Homeಮುಖಪುಟಬಿಹಾರ ಸಂಪುಟ ವಿಸ್ತರಣೆಗೆ ಆಕ್ಷೇಪ: ಪಕ್ಷ ತೊರೆಯುವುದಾಗಿ ಎಚ್ಚರಿಸಿದ ಜೆಡಿಯು ಶಾಸಕಿ

ಬಿಹಾರ ಸಂಪುಟ ವಿಸ್ತರಣೆಗೆ ಆಕ್ಷೇಪ: ಪಕ್ಷ ತೊರೆಯುವುದಾಗಿ ಎಚ್ಚರಿಸಿದ ಜೆಡಿಯು ಶಾಸಕಿ

- Advertisement -
- Advertisement -

ಬಿಹಾರದಲ್ಲಿ ಹೊಸದಾಗಿ ರಚನೆಯಾಗಿರುವ ಮಹಾಘಟಬಂಧನ್ ಸರ್ಕಾರದ ಸಂಪುಟ ವಿಸ್ತರಣೆಗೆ ಆರಂಭದಲ್ಲಿಯೇ ಆಕ್ಷೇಪಣೆ ವ್ಯಕ್ತವಾಗಿದೆ. ಜೆಡಿಯು ಪಕ್ಷದ ಶಾಸಕಿ ಲೇಶಿ ಸಿಂಗ್‌ರವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ಮತ್ತೊಬ್ಬ ಶಾಸಕಿ ಭೀಮಾ ಭಾರ್ತಿ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ತನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದರಿಂದ ಅಸಮಾಧಾನಗೊಂಡಿರುವ ಅವರು ಅದೇ ಸಮಯಲ್ಲಿ ಲೇಶಿ ಸಿಂಗ್‌ರವರನ್ನು ಮೂರನೇ ಬಾರಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಹಿಂದುಳಿದ ಸಮುದಾಯಗಳಿಗೆ ಸೇರಿದ್ದರಿಂದ ನಮಗೆ ಸಚಿವ ಸ್ಥಾನ ನೀಡುತ್ತಿಲ್ಲವೇ? ಆಗಾಗ್ಗೆ ಪಕ್ಷದ ವಿರುದ್ಧ ಹೇಳಿಕೆ ನೀಡುವು ಲೇಶಿ ಸಿಂಗ್‌ರವರನ್ನು ಏಕೆ ಸಂಪುಟಕ್ಕೆ ಸೇರಿಸಿಕೊಂಡಿದ್ದೀರಿ? ಅವರನ್ನು ತಕ್ಷಣವೇ ಕೈಬಿಡದಿದ್ದರೆ ನಾನು ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಆರ್‌ಜೆಡಿ ಪಕ್ಷದ ಶಾಸಕ ಕಾರ್ತಿಕೇಯ ಸಿಂಗ್‌ರವರನ್ನು ಕಾನೂನು ಸಚಿವರನ್ನಾಗಿ ಮಾಡಿರುವುದಕ್ಕೂ ಕೂಡ ಆಕ್ಷೇಪ ವ್ಯಕ್ತವಾಗಿದ್ದು, ಅಪಹರಣ ಪ್ರಕರಣ ಎದುರಿಸುತ್ತಿರುವವರಿಗೆ ಆ ಸಚಿವ ಸ್ಥಾನ ಏಕೆ ನೀಡಲಾಗಿದೆ ಎಂದು ಪ್ರಶ್ನಿಸಲಾಗಿದೆ.

ಬಿಹಾರದಲ್ಲಿ ಡಾನ್ ಎಂದು ಕರೆಸಿಕೊಳ್ಳುವ ಅನಂತ್‌ ಸಿಂಗ್‌ರವರ ಬಲಗೈ ಬಂಟನಾಗಿ ಕಾರ್ತಿಕೇಯ ಸಿಂಗ್‌ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕಿಡ್ನಾಪ್ ಪ್ರಕರಣದಲ್ಲಿ ಅವರ ವಿರುದ್ಧ ವಾರೆಂಟ್ ಇದ್ದಾಗ ತಲೆಮರೆಸಿಕೊಂಡಿದ್ದರು. ಅಂತವರಿಗೆ ಕಾನೂನು ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಆರ್‌.ಕೆ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಹಾರದ ಆರ್‌ಜೆಡಿ ಪಕ್ಷಕ್ಕೆ 16 ಸಚಿವ ಸ್ಥಾನ, ಜೆಡಿಯುಗೆ 11, ಕಾಂಗ್ರೆಸ್‌ಗೆ 02 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ ಹಾಗೂ ಸ್ವತಂತ್ರ ಶಾಸಕನಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ. ಒಟ್ಟು 31 ಜನ ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸಿದ್ದು ಇನ್ನೂ 5 ಸ್ಥಾನಗಳನ್ನು ಖಾಲಿ ಇಡಲಾಗಿದೆ.

ಸಿಎಂ ನಿತೀಶ್ ಕುಮಾರ್ ಗೃಹ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡರೆ, ಡಿಸಿಎಂ ತೇಜಸ್ವಿ ಯಾದವ್ ಆರೋಗ್ಯ ಖಾತೆ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸಚಿವನ ವಜಾಕ್ಕೆ ಆಗ್ರಹಿಸಿ 75 ಗಂಟೆಗಳ ಧರಣಿ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read