Homeಮುಖಪುಟಮಧ್ಯಪ್ರದೇಶ: ಅಪ್ರಾಪ್ತ ಬಾಲಕಿಯ ಕೊಲೆ ಭೇದಿಸಲು ‘ಬಾಬಾ’ ಬಳಿ ತೆರಳಿದ ಪೊಲೀಸ್‌ ಅಧಿಕಾರಿ!

ಮಧ್ಯಪ್ರದೇಶ: ಅಪ್ರಾಪ್ತ ಬಾಲಕಿಯ ಕೊಲೆ ಭೇದಿಸಲು ‘ಬಾಬಾ’ ಬಳಿ ತೆರಳಿದ ಪೊಲೀಸ್‌ ಅಧಿಕಾರಿ!

- Advertisement -
- Advertisement -

17 ವರ್ಷದ ಅಪ್ರಾಪ್ತ ಬಾಲಕಿಯ ಕೊಲೆಯನ್ನು ಭೇದಿಸಲು ಪೊಲೀಸ್ ಅಧಿಕಾರಿಯೊಬ್ಬರು ಸ್ವಘೋಷಿತ ‘ಬಾಬಾ’ ಬಳಿ ತೆರಳಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಸ್ವಘೋಷಿತ ಪವಾಡ ಪುರುಷನ ಮುಂದೆ ಕೂತು ಪರಿಹಾರ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದ್ದು ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಘಟನೆಯು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಮಿತಾ ಪೊಲೀಸ್ ಠಾಣೆಯ ಬಮಿತಾ ಪೊಲೀಸ್ ಠಾಣೆಯ ಪ್ರಭಾರ ಎಎಸ್‌ಐ ಎಎಸ್‌ಐ ಅನಿಲ್ ಶರ್ಮಾ ಅವರು ಸ್ವಘೋಷಿತ ಪವಾಡ ಪುರುಷನ ಬಳಿ ತೆರಳಿ ಪರಿಹಾರ ಕೇಳಿದ್ದಾರೆ. ಅವರು ಬಾಬಾ ಮುಂದೆ ಕೂತು ಪರಿಹಾರ ಹೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ಹಿನ್ನಲೆಯಲ್ಲಿ ಅನಿಲ್ ಶರ್ಮಾ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅಮಾನತುಗೊಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಜುಲೈ 28 ರಂದು ಜಿಲ್ಲೆಯ ಬಮಿತಾ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಾ ಪುರ್ವಾ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯ ಶವವು ಬಾವಿಯಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯ ನಂತರ, ಪೊಲೀಸರು ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಗ್ರಾಮದ ಮೂವರು ಯುವಕರನ್ನು ಬಂಧಿಸಿದ್ದರು. ಆದರೆ ಘಟನೆ ನಡೆದ ದಿನ ಯುವಕರ ಮೊಬೈಲ್ ಲೊಕೇಶನ್ ಸ್ಥಳದ ಸಮೀಪ ಪತ್ತೆಯಾಗದ ಕಾರಣ ಪೊಲೀಸರು ಅವರನ್ನು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಬಹುಜನ ಭಾರತ; ಬಹುತ್ವದ ಮೇಲೆ ಬುಲ್ಡೋಜರ್ ಹರಿಸಿರುವ ಬಾಬಾ-ಮಾಮಾಗಳು

ಕೆಲವು ದಿನಗಳ ನಂತರ ಇದ್ದಕ್ಕಿದ್ದಂತೆ ಪೊಲೀಸರು ಅಪ್ರಾಪ್ತ ಬಾಲಕಿಯ ಸೋದರ ಸಂಬಂಧಿಯಾದ ತಿರತ್ ಅಹಿರ್ವಾರ್ ಅವರನ್ನು ಬಂಧಿಸಿದ್ದರು. ಅವರು ತಮ್ಮ ಸೊಸೆಯು ಯಾರೊಂದಿಗೋ ಅಕ್ರಮ ಸಂಬಂಧವನ್ನು ಹೊಂದಿದ್ದಾರೆಂದು ಶಂಕಿಸಿ ಕತ್ತು ಹಿಸುಕಿ ಕೊಂದಿದ್ದು, ಬಳಿಕ ಶವವನ್ನು ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ಹೇಳಿದ್ದರು.

 

ಆದರೆ ಪೊಲೀಸರು ಪ್ರಕರಣದ ತನಿಖೆ ನಡೆಸಿ ತಿರತ್‌ ಅವರನ್ನು ಬಂಧಿಸಿದ ರೀತಿ ಕುಟುಂಬಸ್ಥರಿಗೆ ಅಚ್ಚರಿ ಮೂಡಿಸಿದೆ. ಈ ಮಧ್ಯೆ ಎಎಸ್‌ಐ ಅನಿಲ್ ಶರ್ಮಾ ಅವರು ಪ್ರಕರಣವನ್ನು ಭೇದಿಸಲು ಬಾಬಾ ಪಾಂಡೋಖರ್ ಸರ್ಕಾರ್ ಅವರ ಸಹಾಯವನ್ನು ಕೋರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಅಂಬೇಡ್ಕರ್‌‌ ಸ್ವಾಮಿಜಿಯ ಆಶಿರ್ವಾದ ಪಡೆದಿಲ್ಲ; ಚಿತ್ರದಲ್ಲಿ ಇರುವುದು ಬಾಬಾ ಸಾಹೇಬ್ ಅಲ್ಲ

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಸ್‌ಪಿ ಸಚಿನ್ ಶರ್ಮಾ ಅವರು ಎಎಸ್‌ಐ ಅನಿಲ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ. ಪ್ರಕರಣದ ತನಿಖೆ ಮತ್ತು ಕೊಲೆ ಪ್ರಕರಣವನ್ನು ಭೇದಿಸಲು ತಂಡವನ್ನು ರಚಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...