Homeಮುಖಪುಟಮಹಾರಾಷ್ಟ್ರ: ಅಜಿತ್ ಬಣಕ್ಕೆ ಗಡಿಯಾರದ ಚಿಹ್ನೆ; ಶರದ್ ಪವಾರ್ ಬಣಕ್ಕೆ ಕಹಳೆ

ಮಹಾರಾಷ್ಟ್ರ: ಅಜಿತ್ ಬಣಕ್ಕೆ ಗಡಿಯಾರದ ಚಿಹ್ನೆ; ಶರದ್ ಪವಾರ್ ಬಣಕ್ಕೆ ಕಹಳೆ

- Advertisement -
- Advertisement -

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳು ಸದ್ಯಕ್ಕೆ ಚುನಾವಣಾ ಆಯೋಗವು ನಿರ್ಧರಿಸಿದಂತೆ ಉಳಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಲಹೆ ಕೋರ್ಟ್ ನೀಡಿದ್ದು, ಈ ಆದೇಶವು ತಾತ್ಕಾಲಿಕವಾಗಿದ್ದು, ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಪಕ್ಷದ ಶರದ್ ಪವಾರ್ ಬಣವು ಸಲ್ಲಿಸಿದ ಸವಾಲಿನ ವಿಚಾರಣೆಯ ಸಂದರ್ಭದಲ್ಲಿ ಹೊರಡಿಸಿದ ನ್ಯಾಯಾಲಯದ ಆದೇಶಕ್ಕೆ ಕಕ್ಷಿದಾರರು ಪ್ರತಿಕ್ರಿಯಿಸಿದ ನಂತರ ಈ ವಿಚಾರವನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಅಜಿತ್ ಪವಾರ್ ಬಣವು ಗಡಿಯಾರ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ, ಅವರು ಈ ವಿಷಯವು ನ್ಯಾಯಾಂಗ ವಿಚಾರಣೆಯಲ್ಲಿದೆ ಎಂದು ಹೇಳುವ ಜಾಹೀರಾತುಗಳನ್ನು ಪ್ರಕಟಿಸಬೇಕು. ಚುನಾವಣಾ ಸಂಬಂಧಿತ ಎಲ್ಲಾ ದೃಶ್ಯ-ಶ್ರಾವ್ಯ ಜಾಹೀರಾತುಗಳು ಮತ್ತು ಬ್ಯಾನರ್‌ಗಳು, ಪೋಸ್ಟರ್‌ಗಳಂತಹ ಪ್ರಚಾರ ಸಾಮಗ್ರಿಗಳಲ್ಲಿ ಸಾರ್ವಜನಿಕ ಸೂಚನೆಗಳು ಇರಬೇಕು ಎಂದು ಹೇಳಿದೆ.

ಶರದ್ ಪವಾರ್ ಬಣವು “ಮನುಷ್ಯ ಊದುವ ಕಹಳೆ” ಚಿಹ್ನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಶರದ್ ಚಂದ್ರ ಪವಾರ್) ಹೆಸರನ್ನು ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ. ಅವುಗಳನ್ನು ಯಾವುದೇ ಪಕ್ಷಕ್ಕೆ ಮರುಹಂಚಿಕೆ ಮಾಡದಂತೆ ಚುನಾವಣಾ ಆಯೋಗವನ್ನು ಕೇಳಿದೆ.

ಶರದ್ ಪವಾರ್ ಸ್ಥಾಪಿಸಿದ ಅವಿಭಜಿತ ಎನ್‌ಸಿಪಿಯು ತನ್ನ ಚುನಾವಣಾ ಚಿಹ್ನೆಯಾಗಿ “ಗಡಿಯಾರ” ಹೊಂದಿತ್ತು, ಇದನ್ನು ಕಳೆದ ತಿಂಗಳು ಚುನಾವಣಾ ಆಯೋಗವು ಪಕ್ಷದ ಹೆಸರಿನೊಂದಿಗೆ ಅಜಿತ್ ಪವಾರ್ ಬಣಕ್ಕೆ ನೀಡಿತು.

ಇದನ್ನೂ ಓದಿ; ಸಿಎಎ ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...