ್ ಚಂದ್ರು)

ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್

ಕೇರಳ

ಕಾಸರಗೋಡು: ರಾಜಮೋಹನ್ ಉನ್ನಿಥಾನ್

ಕಣ್ಣೂರು: ಕೆ ಸುಧಾಕರನ್

ವಡಕರ: ಶಾಫಿ ಪರಂಬಿಲ್

ವಯನಾಡ್: ರಾಹುಲ್ ಗಾಂಧಿ

ಕೋಝಿಕ್ಕೋಡ್: ಎಂಕೆ ರಾಘವನ್

ಪಾಲಕ್ಕಾಡ್: ವಿಕೆ ಶ್ರೀಕಂದನ್

ಆಲತ್ತೂರು (ಎಸ್‌ಸಿ): ರಮ್ಯಾ ಹರಿದಾಸ್

ತ್ರಿಶೂರ್: ಕೆ ಮುರಳೀಧರನ್

ಚಾಲಕುಡಿ: ಬೆನ್ನಿ ಬೆಹನಾನ್

ಎರ್ನಾಕುಲಂ: ಹೈಬಿ ಈಡನ್

ಇಡುಕ್ಕಿ: ಡೀನ್ ಕುರಿಯಕೋಸ್

ಆಲಪ್ಪುಳ: ಕೆ.ಸಿ.ವೇಣುಗೋಪಾಲ್

ಮಾವೇಲಿಕ್ಕರ (ಎಸ್‌ಸಿ): ಕೆ ಸುರೇಶ್

ಪತ್ತನಂತಿಟ್ಟ: ಆಂಟೊ ಆಂಟೋನಿ

ಅಟ್ಟಿಂಗಲ್: ಅಡೂರ್ ಪ್ರಕಾಶ್

ತಿರುವನಂತಪುರಂ: ಶಶಿ ತರೂರ್

ಲಕ್ಷದ್ವೀಪ

ಲಕ್ಷದ್ವೀಪ (ಎಸ್‌ಟಿ): ಮೊಹಮ್ಮದ್ ಹಮ್ದುಲ್ಲಾ ಸಯೀದ್

ಮೇಘಾಲಯ

ಶಿಲ್ಲಾಂಗ್ (ಎಸ್‌ಟಿ): ವಿನ್ಸೆಂಟ್ ಎಚ್ ಪಾಲಾ

ತುರಾ (ಎಸ್‌ಟಿ): ಸಲೆಂಗ್ ಎ ಸಂಗ್ಮಾ

ನಾಗಾಲ್ಯಾಂಡ್

ನಾಗಾಲ್ಯಾಂಡ್: ಎಸ್ ಸುಪೊಂಗ್ಮೆರೆನ್ ಜಮೀರ್

ಸಿಕ್ಕಿಂ

ಸಿಕ್ಕಿಂ: ಗೋಪಾಲ್ ಚೆಟ್ರಿ

ತೆಲಂಗಾಣ

ಜಹೀರಾಬಾದ್: ಸುರೇಶ್ ಕುಮಾರ್ ಶೆಟ್ಕಾರ್

ನಲ್ಗೊಂಡ: ರಘುವೀರ್ ಕುಂದೂರು

ಮಹೆಬೂಬನಗರ: ಚಲ್ಲಾ ವಂಶಿ ಚಂದ್ ರೆಡ್ಡಿ

ಮಹಬೂಬಾಬಾದ್ (ಎಸ್‌ಟಿ): ಬಲರಾಮ್ ನಾಯ್ಕ್ ಪೋರಿಕ

ತ್ರಿಪುರಾ

ತ್ರಿಪುರ ಪಶ್ಚಿಮ: ಆಶಿಶ್ ಕುಮಾರ್ ಸಹಾ

ಇದನ್ನೂ ಓದಿ; ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ; ವಿಡಿಯೋ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...