Homeಮುಖಪುಟಗುಜರಾತ್‌: LSD ಸೋಂಕಿನಿಂದ 1240ಕ್ಕೂ ಅಧಿಕ ಹಸುಗಳ ಸಾವು

ಗುಜರಾತ್‌: LSD ಸೋಂಕಿನಿಂದ 1240ಕ್ಕೂ ಅಧಿಕ ಹಸುಗಳ ಸಾವು

- Advertisement -
- Advertisement -

Lumpy skin disease ಎಂದು ಕರೆಯುವ ರೋಗ ತಗಲಿ 1240ಕ್ಕೂ ಅಧಿಕ ಹಸುಗಳು ಸಾವನಪ್ಪಿರುವ ಘಟನೆ ಗುಜರಾತ್‌ನಲ್ಲಿ ವರದಿಯಾಗಿದೆ. ಈ ರೋಗದ ಸೋಂಕು ರಾಜ್ಯದ 17 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಕೃಷಿ ಮತ್ತು ಪಶುಸಂಗೋಪನೆ ಇಲಾಕೆಯ ಸಚಿವ ರಾಘವ್‌ಜಿ ಪಟೇಲ್ ಮಾತನಾಡಿ, “ಈ ವೈರಲ್ ಕಾಯಿಲೆಗೆ ತುತ್ತಾಗಿ ಶನಿವಾರದವರೆಗೆ 1240 ಹಸುಗಳು ಸಾವನಪ್ಪಿವೆ. ರಾಜ್ಯದ 33 ಜಿಲ್ಲೆಗಳಲ್ಲಿ 17 ಜಿಲ್ಲೆಗಳಿಗೆ, ಅದರಲ್ಲಿಯೂ ಸೌರಾಷ್ಟ್ರ ಪ್ರಾಂತ್ಯದಲ್ಲಿ ಈ ವೈರಸ್ ಹರಡಿದೆ. ಆದರೂ 5.74 ಲಕ್ಷ ಪ್ರಾಣಿಗಳಿಗೆ ಕಾಯಿಲೆಯ ವಿರುದ್ಧ ಲಸಿಕೆ ಹಾಕಲಾಗಿದೆ” ಎಂದಿದ್ದಾರೆ.

ಈ ವೈರಸ್ ದಾಳಿಯಿಂದ ಹಸುಗಳನ್ನು ಉಳಿಸುವುದಕ್ಕಾಗಿ ಹಲವು ಜಿಲ್ಲಾಡಳಿತಗಳು ತುರ್ತುಕ್ರಮಕ್ಕೆ ಮುಂದಾಗಿವೆ. ಹಸುಗಳ ಜಾತ್ರೆಗಳನ್ನು ರದ್ದುಪಡಿಸಿದ್ದು, ಆಗಸ್ಟ್ 21ರವರೆಗೆ ಹಸುಗಳ ಸಾಗಾಣೆಯನ್ನು ನಿಷೇಧಿಸಲಾಗಿದೆ.

ಸಾವನಪ್ಪಿದ ಹಸುಗಳ ರಾಶಿ ಎಲ್ಲೆಂದರಲ್ಲಿ ಕೊಳೆಯುತ್ತಿದ್ದು ಅವುಗಳ ಫೋಟೊ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಸುಗಳ ಸಾವಿನ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದೆ. “ಹಸುಗಳ ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಮತ್ತು ಕಡಿಮೆ ತೋರಿಸಲಾಗುತ್ತಿದೆ. ಈ ರೋಗಕ್ಕೆ ಹಸುಗಳನ್ನು ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರವು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಕಾಯಿಲೆಯಿಂದ ಹಸುಗಳನ್ನು ರಕ್ಷಿಸುವಂತೆ ಆದೇಶಿಸಿದೆ. ಸಮಿತಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಪಶುವೈದ್ಯರು ಮತ್ತು ಇನ್ನಿತರ ಅಧಿಕಾರಿಗಳ ಸೇರಿದ್ದಾರೆ ಎನ್ನಲಾಗಿದೆ.

ರಾಜ್ಯದ 1746 ಹಳ್ಳಿಗಳಲ್ಲಿ ಒಟ್ಟು 50,328 ಹಸುಗಳಿಗೆ ಈ ಸೋಂಕು ತಗುಲಿದೆ. ಪ್ರತಿ 10 ಹಳ್ಳಿಗೆ ಒಂದು ಮೊಬೈಲ್ ವಾಹನದ ಪಶು ಆಸ್ಪತ್ರೆ ತೆರೆಯಲಾಗಿದೆ. ರಾಜ್ಯದ ಪಶು ಸಂಗೋಪನಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಹ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಏನಿದು Lumpy skin disease?

ಸೊಳ್ಳೆಗಳು, ನೊಣಗಳು, ಕೀಟಗಳು ಇತ್ಯಾದಿಗಳಿಂದ ಅಥವಾ ನೇರ ಸಂಪರ್ಕ, ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವ ವೈರಲ್ ಸೋಂಕು ಲಂಪಿ ಚರ್ಮದ ಕಾಯಿಲೆಯಾಗಿದೆ. ಇದರ ಮುಖ್ಯ ಲಕ್ಷಣಗಳೆಂದರೆ ಪ್ರಾಣಿಗಳಲ್ಲಿ ಸಾಮಾನ್ಯ ಜ್ವರ, ಕಣ್ಣು ಮತ್ತು ಮೂಗಿನಿಂದ ಸ್ರವಿಸುವಿಕೆ, ಅತಿಯಾದ ಜೊಲ್ಲು ಸುರಿಸುವುದು, ದೇಹದಲ್ಲಿ ಗಂಟುಗಳಂತಹ ಮೃದುವಾದ ಗುಳ್ಳೆಗಳು, ಕಡಿಮೆ ಹಾಲು ಉತ್ಪಾದನೆ ಕಂಡುಬರುತ್ತದೆ. ಆ ಪ್ರಾಣಿಗಳು ಆಹಾರ ತಿನ್ನಲು ತೊಂದರೆಯಾಗುತ್ತದೆ. ಇದು ಕೆಲವೊಮ್ಮೆ ಪ್ರಾಣಿಗಳ ಸಾವಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಧ್ಯಪ್ರದೇಶ: ಬೈಕ್‌ನಲ್ಲಿ 80 ಕಿ.ಮೀ ದೂರ ತಾಯಿಯ ಶವ ಸಾಗಿಸಿದ ಅಮಾನವೀಯ ಘಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...