Homeಮುಖಪುಟಲೆಫ್ಟಿನೆಂಟ್ ಗವರ್ನರ್‌‌‌ ಸಾಹೇಬ್‌‌ ನಿಮ್ಮ ‘ಸೂಪರ್‌ ಬಾಸ್‌’‌ಗೆ ಸ್ವಲ್ಪ ಚಿಲ್ ಮಾಡಲು ಹೇಳಿ: ದೆಹಲಿ ಸಿಎಂ...

ಲೆಫ್ಟಿನೆಂಟ್ ಗವರ್ನರ್‌‌‌ ಸಾಹೇಬ್‌‌ ನಿಮ್ಮ ‘ಸೂಪರ್‌ ಬಾಸ್‌’‌ಗೆ ಸ್ವಲ್ಪ ಚಿಲ್ ಮಾಡಲು ಹೇಳಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

- Advertisement -
- Advertisement -

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರೊಂದಿಗೆ ತಮ್ಮ ಸರ್ಕಾರವು ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ತಮ್ಮ ಪತ್ನಿ ಕೂಡ ಲೆಫ್ಟಿನೆಂಟ್‌ ಗವರ್ನರ್‌‌ನಷ್ಟು “ಗದರಿಸುವುದಿಲ್ಲ” ಎಂದು ಹೇಳಿದ್ದಾರೆ.

ಕಳೆದ ಆರು ತಿಂಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌‌ ಕೈಯಿಂದ ಪಡೆದಷ್ಟು ‘ಪ್ರೇಮ ಪತ್ರಗಳನ್ನು’ ಹೆಂಡತಿಯಿಂದ ಕೂಡಾ ಇಡೀ ಜೀವನದಲ್ಲಿ ಪಡೆದಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಲೆಫ್ಟಿನೆಂಟ್‌ ಗವರ್ನರ್‌‌ ಸಾಹೆಬ್‌, ಸ್ವಲ್ಪ ಚಿಲ್ ಮಾಡಿ ಮತ್ತು ಸ್ವಲ್ಪ ಚಿಲ್ ಆಗಿ ಎಂದು ನಿಮ್ಮ ಸೂಪರ್‌ ಬಾಸ್‌‌‌ಗೆ ಕೂಡಾ ಹೇಳಿ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಆಫರೇಷನ್‌ ಕಮಲ ವಿಫಲ’

ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಮುಖ್ಯಮಂತ್ರಿ ಮತ್ತು ಅವರ ಸಚಿವ ಸಹೋದ್ಯೋಗಿಗಳು ರಾಜ್ ಘಾಟ್ ಮತ್ತು ವಿಜಯ್ ಘಾಟ್‌ನಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗದೆ ‘ಅತ್ಯಂತ ನಿರ್ಲಕ್ಷ್ಯ’ ತೋರಿಸಿದ್ದಾರೆ ಎಂದು ಲೆಫ್ಟಿನೆಂಟ್‌ ಗವರ್ನರ್‌‌ ಸಕ್ಸೇನಾ ಪತ್ರದಲ್ಲಿ ಆರೋಪಿಸಿದ ಕೆಲವೇ ದಿನಗಳಲ್ಲಿ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

ಸಕ್ಸೇನಾ ಅವರು ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳ ಅನುಪಸ್ಥಿತಿಯು ‘ಸ್ವೀಕಾರಾರ್ಹವಲ್ಲ’, ಅದು ಭಯಾನಕ ಕೃತ್ಯ ಎಂದು ಹೇಳಿದ್ದರು. ಮೂಲಸೌಕರ್ಯ ಯೋಜನೆಗಳಲ್ಲಿನ ವಿಳಂಬವನ್ನು ಉಲ್ಲೇಖಿಸಿ, ಮರಗಳನ್ನು ಕಡಿಯಲು ಅನುಮತಿಯನ್ನು ತ್ವರಿತಗೊಳಿಸುವಂತೆ ಕಳೆದ ವಾರ ಸಕ್ಸೇನಾ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.

“ನನ್ನ ಹೆಂಡತಿ ಕೂಡ ನನ್ನನ್ನು ಲೆಫ್ಟಿನೆಂಟ್‌ ಗವರ್ನರ್‌‌ ಸಾಹಿಬ್‌ನಷ್ಟು ಬೈಯುವುದಿಲ್ಲ. ಕಳೆದ ಆರು ತಿಂಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌‌ ಸಾಹಿಬ್ ಬರೆದಷ್ಟು ಪ್ರೇಮ ಪತ್ರಗಳನ್ನು ನನ್ನ ಹೆಂಡತಿ ಇಡೀ ಜೀವನದಲ್ಲಿ ನನಗೆ ಬರೆದಿಲ್ಲ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮೇ ತಿಂಗಳಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಸಕ್ಸೇನಾ ಅಧಿಕಾರ ವಹಿಸಿಕೊಂಡ ನಂತರ, ದೆಹಲಿಯ ಅಬಕಾರಿ ನೀತಿ(ಈಗ ಹಿಂಪಡೆಯಲಾಗಿದೆ), ತರಗತಿ ಕೊಠಡಿಗಳು ಮತ್ತು ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಕೇಜ್ರಿವಾಲ್ ಸರ್ಕಾರದ ಹಲವಾರು ಉಪಕ್ರಮಗಳ ಬಗ್ಗೆ ಅವರು ತನಿಖೆಗೆ ಆದೇಶಿಸಿದ್ದಾರೆ. ಇತ್ತೀಚೆಗೆ ದೆಹಲಿಯ ವಿದ್ಯುತ್ ಸಬ್ಸಿಡಿ ಯೋಜನೆಯ ತನಿಖೆಗೆ ಕೂಡಾ ಆದೇಶಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ‘ಸರಕಾರಗಳ ಸರಣಿ ಕೊಲೆಗಾರ’: ಕೇಜ್ರಿವಾಲ್

ಲೆಫ್ಟಿನೆಂಟ್ ಗವರ್ನರ್ ಅವರ ಈ ಕ್ರಮಗಳು ರಾಜಕೀಯ ಪ್ರೇರಿತವಾಗಿದ್ದು, ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿ ಆರೋಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...