Homeಮುಖಪುಟಮಹಾರಾಷ್ಟ್ರ: ಕಡಲ ತೀರಕ್ಕೆ ತೇಲಿ ಬಂದ ಆಸ್ಟ್ರೇಲಿಯಾ ವ್ಯಕ್ತಿಯ ಎಕೆ-47 ಗನ್, ಬುಲೆಟ್‌ ಹೊತ್ತ ಹಡಗು

ಮಹಾರಾಷ್ಟ್ರ: ಕಡಲ ತೀರಕ್ಕೆ ತೇಲಿ ಬಂದ ಆಸ್ಟ್ರೇಲಿಯಾ ವ್ಯಕ್ತಿಯ ಎಕೆ-47 ಗನ್, ಬುಲೆಟ್‌ ಹೊತ್ತ ಹಡಗು

- Advertisement -
- Advertisement -

ಅನುಮಾಸ್ಪದ ಹಡಗೊಂದು ಮೂರು ಎಕೆ-47 ಗನ್ ಮತ್ತು ಬುಲೆಟ್‌ಗಳನ್ನು ಹೊತ್ತು ಮಹಾರಾಷ್ಟ್ರ ಕಡಲ ತೀರಕ್ಕೆ ಬಂದಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಅದು ಆಸ್ಟ್ರೇಲಿಯಾದ ಪ್ರಜೆ ಜನ ಲಾಂಡರ್‌ಗನ್ ಎಂಬುವವರಿಗೆ ಸೇರಿದ್ದು ಎಂದು ಗೃಹ ಸಚಿವ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

16 ಅಡಿ ಉದ್ದದ ಹಡಗಿನಲ್ಲಿ ಗನ್‌ಗಳು, ಆಯುಧಗಳಿದ್ದು ಅದು ಮಹಾರಾಷ್ಟ್ರದ ರಾಯ್‌ಗಡ್ ಜಿಲ್ಲೆಯ ಹರಿಹರೇಶ್ವರ್ ಸಮುದ್ರದಂಡೆಗೆ ತೇಲಿ ಬಂದಿದೆ. ಅದನ್ನು ಸ್ಥಳೀಯ ಮೀನುಗಾರರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಯ್‌ಗಡ್ ಕ್ಷೇತ್ರದ ಶಾಸಕಿ ಅದಿತಿ ತತ್ಕರೆ ಸಿಎಂ ಏಕ್‌ನಾಥ್ ಶಿಂಧೆ ಬಳಿ ಮನವಿ ಮಾಡಿದ್ದಾರೆ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಇದು ದೊಡ್ಡ ರಕ್ಷಣಾ ಬೆದರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಇದರಿಂದ ಯಾವುದೇ ರಕ್ಷಣಾ ಬೆದರಿಕೆಯಿಲ್ಲ ಎಂದು ಡಿಸಿಎಂ ಫಡ್ನವಿಸ್ ಹೇಳಿದ್ದಾರೆ.

ರಾಜ್ಯ ರಾಜಧಾನಿ ಮುಂಬೈನಿಂದ 190 ಕಿ.ಮೀ ದೂರದಲ್ಲಿರುವ ಸಮುದ್ರ ದಂಡೆಗೆ ನಾವಿಕನಿಲ್ಲದ ಹಡಗು ಬಂದಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಆ ನಂತರ ರಕ್ಷಣ ದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ.

ಮುನ್ನಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಹೈ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: ಬಿಹಾರ ಸಂಪುಟ ವಿಸ್ತರಣೆಗೆ ಆಕ್ಷೇಪ: ಪಕ್ಷ ತೊರೆಯುವುದಾಗಿ ಎಚ್ಚರಿಸಿದ ಜೆಡಿಯು ಶಾಸಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read