Homeಮುಖಪುಟಮಧ್ಯಪ್ರದೇಶ: ಬಿಜೆಪಿಯೊಳಗೆ ಭುಗಿಲೇಳುತ್ತಿದೆ ಅಸಮಾಧಾನದ ಕಿಡಿ

ಮಧ್ಯಪ್ರದೇಶ: ಬಿಜೆಪಿಯೊಳಗೆ ಭುಗಿಲೇಳುತ್ತಿದೆ ಅಸಮಾಧಾನದ ಕಿಡಿ

- Advertisement -
- Advertisement -

ಮಧ್ಯಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ ಜೋರಾಗುತ್ತಿದೆ. ಒಬ್ಬೊಬ್ಬರಾಗಿಯೇ ಬಂಡಾಯ ಏಳುವ ಸೂಚನೆ ಕಂಡುಬರುತ್ತಿದೆ.

ಪಕ್ಷದ ಮತ್ತೋರ್ವ ಹಿರಿಯ ನಾಯಕ, ಕಟ್ನಿ ಜಿಲ್ಲೆಯ ವಿಜಯರಾಘವಗಢ ಕ್ಷೇತ್ರದ ಮಾಜಿ ಶಾಸಕ ಧ್ರುವ ಪ್ರತಾಪ್ ಸಿಂಗ್ ಇದೀಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಕಳೆದ ಎಂಟು ವರ್ಷಗಳಿಂದ ಪಕ್ಷದಲ್ಲಿ ತಮ್ಮನ್ನು ದೂರವಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ದೀಪಕ್ ಜೋಶಿ (ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರಿದವರು) ಸೇರಿದಂತೆ ಹೆಚ್ಚಿನ ಅತೃಪ್ತ ಬಿಜೆಪಿ ನಾಯಕರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ನಿಷ್ಠರ ಪ್ರಭಾವ ಹೆಚ್ಚುತ್ತಿದೆ ಎಂದು ದೂಷಿಸಿದ್ದಾರೆ. ಪ್ರತಾಪ್ ಸಿಂಗ್ (2003 ರಲ್ಲಿ ವಿಜಯರಾಘವಗಢ ಕ್ಷೇತ್ರದಲ್ಲಿ ಗೆದ್ದವರು) ಇದೇ ಆರೋಪಗಳನ್ನು ಮಾಡಿದ್ದಾರೆಂದು ವರದಿಯಾಗಿದೆ.

ಕಾಂಗ್ರೆಸ್ ತೊರೆದು 2014 ರಲ್ಲಿ ಬಿಜೆಪಿ ಸೇರಿದ ಹಾಲಿ ಶಾಸಕ ಮತ್ತು ಮಾಜಿ ಸಚಿವ ಸಂಜಯ್ ಪಾಠಕ್ ಅವರ ಪ್ರಾಬಲ್ಯ ಕಟ್ನಿ ಜಿಲ್ಲೆಯಲ್ಲಿ ಇದೆ.

“ಕಳೆದ ಎಂಟು ವರ್ಷಗಳಿಂದ ಮತ್ತು ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪಕ್ಷವು ನನ್ನನ್ನು ಯಾವುದೇ ಕೆಲಸಕ್ಕೆ ಕರೆಯಲಿಲ್ಲ. ಬಿಜೆಪಿಯವರು ನನ್ನನ್ನು ಮರೆತಂತಿದೆ. ಎಂಟು ವರ್ಷಗಳ ಹಿಂದೆ (ಸಂಜಯ್ ಪಾಠಕ್ ಬಿಜೆಪಿಗೆ ಸೇರುವ ಮೊದಲು) ನಾನು ಕಟ್ನಿ ಜಿಲ್ಲೆಯಲ್ಲಿನ ಪ್ರತಿಯೊಂದು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಈಗ ವಿಷಯಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ, ಪ್ರಸ್ತುತ ಪಕ್ಷದ ರಾಜ್ಯ ಅಧ್ಯಕ್ಷ ವಿಡಿ ಶರ್ಮಾ (ಕಟ್ನಿ ಜಿಲ್ಲೆಯ ಸ್ಥಳೀಯ ಸಂಸದರೂ ಸಹ) ನನ್ನನ್ನು ಗುರುತಿಸುತ್ತಿಲ್ಲ” ಎಂದು ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯದ ಪಕ್ಷದ ಉನ್ನತ ನಾಯಕತ್ವವನ್ನು ಭೇಟಿ ಮಾಡಲು ಪ್ರಸ್ತುತ ಭೋಪಾಲ್‌ನಲ್ಲಿರುವ ಸಿಂಗ್, ಕಾಂಗ್ರೆಸ್ಸೇತರ ಕುಟುಂಬದಿಂದ ಬಂದವರು ಮತ್ತು 1980ರಿಂದ ಬಿಜೆಪಿಯಲ್ಲಿದ್ದಾರೆ. ಅವರು ವಿಜಯರಾಘವ್‌ಗಢ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್‌ನ ಹಾಲಿ ಶಾಸಕ ಮತ್ತು ಕ್ಯಾಬಿನೆಟ್ ಸಚಿವ ಸತ್ಯೇಂದ್ರ ಪಾಠಕ್ ಅವರನ್ನು 2003ರಲ್ಲಿ ಸೋಲಿಸಿದವರು.

ಇದನ್ನೂ ಓದಿರಿ: ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ ಮನೆ ಮೇಲೆ ದಾಳಿ

2008ರ ಚುನಾವಣೆಯಲ್ಲಿ ಅದೇ ಕ್ಷೇತ್ರದಲ್ಲಿ ಪಾಠಕ್ ಅವರ ಮಗ ಸಂಜಯ್ ಪಾಠಕ್ (ಪ್ರಸ್ತುತ ಸಂಸದರಲ್ಲಿ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು) ವಿರುದ್ಧ ಸೋತರು. 2013ರಲ್ಲಿಯೂ ಗೆದ್ದಿದ್ದ ಸಂಜಯ್, ಕಾಂಗ್ರೆಸ್ ತೊರೆದು 2014ರಲ್ಲಿ ಬಿಜೆಪಿ ಸೇರಿದರು. ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು.

2014ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಸಂಜಯ್ ಪಾಠಕ್ ಅವರು ಎಂಟು ವರ್ಷಗಳಿಂದ ಕಟ್ನಿ ಜಿಲ್ಲೆಯಲ್ಲಿ ಪ್ರಾಬಲ್ಯ ಮೆರೆದಿದ್ದಾರೆ ಎಂದು ಶಾಸಕ ಧ್ರುವ ಪ್ರತಾಪ್ ಸಿಂಗ್ ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...