Homeಮುಖಪುಟಮಧ್ಯಪ್ರದೇಶ: ಬೈಕ್‌ನಲ್ಲಿ 80 ಕಿ.ಮೀ ದೂರ ತಾಯಿಯ ಶವ ಸಾಗಿಸಿದ ಅಮಾನವೀಯ ಘಟನೆ

ಮಧ್ಯಪ್ರದೇಶ: ಬೈಕ್‌ನಲ್ಲಿ 80 ಕಿ.ಮೀ ದೂರ ತಾಯಿಯ ಶವ ಸಾಗಿಸಿದ ಅಮಾನವೀಯ ಘಟನೆ

- Advertisement -
- Advertisement -

ನಾಗರೀಕ ಸಮಾಜವೊಂದು ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ಮತ್ತೆ ಮರುಕಳುಹಿಸಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ತಾಯಿಯ ಶವ ಸಾಗಿಸಲು ಆಂಬುಲೆನ್ಸ್ ಸಿಗದ ಕಾರಣ ಮಕ್ಕಳಿಬ್ಬರು ಮರದ ಹಲಗೆಗೆ ಶವವನ್ನು ಕಟ್ಟಿ 80 ಕಿ.ಮೀ ದೂರ ಬೈಕ್‌ನಲ್ಲಿ ಸಾಗಿಸಿದ ಧಾರುಣ ಘಟನೆ ವರದಿಯಾಗಿದೆ.

ಶಹದೋಲ್ ಜಿಲ್ಲೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಅನುಪ್ಪುರ್ ಜಿಲ್ಲೆಯ ಗೋಡಾರ ಗ್ರಾಮದ ವ್ಯಕ್ತಿಗಳು ತಮ್ಮ ತಾಯಿಯನ್ನು ದಾಖಲಿಸಿದ್ದರು. ಆದರೆ ಸಮರ್ಪಕ ಚಿಕಿತ್ಸೆ ಸಿಗದ ಕಾರಣ ನಮ್ಮ ತಾಯಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಅವರು, ಶವ ಸಾಗಿಸಲು ಆಂಬುಲೆನ್ಸ್ ಸಹ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ. “ಖಾಸಗಿ ಆಂಬುಲೆನ್ಸ್‌ನವರು 5000 ರೂ ಚಾರ್ಜ್ ಆಗುತ್ತದೆ ಅಂದರು. ಆದರೆ ಅಷ್ಟು ಹಣ ನಮ್ಮ ಬಳಿ ಇರಲಿಲ್ಲ. ಹಾಗಾಗಿ 100 ರೂ ಕೊಟ್ಟು ಮರದ ಹಲಗೆ ಖರೀದಿಸಿ ಅದಕ್ಕೆ ನಮ್ಮ ತಾಯಿಯ ಶವ ಕಟ್ಟಿ ಬೈಕ್‌ನಲ್ಲಿಯೇ ಕೊಂಡೊಯ್ದವು” ಎಂದು ಸುಂದರ್ ಯಾದವ್ ತಿಳಿಸಿದ್ದಾರೆ.

ಮೊದಲು ಅನುಪ್ಪುರ್ ಜಿಲ್ಲಾಸ್ಪತ್ರೆಗೆ ನಮ್ಮ ತಾಯಿಯನ್ನು ಸೇರಿಸಲಾಗಿತ್ತು. ಆದರೆ ಎದೆನೋವು ಹೆಚ್ಚಾದಾಗ ಅವರು ಶಹದೋಲ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ವರ್ಗಾಹಿಸಲು ಸೂಚಿಸಿದರು. ಅದರಂತೆ ಇಲ್ಲಿಗೆ ವರ್ಗಾಹಿಸಿದರು ಸಹ ಇಲ್ಲಿನ ಸಿಬ್ಬಂದಿ ಸಮರ್ಪಕ ಚಿಕಿತ್ಸೆ ನೀಡದ ಕಾರಣ ನಮ್ಮ ತಾಯಿ ಮರಣ ಹೊಂದಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ವರ್ಷದ ಮಾರ್ಚ್ 30 ರಂದು ಇದೇ ಮಧ್ಯಪ್ರದೇಶದ ರೇವಾ ಜಿಲ್ಲೆಯ ರಾಯ್ಪುರ್‌ನಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ಮಹಿಳೆಯ ಶವ ಸಾಗಿಸಲು ಯಾವುದೇ ಆಂಬುಲೆನ್ಸ್ ಸಿಗದ ಕಾರಣ ನಾಲ್ವರು ಮಹಿಳೆಯರು ಮಂಚದಲ್ಲಿಯೇ ಶವ ಹೊತ್ತೊಯ್ದಿದ್ದರು.

ಇದನ್ನೂ ಓದಿ; ಮಧ್ಯಪ್ರದೇಶ: ಶವ ಸಾಗಿಸಲು ಆಂಬುಲೆನ್ಸ್ ಸಿಗದೆ ಮಂಚದಲ್ಲಿಯೇ ಹೊತ್ತು ನಡೆದ ಮಹಿಳೆಯರು

ಘಟನೆ ಕುರಿತು ಜಿಲ್ಲೆಯ ಮುಖ್ಯ ಆರೋಗ್ಯ ಅಧಿಕಾರಿ ಬಿ.ಎಲ್ ಮಿಶ್ರಾ ಮಾತನಾಡಿ, “ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶವ ಸಾಗಿಸಲು ವಾಹನ ಅಥವಾ ಆಟೋ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಆದರೆ ಕಾಯಲು ಸಿದ್ದವಿಲ್ಲದ ಮೃತರ ಸಂಬಂಧಿಗಳು ತರಾತುರಿಯಲ್ಲಿ ಮಂಚದಲ್ಲಿಯೇ ಶವ ಹೊತ್ತೊಯ್ದಿದ್ದಾರೆ. ಇದೇನು ದೊಡ್ಡ ವಿಷಯವಲ್ಲ, ಏಕೆಂದರೆ ನಾವು ಶವ ಸಾಗಿಲು ವಾಹನ ಹೊಂದಿಲ್ಲ” ಎಂದಿದ್ದರು.

ಅವರ ಅಂದಿನ ಉಡಾಫೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದಾಗಿ ಇಂದು ಮತ್ತೊಂದು ಅದೇ ರೀತಿಯ ದುರ್ಘಟನೆ ಜರುಗಿದೆ. ಆದರೆ ಇದರಿಂದ ಸರ್ಕಾರವಾಗಲಿ, ಆರೋಗ್ಯ ಇಲಾಖೆಯಾಗಲಿ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಕಳೆದ ವಾರ ಮಧ್ಯಪ್ರದೇಶ ಸಾಗರ್ ಎಂಬ ಪ್ರದೇಶದಲ್ಲಿ ಒಂದೇ ಸಿರಿಂಜ್‌ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದ ತೀವ್ರ ಆರೋಗ್ಯದ ಘಟನೆ ವರದಿಯಾಗಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ಜರುಗಿವೆ ಮತ್ತು ದಿನನಿತ್ಯ ಜರುಗುತ್ತಿವೆ. ಎಲ್ಲೊ ಅಲ್ಲೊಂದು ಇಲ್ಲೊಂದು ಮಾತ್ರ ವರದಿಯಾಗುತ್ತಿವೆ. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಕಳಪೆ ಮಟ್ಟದಲ್ಲಿರುವುದನ್ನು ಇಂತಹ ಘಟನೆಗಳು ಪದೇ ಪದೇ ನಿರೂಪಿಸುತ್ತಿವೆ. ದೇಶದ ಎಲ್ಲರಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಬೇಕಾದ ಸರ್ಕಾರಗಳು ತಮ್ಮ ಕರ್ತವ್ಯ ಪಾಲಿಸುತ್ತಿಲ್ಲ. ಸಮರ್ಪಕ ಮೇಲ್ವಿಚಾರಣೆ ಇಲ್ಲದ ಕಾರಣಕ್ಕೆ ಇರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅದರಿಂದಾಗಿಯೇ ಇಂತಹ ಅನಾಹುತಗಳು ಸಂಭವಿಸುತ್ತಿವೆ. ಈಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಮತ್ತು ಅದಕ್ಕಾಗಿ ಜನರು ಒತ್ತಾಯಿಸಬೇಕಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಂದರೆ ವರದಿ ಮಾಡಿರುವುದೇ ತಪ್ಪಾ, ಮಾದ್ಯಮ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತದೆ.

  2. ಅಂದರೆ ವರದಿ ಮಾಡಿರುವುದೇ ತಪ್ಪಾ, ಮಾದ್ಯಮ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತದೆ. ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...