Homeಮುಖಪುಟಮಧ್ಯಪ್ರದೇಶ: ವ್ಯಕ್ತಿಯೊಬ್ಬರ ಮನೆಗೆ ಬಂತು 3,419 ಕೋಟಿ ರೂಗಳ ವಿದ್ಯುತ್ ಬಿಲ್! ನಂತರ?

ಮಧ್ಯಪ್ರದೇಶ: ವ್ಯಕ್ತಿಯೊಬ್ಬರ ಮನೆಗೆ ಬಂತು 3,419 ಕೋಟಿ ರೂಗಳ ವಿದ್ಯುತ್ ಬಿಲ್! ನಂತರ?

- Advertisement -
- Advertisement -

ನಿಮ್ಮ ಮನೆಗೆ ಒಂದು ತಿಂಗಳಿಗೆ ಅಂದಾಜು ಎಷ್ಟು ವಿದ್ಯುತ್ ಬಿಲ್ ಬರಬಹುದು? 500 ರೂ ಅಥವಾ 1000 ರೂ? ಬಹಳ ಜನ ಇರುವ ಕುಟಂಬವಾದರೆ ಹೆಚ್ಚೆಂದರೆ 2000 ರೂ ಬರಬಹುದು ಅಲ್ಲವೇ? ಆದರೆ ಇಲ್ಲಿ ನೋಡಿ, ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮನೆಗೆ ವಿದ್ಯುತ್ ಕಂಪನಿಯೊಂದು ಬರೋಬ್ಬರಿ 3ಸಾವಿರ ಕೋಟಿ ರೂಗೂ ಅಧಿಕ ಬಿಲ್ ಕಳಿಸಿದೆ. ಇದನ್ನು ನೋಡಿದರೆ ಯಾರಿಗಾದರೂ ಗಾಬರಿಯಾಗುವುದಿಲ್ಲ?

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪ್ರಿಯಾಂಕ ಗುಪ್ತಾ ಎಂಬ ನಿವಾಸಿಗೆ ಜುಲೈ 20 ರಂದು MPMKVVC ವಿದ್ಯುತ್ ಕಂಪನಿಯು 3,419 ಕೋಟಿ ರೂಗಳ ವಿದ್ಯುತ್ ಬಿಲ್ ಕಳಿಸಿದೆ! ಇದನ್ನು ಗಮನಿಸಿದ ಅವರ ಮಾವ ಆಘಾತಕ್ಕೊಳಗಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಷಯವು ಚರ್ಚೆ ಹುಟ್ಟುಹಾಕಿದ ನಂತರ ವಿದ್ಯುತ್ ಕಂಪನಿಯು ಮತ್ತೊಮ್ಮೆ ಪರಿಶೀಲನೆ ನಡೆಸಿ, ದೋಷವನ್ನು ಸರಿಪಡಿಸಿಕೊಂಡು 1,300 ರೂಗಳ ಹೊಸ ಸರಿಯಾದ ಬಿಲ್ ನೀಡಿದೆ.

ಮೊದಲಿಗೆ ಮೂರು ಸಾವಿರ ಕೋಟಿ ರೂಗಳ ಬಿಲ್ ಬಂದ ತಕ್ಷಣ ಪ್ರಿಯಾಂಕ ಗುಪ್ತಾರವರ ಕುಟುಂಬ ಆತಂಕಕ್ಕೊಳಗಾಗಿದೆ. ಅವರು ವಾಸವಿರುವ ಶಿವ ವಿಹಾರ್ ಕಾಲೋನಿಯ ನೆರೆಹೊರೆಯವರು ಏನೋ ತಪ್ಪಾಗಿರಬೇಕೆಂದು ಅಂದಾಜಿಸಿ ಆತಂಕದಲ್ಲಿರುವ ಗುಪ್ತಾ ಕುಟುಂಬವನ್ನು ಸಮಾಧಾನಪಡಿಸಿದ್ದಾರೆ.

ಈ ಪ್ರಕರಣದ ಕುರಿತು ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾತಾನಾಡಿ, “ನೌಕರನು ಸಾಫ್ಟ್‌ವೇರ್‌ನಲ್ಲಿ ಯೂನಿಟ್ ಜಾಗದಲ್ಲಿ ಗ್ರಾಹಕರ ಸಂಖ್ಯೆಯನ್ನು ನಮೂದಿಸಿದ ಕಾರಣ ಹೆಚ್ಚು ಹಣದ ಬಿಲ್‌ನ  ಅವಘಡ ಸಂಭವಿಸಿದೆ. ಮಾನವ ದೋಷದಿಂದಾಗಿ ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾಗಿದೆ. ಆ ನಂತರ ಸರಿಪಡಿಸಿದ  1,300 ರೂಗಳ ಬಿಲ್ ಅನ್ನುಗ್ರಾಹಕರಿಗೆ ನೀಡಲಾಗಿದೆ. ತಪ್ಪೆಸೆಗಿದ ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’’ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಮಾತನಾಡಿ,” ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಂಗಾಳ ಸಚಿವನ ಸಹಾಯಕಿಯ ಮನೆಗಳಿಂದ 50 ಕೋಟಿ ರೂ ಹಣ, 5 ಕೆಜಿ ಚಿನ್ನ ವಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...